Karnataka news paper

ವಿಚ್ಛೇದನ ಕೇಳಿದ್ದು ಸಮಂತಾ: ಬಹುದೊಡ್ಡ ರಹಸ್ಯ ಬಿಚ್ಚಿಟ್ಟ ನಾಗಾರ್ಜುನ!


ಹೈಲೈಟ್ಸ್‌:

  • ನಾಗ ಚೈತನ್ಯ – ಸಮಂತಾ ದಾಂಪತ್ಯದಲ್ಲಿ ಬಿರುಕು
  • ದೂರಾದ ಸಮಂತಾ ಮತ್ತು ನಾಗ ಚೈತನ್ಯ
  • ವಿಚ್ಛೇದನ ಕೇಳಿದ್ದು ಸಮಂತಾ ಎಂದ ನಾಗಾರ್ಜುನ

ಟಾಲಿವುಡ್ ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಶಾಕಿಂಗ್ ನ್ಯೂಸ್ ಕೊಟ್ಟರು. ಕ್ಯೂಟ್ ಕಪಲ್ ಅಂತಲೇ ಕರೆಯಿಸಿಕೊಳ್ಳುತ್ತಿದ್ದ ನಾಗ ಚೈತನ್ಯ ಮತ್ತು ಸಮಂತಾ ಆಘಾತಕಾರಿ ವಿಚಾರವನ್ನೇ ಜಗಜ್ಜಾಹೀರು ಮಾಡಿದರು. ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿರುವುದಾಗಿ ನಾಗ ಚೈತನ್ಯ ಹಾಗೂ ಸಮಂತಾ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಇಬ್ಬರ ಮಧ್ಯೆ ಬಿರುಕು ಮೂಡಲು ಕಾರಣವಾಗಿದ್ದೇನು ಎಂಬ ಪ್ರಶ್ನೆ ಈಗಲೂ ಅಭಿಮಾನಿಗಳ ಮನಸ್ಸಿನಲ್ಲಿ ಕೊರೆಯುತ್ತಲೇ ಇದೆ.

ನಾಗ ಚೈತನ್ಯ ಮತ್ತು ಸಮಂತಾ ದೂರಾಗುತ್ತಿರುವ ಕುರಿತಾಗಿ ನಾನಾ ಗಾಸಿಪ್‌ಗಳು ಈವರೆಗೂ ತೆಲುಗು ಸಿನಿ ಅಂಗಳದಲ್ಲಿ ಹರಿದಾಡುತ್ತಿವೆ. ಆದರೆ, ತಾವು ಬೇರೆ ಬೇರೆಯಾಗಿದ್ದು ಯಾಕೆ ಎಂಬುದರ ಬಗ್ಗೆ ನಾಗ ಚೈತನ್ಯ ಆಗಲಿ, ಸಮಂತಾ ಆಗಲಿ ತುಟಿಕ್ ಪಿಟಿಕ್ ಎಂದಿಲ್ಲ. ಇದೀಗ ಮಗನ ವಿಚ್ಛೇದನ ವಿಚಾರವಾಗಿ ನಟ ನಾಗಾರ್ಜುನ ಮಾತನಾಡಿದ್ದಾರೆ. ‘’ವಿಚ್ಛೇದನ ಕೇಳಿದ್ದು ಸಮಂತಾ’’ ಎಂದು ಸಂದರ್ಶನವೊಂದರಲ್ಲಿ ನಾಗಾರ್ಜುನ ಬಾಯ್ಬಿಟ್ಟಿದ್ದಾರೆ.

ಮಗಳಿಗೆ ವಿಚ್ಛೇದನದ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಬುದ್ಧಿ ಹೇಳಿದ್ದ ನಟಿ ಸಮಂತಾ ತಂದೆ
ಸಂದರ್ಶನದಲ್ಲಿ ನಾಗಾರ್ಜುನ ಹೇಳಿದ್ದೇನು?
‘’ವಿಚ್ಛೇದನವನ್ನು ಮೊದಲು ಬಯಸಿದ್ದು ಸಮಂತಾ. ಹೀಗಾಗಿ ಅವರೇ ಮೊದಲು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ಸಮಂತಾ ತೆಗೆದುಕೊಂಡ ನಿರ್ಧಾರವನ್ನು ನಾಗ ಚೈತನ್ಯ ಒಪ್ಪಿಕೊಂಡ. ಆದರೆ, ನಾಗ ಚೈತನ್ಯಗೆ ನನ್ನ ಬಗ್ಗೆ ತುಂಬಾ ಚಿಂತೆಯಾಗಿತ್ತು. ನಾನು ಏನೆಂದು ತಿಳಿದುಕೊಳ್ಳುತ್ತೇನೋ.. ಕುಟುಂಬದ ಗೌರವಕ್ಕೆ ಧಕ್ಕೆಯಾಗುತ್ತಾ ಎಂಬಿತ್ಯಾದಿ ವಿಚಾರಗಳು ನಾಗ ಚೈತನ್ಯ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಹೀಗಾಗಿ, ನಾನು ಬೇಸರ ಮಾಡಿಕೊಳ್ಳುತ್ತೇನೆ ಎಂದು ನಾಗ ಚೈತನ್ಯ ನನಗೆ ತುಂಬಾ ಸಾಂತ್ವನ ಹೇಳಿದ್ದ’’

