The New Indian Express
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರತಿ ಗಣರಾಜ್ಯೋತ್ಸವದಲ್ಲಿಯೂ ಸಾಂಪ್ರದಾಯಿಕ ಶೈಲಿಯ ಪೇಟ ಧರಿಸುತ್ತಿದ್ದರು. ಆದರೆ ಈ ಬಾರಿ ಬ್ರಹ್ಮಕಮಲದ ಚಿತ್ರವಿರುವ ಉತ್ತರಾಖಂಡ್ ನ ಟೋಪಿ ಹಾಗೂ ಮಣಿಪುರದ ಶಾಲು ಧರಿಸಿದ್ದರು.
ಅಧಿಕೃತ ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸುವ ವೇಳೆ ಬ್ರಹ್ಮಕಮಲವನ್ನು ಅರ್ಪಿಸುತ್ತಾರೆ. ಸಾಮಾನ್ಯವಾಗಿ ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯೋತ್ಸವ ದಿನಾಚರಣೆಗಳಿಗೆ ಸಾಂಪ್ರದಾಯಿಕ ಪೇಟ (ಟರ್ಬನ್) ಗಳನ್ನು ಬಳಕೆ ಮಾಡುವುದು ವಾಡಿಕೆ.
ಕಳೆದ ವರ್ಷ 72 ನೇ ಗಣರಾಜ್ಯೋತ್ಸವ ದಿನಾಚರಣೆಗೆ ಗುಜರಾತ್ ನ ಜಾಮ್ ನಗರದ ವಿಶೇಷವಾದ ಟರ್ಬನ್ ನ್ನು ಮೋದಿ ಧರಿಸಿದ್ದರು. ಈಗ ಮಣಿಪುರ ಹಾಗೂ ಉತ್ತರಾಖಂಡ್ ವಿಧಾನಸಭೆ ಚುನಾವಣೆಗಳು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯತಂತ್ರಕ್ಕಾಗಿ ಮೋದಿ ಉತ್ತರಾಖಂಡ್ ನ ಟೋಪಿ ಹಾಗೂ ಮಣಿಪುರದ ಶಾಲು ಧರಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
Read more
[wpas_products keywords=”deal of the day”]