Karnataka news paper

ಐಶ್ವರ್ಯ-ಧನುಷ್ ಸಂಸಾರವನ್ನು ಉಳಿಸಲು ರಜನಿಕಾಂತ್ ಶತಪ್ರಯತ್ನ!


ಹೈಲೈಟ್ಸ್‌:

  • ಐಶ್ವರ್ಯ-ಧನುಷ್ ದಾಂಪತ್ಯದಲ್ಲಿ ಬಿರುಕು
  • ಐಶ್ವರ್ಯ-ಧನುಷ್ ದಾಂಪತ್ಯವನ್ನು ಸರಿಪಡಿಸಲು ರಜನಿಕಾಂತ್ ಇನ್ನಿಲ್ಲದ ಪ್ರಯತ್ನ
  • ಸಂಸಾರ ಸರಿಪಡಿಸಿಕೊಳ್ಳುವಂತೆ ಬುದ್ದಿಮಾತು ಹೇಳಿದ ರಜನಿಕಾಂತ್

ತಮಿಳು ನಟ ಧನುಷ್ ಹಾಗೂ ಐಶ್ವರ್ಯ ಇತ್ತೀಚೆಗಷ್ಟೇ ಬೇಸರದ ಸಂಗತಿಯೊಂದನ್ನು ಬಹಿರಂಗಪಡಿಸಿದ್ದರು. 18 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದ ಐಶ್ವರ್ಯ ಹಾಗೂ ಧನುಷ್ ಇದೀಗ ದೂರಾಗಲು ನಿರ್ಧರಿಸಿದ್ದಾರೆ. ತಾವು ಬೇರೆ ಬೇರೆಯಾಗುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾದ ಮೂಲಕ ಐಶ್ವರ್ಯ ಹಾಗೂ ಧನುಷ್ ತಿಳಿಸಿದ್ದರು. ಈ ವಿಚಾರ ಅಭಿಮಾನಿಗಳಿಗೆ ಮಾತ್ರವಲ್ಲ.. ಸ್ವತಃ ರಜನಿಕಾಂತ್ ಅವರಿಗೂ ತೀವ್ರ ನೋವುಂಟು ಮಾಡಿದೆ. ಮಗಳ ಸಂಸಾರದಲ್ಲಿ ಮೂಡಿರುವ ಬಿರುಕನ್ನು ಸರಿಪಡಿಸಲು ರಜನಿಕಾಂತ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಬುದ್ಧಿಮಾತು ಹೇಳಿದ ರಜನಿಕಾಂತ್
‘’ಮಗಳ ಸಂಸಾರದ ವಿಚಾರವನ್ನು ರಜನಿ ಸರ್ ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ. ಐಶ್ವರ್ಯ ಮತ್ತು ಧನುಷ್ ಅವರ ಮನಸ್ತಾಪ ಕೇವಲ ತಾತ್ಕಾಲಿಕ ಎಂಬುದು ಅವರ ನಂಬಿಕೆ. ಸಂಸಾರವನ್ನು ಸರಿಪಡಿಸಿಕೊಳ್ಳುವಂತೆ ಮಗಳಿಗೆ ರಜನಿಕಾಂತ್ ಬುದ್ಧಿಮಾತು ಹೇಳಿದ್ದಾರೆ’’ ಎಂದು ಮೂಲಗಳು ತಿಳಿಸಿವೆ. ‘’ಮನಸ್ತಾಪವನ್ನು ಮರೆತು, ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ರಾಜಿ ಮಾಡಿಕೊಳ್ಳುವಂತೆ ದಂಪತಿಗೆ ಎರಡೂ ಕುಟುಂಬಗಳು ಒತ್ತಡ ಹೇರುತ್ತಿವೆ’’ ಎಂದೂ ಕೂಡ ವರದಿಯಾಗಿದೆ.

ಕಿರಿಯ ಪುತ್ರಿ ಸೌಂದರ್ಯ ವಿಚ್ಛೇದನ ಪಡೆದಾಗ ರಜನಿಕಾಂತ್ ಪಟ್ಟ ಸಂಕಟ ಅಷ್ಟಿಷ್ಟಲ್ಲ! ಇನ್ನು ಈಗ…
ಇದು ಮೊದಲೇನಲ್ಲ!
ಐಶ್ವರ್ಯ ಮತ್ತು ಧನುಷ್ ಮಧ್ಯೆ ಮನಸ್ತಾಪ ಮೂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಬಾರಿ ದಂಪತಿಗಳ ಮಧ್ಯೆ ಕಿತ್ತಾಟ, ಜಗಳ ನಡೆದಿದೆ. ಪ್ರತಿ ಬಾರಿಯೂ ಭಿನ್ನಾಭಿಪ್ರಾಯ ಭುಗಿಲೆದ್ದಾಗ, ಐಶ್ವರ್ಯ ಮತ್ತು ಧನುಷ್ ಜೊತೆಗೆ ಮಾತನಾಡಿ ಇಬ್ಬರೂ ಒಟ್ಟಿಗೆ ಇರುವಂತೆ ಮನವೊಲಿಸುವಲ್ಲಿ ರಜನಿಕಾಂತ್ ಯಶಸ್ವಿಯಾಗುತ್ತಿದ್ದರು. ಈ ಬಾರಿಯೂ ಐಶ್ವರ್ಯ ಮತ್ತು ಧನುಷ್ ಮಧ್ಯೆ ಮೂಡಿರುವ ಮನಸ್ತಾಪದ ಬೆಂಕಿಯನ್ನು ಶಮನ ಮಾಡುವಲ್ಲಿ ರಜನಿಕಾಂತ್ ಯಶಸ್ವಿಯಾಗುತ್ತಾರಾ..?

