Karnataka news paper

ಗಣರಾಜ್ಯೋತ್ಸವ: ಭಾರತೀಯ ವಾಯುಪಡೆಯ ಟ್ಯಾಬ್ಲೋದಲ್ಲಿ ರಫೇಲ್ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್


Online Desk

ನವದೆಹಲಿ: ದೆಹಲಿಯ ರಾಜ್ ಪಥದಲ್ಲಿ ನಡೆದ ೭೩ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ದೇಶದ ಮೊದಲ ಮಹಿಳಾ ರಫೇಲ್ ಫೈಟರ್ ಜೆಟ್ ಪೈಲಟ್ ಶಿವಾಂಗಿ ಸಿಂಗ್ ಭಾರತೀಯ ವಾಯುಪಡೆಯ(ಐಎಎಫ್) ಟ್ಯಾಬ್ಲೋದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಐಎಎಫ್ ಟ್ಯಾಬ್ಲೋದಲ್ಲಿ ಭಾಗವಹಿಸಿದ ಎರಡನೇ ಮಹಿಳಾ ಫೈಟರ್ ಜೆಟ್ ಪೈಲಟ್ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

‘ಭವಿಷ್ಯಕ್ಕಾಗಿ ಭಾರತೀಯ ವಾಯುಪಡೆ ರೂಪಾಂತರಗೊಳ್ಳುತ್ತಿದೆ ಎಂಬ ