Karnataka news paper

ಜನಾರ್ದನ ಪೂಜಾರಿ ನೇತೃತ್ವದ ಸ್ವಾಭಿಮಾನಿ ನಡಿಗೆ ಯಶಸ್ವಿ; ಬೆಂಬಲ‌ ಸೂಚಿಸಿ ಕೈಕೊಟ್ಟ ಬಿಜೆಪಿ!


ಮಂಗಳೂರು: ಗಣರಾಜ್ಯೋತ್ಸವದ ಪರೇಡ್‌ಗೆ ಕೇಂದ್ರ ಸರ್ಕಾರದಿಂದ ನಾರಾಯಣ ಗುರು ಟ್ಯಾಬ್ಲೋ ತಿರಸ್ಕಾರ ಖಂಡಿಸಿ ಜನಾರ್ದನ ಪೂಜಾರಿ ನೇತೃತ್ವದ ಸ್ವಾಭಿಮಾನಿ ನಡಿಗೆ ಯಶಸ್ವಿಯಾಗಿದೆ.

ಮಂಗಳೂರಿನ ಕಂಕನಾಡಿ ಗರೋಡಿ ದೇವಸ್ಥಾನದಿಂದ ನಾರಾಯಣ ಗುರು ಟ್ಯಾಬ್ಲೋಗೆ ಬುಧವಾರ ಮಾಜಿ ಕೇಂದ್ರ ಸಚಿವ ಕುದ್ರೋಳಿ ಕ್ಷೇತ್ರದ ರೂವಾರಿ ಜನಾರ್ದನ ಪೂಜಾರಿ ಚಾಲನೆ ನೀಡಿದ್ರು. ಯಾತ್ರೆ ಪಂಪ್‌ವೆಲ್ ತಲುಪಿದಾಗ ಜೆಸಿಬಿ ಮೂಲಕ ನಾರಾಯಣ ಗುರುಗಳ ಟ್ಯಾಬ್ಲೋಗೆ ಹೂವಿನ ಸುರಿಮಳೆಗೈಯ್ಯಲಾಯಿತು. ಬಳಿಕ ವಾಹನ ಜಾಥಾ ಜ್ಯೋತಿ, ಪಿವಿಎಸ್, ಲಾಲ್ ಬಾಗ್‌, ಲೇಡಿಹಿಲ್, ಮಾರ್ಗವಾಗಿ ಕುದ್ರೋಳಿ ದೇವಸ್ಥಾನದಲ್ಲಿ ಸಮಾಪನಗೊಂಡಿತು.
ಗುರುವಿನೆಡೆಗೆ ‘ಸ್ವಾಭಿಮಾನದ ನಡಿಗೆ’ ಮಂಗಳೂರಿನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ಖಂಡಿಸಿ ಜಾಥಾ
ಗುರುಗಳ ಮೆರವಣಿಗೆಯಲ್ಲಿ ಜಿಲ್ಲೆಯ ಬಿಲ್ಲವ ನಾಯಕರು, ಕಾಂಗ್ರೆಸ್ ಮುಖಂಡರು, ವಿಶ್ವ ಹಿಂದೂ ಪರಿಷತ್ ಮುಖಂಡರು ಭಾಗವಹಿಸಿದ್ದರು. ಮಾಜಿ ಸಚಿವ ಬಿ ರಮಾನಾಥ ರೈ, ಶಾಸಕ ಯು.ಟಿ.ಖಾದರ್, ಎಂಎಲ್‌ಸಿ ಹರೀಶ್ ಕುಮಾರ್, ವಸಂತ ಬಂಗೇರಾ, ವಿಎಚ್‌ಪಿ ಮುಖಂಡ ಶರಣ್ ಪಂಪ್ ವೆಲ್, ಎಂ.ಬಿ ಪುರಾಣಿಕ್ ಸೇರಿ ಹಲವರು ಭಾಗವಹಿಸಿದ್ದರು. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆದ ಸ್ವಾಭಿಮಾನದ ನಡಿಗೆಯಲ್ಲಿ ಹಳದಿ ಧ್ವಜ ‌ಮತ್ತು ಶಾಲು ಮಾತ್ರ ಬಳಸಿ ಸ್ವಾಭಿಮಾನಿ ನಡಿಗೆ ಸಾಗಿತು.

ಹತ್ತಕ್ಕೂ ಹೆಚ್ಚು ನಾರಾಯಣ ಗುರುಗಳ ಟ್ಯಾಬ್ಲೋಗಳು, ದ.ಕ, ಉಡುಪಿ, ಚಿಕ್ಕಮಗಳೂರು ಬಿಲ್ಲವ ಮುಖಂಡರು, ಇನ್ನಿತರ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಆರಂಭದಲ್ಲಿ ಬಿಜೆಪಿ ಪಕ್ಷ ಯಾತ್ರೆಗೆ ಬೆಂಬಲ‌ ಸೂಚಿಸಿತ್ತು. ಆದರೆ ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆದ ಸ್ಚಾಭಿಮಾನಿ ಯಾತ್ರೆಯಲ್ಲಿ ಬಿಜೆಪಿ ಪಕ್ಷದ ಯಾವೊಬ್ಬ ಮುಖಂಡ ಕೂಡಾ ಕಾಣಿಸಿಕೊಂಡಿಲ್ಲ. ನಾರಾಯಣ ಗುರುಗಳ ಸ್ವಾಭಿಮಾನಿ ನಡಿಗೆಯಲ್ಲಿ ಜಾತಿಭೇಧ ಮರೆತು ಸಾವಿರಾರು ಮಂದಿ ಹೆಜ್ಜೆ ಹಾಕಿದರು.



Read more

[wpas_products keywords=”deal of the day sale today offer all”]