‘ದಂಪತಿಗಳ ನಡುವೆ ಸಣ್ಣ ಕೌಟುಂಬಿಕ ಕಲಹ ನಡೆದಿದೆಯಷ್ಟೇ..’- ಧನುಷ್ ತಂದೆ ಕಸ್ತೂರಿ ರಾಜ ಹೇಳಿಕೆ
ಮನನೊಂದಿದ್ದ ರಜನಿಕಾಂತ್
ರಜನಿಕಾಂತ್ ಹಾಗೂ ಲತಾ ದಂಪತಿಗೆ ಐಶ್ವರ್ಯ ಮತ್ತು ಸೌಂದರ್ಯ ಎಂಬ ಇಬ್ಬರು ಮಕ್ಕಳಿದ್ದಾರೆ. ಹಿರಿಯ ಪುತ್ರಿ ಐಶ್ವರ್ಯ, ನಟ ಧನುಷ್‌ರನ್ನ ಮದುವೆಯಾಗಿದ್ದರೆ.. ಕಿರಿಯ ಪುತ್ರಿ ಸೌಂದರ್ಯ ಅವರ ವಿವಾಹ ಉದ್ಯಮಿ ಅಶ್ವಿನ್ ರಾಮ್‌ಕುಮಾರ್ ಎಂಬುವರ ಜೊತೆ ನೆರವೇರಿತ್ತು. ಆದರೆ, ಸೌಂದರ್ಯ ಹಾಗೂ ಅಶ್ವಿನ್ ರಾಮ್ ರಾಮ್ ಅವರ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. 2017ರಲ್ಲಿ ಅಶ್ವಿನ್ ರಾಮ್‌ಕುಮಾರ್ ಹಾಗೂ ಸೌಂದರ್ಯ ವಿಚ್ವೇದನ ಪಡೆದರು. ಕಿರಿಯ ಪುತ್ರಿ ವಿಚ್ಛೇದನ ಪಡೆದಾಗ ರಜನಿಕಾಂತ್ ಪಟ್ಟ ಸಂಕಟ ಅಷ್ಟಿಷ್ಟಲ್ಲ. ಮಗಳ ಸಂಸಾರ ಮುರಿದುಬಿತ್ತು ಎಂದು ರಜನಿಕಾಂತ್ ತೀವ್ರವಾಗಿ ಮನನೊಂದಿದ್ದರು.
ಅಶ್ವಿನ್ ರಾಮ್‌ಕುಮಾರ್‌ರಿಂದ ವಿಚ್ಛೇದನ ಪಡೆದ ಬಳಿಕ ನಟ ಹಾಗೂ ಉದ್ಯಮಿ ವಿಶಗನ್ ವಾನಂಗಮುಡಿ ಎಂಬುವರೊಂದಿಗೆ ಸೌಂದರ್ಯ ಕಲ್ಯಾಣ ನೆರವೇರಿತು.

ಮದುವೆಯಾದಾಗ ನಟ ಧನುಷ್‌ಗೆ 21, ಐಶ್ವರ್ಯಾಗೆ 23; ಗಡಿಬಿಡಿಯಲ್ಲಿ ರಜನಿಕಾಂತ್ ಮಗಳ ಮದುವೆ ಮಾಡಿದ್ದೇಕೆ?
ಎಲ್ಲವೂ ಸರಿಹೋಯ್ತು ಎನ್ನುವಷ್ಟರಲ್ಲಿ ಇದೀಗ ಹಿರಿಯ ಪುತ್ರಿಯ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಹೀಗಾಗಿ ರಜನಿಕಾಂತ್ ಮನಸ್ಸು ಘಾಸಿಗೊಂಡಿದೆ. ಐಶ್ವರ್ಯ ಹಾಗೂ ಧನುಷ್ ದಾಂಪತ್ಯವನ್ನು ಸರಿಪಡಿಸಲು ರಜನಿಕಾಂತ್ ಶತಪ್ರಯತ್ನ ಪಡುತ್ತಿದ್ದಾರೆ. ರಜನಿಕಾಂತ್ ಪ್ರಯತ್ನ ಯಶಸ್ವಿಯಾಗಲಿ ಅನ್ನೋದೇ ಅಭಿಮಾನಿಗಳ ಹಾರೈಕೆ.

Dhanush Divorce: ಈ ವಿಡಿಯೋ ನೋಡಿದ್ರೆ ಧನುಷ್ ಅಭಿಮಾನಿಗಳ ಕಣ್ಣು ಒದ್ದೆಯಾಗದೇ ಇರದು!
ಐಶ್ವರ್ಯ ಹೆಸರು ಬದಲಾವಣೆ ಆಗಿಲ್ಲ!
ತಾವು ದೂರಾಗುತ್ತಿರುವ ಬಗ್ಗೆ ಐಶ್ವರ್ಯ ಮತ್ತು ಧನುಷ್ ಅಧಿಕೃತವಾಗಿ ಅನೌನ್ಸ್ ಮಾಡಿರಬಹುದು. ಆದರೆ, ಐಶ್ವರ್ಯ ಮಾತ್ರ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿಲ್ಲ. ತಮ್ಮ ಹೆಸರಿನಲ್ಲಿರುವ ಧನುಷ್‌ಗೆ ಐಶ್ವರ್ಯ ಕತ್ತರಿ ಪ್ರಯೋಗ ಮಾಡಿಲ್ಲ. ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ‘ಐಶ್ವರ್ಯ.ಆರ್.ಧನುಷ್’ ಅಂತಲೇ ಇದೆ.



Read more

[wpas_products keywords=”deal of the day party wear dress for women stylish indian”]