ಹೈಲೈಟ್ಸ್:
- ಗುರುವಾರ ನಡೆಯಬೇಕಿದ್ದ ಏರ್ ಇಂಡಿಯಾ ಹಸ್ತಾಂತರ ವಿಳಂಬ
- ಊಟದ ವ್ಯವಸ್ಥೆ ಸುಧಾರಣೆ ಮಾಡುವ ಸಲುವಾಗಿ ಈ ನಿರ್ಧಾರ
- ಶುಕ್ರವಾರ ಟಾಟಾ ತೆಕ್ಕೆಗೆ ಏರ್ ಇಂಡಿಯಾ ಪಾಲಾಗುವ ಸಾಧ್ಯತೆ
ನಿಗದಿಯಂತೆ ಗುರುವಾರ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರ ಮಾಡಬೇಕಿತ್ತು. ಇದಕ್ಕೆ ಎಲ್ಲಾ ಸಿದ್ಧತೆಗಳೂ ನಡೆದಿತ್ತು. ಆದರೆ ಕೆಲವು ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಊಟದ ವ್ಯವಸ್ಥೆ ಸುಧಾರಣೆ ಮಾಡಲು ತಾಜ್ ಸ್ಯಾಟ್ಸ್ ಸೂಚನೆ ನೀಡಿತ್ತು. ಹೀಗಾಗಿ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿದೆ.
ಮುಂಬೈ- ದೆಹಲಿ, ಮುಂಬೈ – ದೆಹಲಿ, ಮುಂಬೈ – ಬೆಂಗಳೂರು, ಮುಂಬೈ – ಲಂಡನ್, ಮುಂಬೈ – ನ್ಯೂಯಾರ್ಕ್, ಮುಂಬೈ – ಅಬುಧಾಬಿ ನಡುವೆ ಕಾರ್ಯನಿರ್ವಹಿಸುವ ವಿಮಾನಗಳಲ್ಲಿ ಊಟದ ವ್ಯವಸ್ಥೆ ಸುಧಾರಣೆ ಮಾಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಕಂಪನಿಯ ನೌಕರರಿಗೆ, ಕ್ಯಾಬಿನ್ ಕ್ರೂಗಳಿಗೆ, ಗಗನಸಖಿಯರಿಗೆ ಮೇಲ್ ಮೂಲಕ ಕಂಪನಿ ಮಾಹಿತಿ ನೀಡಿದೆ. ಮುಂದಿನ ಮೂರು ದಿನಗಳಲ್ಲಿ ಊಟದ ವ್ಯವಸ್ಥೆ ಸುಧಾರಣೆಯಾಗಲಿದೆ ಎಂದು ಕಂಪನಿ ನೌಕರರಿಗೆ ಕಳಿಸಿದ ಸಂದೇಶದಲ್ಲಿ ಹೇಳಿದೆ.
ಊಟದ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಬಯಸಿದ್ದು, ಹೀಗಾಗಿ ಗುರುವಾರದಂದು ಟಾಟಾ ಕಂಪನಿಯ ಹೆಸರಿನಲ್ಲಿ ವಿಮಾನಗಳು ಕಾರ್ಯಾಚರಣೆ ಮಾಡುವುದಿಲ್ಲ. ಹೊಸ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ನೌಕರರಿಗೆ ಕಳಿಸಿರುವ ಇ- ಮೇಲ್‌ನಲ್ಲಿ ತಿಳಿಸಲಾಗಿದೆ.
ಇನ್ನು ಏರ್ ಇಂಡಿಯಾದ ಸೇವೆ ಸುಧಾರಣೆಗೆ, ಕಂಪನಿಯ ನೌಕರರಿಗೆ ಹಲವು ಸಂದೇಶ ರವಾನೆ ಮಾಡಿರುವ ಆಡಳಿತ ಮಂಡಳಿ, ಚೆನ್ನಾಗಿರುವ ಉಡುಪು ಧರಿಸಬೇಕು ಎಂದು ಸೂಚನೆ ನೀಡಿದೆ. ಅಲ್ಲದೇ ಪ್ರಯಾಣಿಕರನ್ನು ಅತಿಥಿಗಳ ಹಾಗೆ ಸತ್ಕಾರ ಮಾಡಬೇಕು, ವಿಮಾನದಲ್ಲಿ ರತನ್ ಟಾಟಾ ಅವರು ನೀಡಿರುವ ಆಡಿಯೋ ಸಂದೇಶವನ್ನು ಪ್ಲೇ ಮಾಡಬೇಕು ಎನ್ನುವ ಸೂಚನೆಗಳು ಸಿಬ್ಬಂದಿಗಳಿಗೆ ಸಿಕ್ಕಿದೆ.
ಇನ್ನು ಹಸ್ತಾಂತರ ವಿಳಂಬದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಭಾರತ ಸರ್ಕಾರದಿಂದಲೀ, ಟಾಟಾ ಸಮೂಹದಿಂದಲೋ ಬಂದಿಲ್ಲ. ಆದರೆ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಶುಕ್ರವಾರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಗುರುವಾರ 11 ಗಂಟೆಗೆ ಏರ್ ಇಂಡಿಯಾ ಬೋರ್ಡ್ ಸಭೆ ನಡೆಸಲಿದ್ದು, ಅಲ್ಲಿ ಅಂತಿಮ ತೀರ್ಮಾನವಾಗಲಿದೆ ಎನ್ನುವುದು ಮೂಲಗಳಿಂದ ಬಂದ ಮಾಹಿತಿ.
ಹಸ್ತಾಂತರಗೊಂಡ ಬಳಿಕ ಟಾಟಾ ಗ್ರೂಪ್ ಅಥವಾ ಏಜೀಸ್ ಬ್ಯಾನರ್ ಅಡಿ ಏರ್ ಇಂಡಿಯ ಕಾರ್ಯ ನಿರ್ವಹಿಸಲಿದೆ ಎಂದು ಗೊತ್ತಾಗಿದೆ.
ನಷ್ಟದ ಸುಳಿಯಲ್ಲಿ ಸಿಲುಕಿದ್ದ ಏರ್ ಇಂಡಿಯಾವನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿತ್ತು. ಹೀಗಾಗಿ ಟಾಟಾ ಸಮೂಹ ಸೇರಿ ಹಲವು ಮಂದಿ ವಿಮಾನಯಾನ ಕಂಪನಿ ಖರೀದಿಗೆ ಬಿಡ್ ಸಲ್ಲಿಸಿದ್ದರು 18 ಸಾವಿರ ಕೋಟಿ ಬಿಡ್ ಮಾಡಿದ್ದ ಟಾಟಾ ಕಂಪನಿ ಏರ್ ಇಂಡಿಯಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆ ಮೂಲಕ ಟಾಟಾ ಸಮೂಹವೇ ಆರಂಭಿಸಿದ್ದ ವಿಮಾನಯಾನ ಕಂಪನಿ ಮರಳಿ ಟಾಟಾ ಗೂಡು ಸೇರಿತ್ತು.
Read more
[wpas_products keywords=”deal of the day sale today offer all”]