ಸಮಂತಾ-ನಾಗ ಚೈತನ್ಯ ದೂರಾಗಿದ್ದು ದುರಾದೃಷ್ಟಕರ: ಮನಸ್ಸಿನ ಮಾತು ಹೊರಹಾಕಿದ ನಾಗಾರ್ಜುನ
‘’ನಾಲ್ಕು ವರ್ಷಗಳಿಂದ ನಾಗ ಚೈತನ್ಯ ಹಾಗೂ ಸಮಂತಾ ಅನ್ಯೋನ್ಯವಾಗಿದ್ದರು. ಅವರಿಬ್ಬರ ಮಧ್ಯೆ ಯಾವುದೇ ಸಮಸ್ಯೆಗಳು ಇರಲಿಲ್ಲ. ಇಬ್ಬರೂ ತುಂಬಾ ಚೆನ್ನಾಗಿದ್ದರು. ಆದರೆ, ಈ ನಿರ್ಧಾರ ತೆಗೆದುಕೊಳ್ಳೋಕೆ ಏನು ಕಾರಣವಾಯಿತು ಅನ್ನೋದು ನನಗೂ ಗೊತ್ತಿಲ್ಲ. ಹಾಗ್ನೋಡಿದ್ರೆ, 2021ರ ಹೊಸ ವರ್ಷವನ್ನು ಗ್ರ್ಯಾಂಡ್‌ ಆಗಿ ಸೆಲೆಬ್ರೇಟ್ ಮಾಡುವ ಮೂಲಕ ಇಬ್ಬರೂ ಒಟ್ಟಿಗೆ ಬರಮಾಡಿಕೊಂಡರು. ಬಹುಶಃ ಅದಾದ ನಂತರ ಸಮಸ್ಯೆಯಾಗಿರಬೇಕು’’ ಎಂದು ಸಂದರ್ಶನದಲ್ಲಿ ನಾಗಾರ್ಜುನ ಹೇಳಿದ್ದಾರೆ.

‘ಸಮಂತಾ ಖುಷಿಯಾಗಿದ್ದರೆ, ನಾನು ಖುಷಿಯಾಗಿದ್ದೇನೆ’- ನಟ ನಾಗ ಚೈತನ್ಯ ಹೀಗ್ಯಾಕೆ ಹೇಳಿದ್ರು?
ಅಂದು ಮನಸ್ಸಿನ ಮಾತನ್ನು ಹೊರ ಹಾಕಿದ ನಾಗಾರ್ಜುನ
ಬೇರೆ ಬೇರೆಯಾಗುತ್ತಿರುವ ಬಗ್ಗೆ ಸಮಂತಾ ಹಾಗೂ ನಾಗ ಚೈತನ್ಯ ಘೋಷಿಸಿದ ಬಳಿಕ ‘’ಭಾರವಾದ ಹೃದಯದಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಸಮಂತಾ ಮತ್ತು ನಾಗ ಚೈತನ್ಯ ನಡುವೆ ಏನಾಗಿದ್ಯೋ, ಅದು ತೀರಾ ದುರಾದೃಷ್ಟಕರ ಸಂಗತಿ. ಗಂಡ ಮತ್ತು ಹೆಂಡತಿ ಮಧ್ಯೆ ನಡೆಯುವ ವಿಚಾರ ತೀರಾ ವೈಯಕ್ತಿಕವಾದದ್ದು. ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ನನಗೆ ತುಂಬಾ ಪ್ರಿಯವಾದವರು. ಸಮಂತಾ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ನನ್ನ ಕುಟುಂಬ ಯಾವಾಗಲೂ ಮೆಲುಕು ಹಾಕುತ್ತದೆ. ಸಮಂತಾ ನಮ್ಮೊಂದಿಗೆ ಸದಾ ಪ್ರೀತಿಪ್ರಾತಳಾಗಿ ಇರುತ್ತಾಳೆ. ದೇವರು ಸಮಂತಾ ಮತ್ತು ನಾಗ ಚೈತನ್ಯಗೆ ಶಕ್ತಿಯನ್ನು ನೀಡಲಿ’’ ಎಂದು ನಾಗಾರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಪತಿಯಿಂದ ದೂರಾದ ಬಳಿಕ ಮನಃ ಶಾಂತಿಗಾಗಿ ಆಶ್ರಮಕ್ಕೆ ಭೇಟಿ ಕೊಟ್ರಾ ನಟಿ ಸಮಂತಾ?
ಪೋಸ್ಟ್ ಡಿಲೀಟ್ ಮಾಡಿರುವ ಸಮಂತಾ
ಅಕ್ಟೋಬರ್ 2ರಂದು ಸಮಂತಾ ತಾವು ನಾಗ ಚೈತನ್ಯರಿಂದ ದೂರಾಗುತ್ತಿರುವ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದರು. ಇದೀಗ ಆ ವಿಚ್ಛೇದನ ಪೋಸ್ಟ್‌ಅನ್ನು ನಟಿ ಸಮಂತಾ ಡಿಲೀಟ್ ಮಾಡಿದ್ದಾರೆ. ಹೀಗಾಗಿ, ಸಮಂತಾ ಮತ್ತು ನಾಗ ಚೈತನ್ಯ ಮತ್ತೆ ಒಂದಾಗಬಹುದಾ ಎಂಬ ನಿರೀಕ್ಷೆ ಅಭಿಮಾನಿಗಳಿಗಿದೆ.



Read more

[wpas_products keywords=”deal of the day party wear dress for women stylish indian”]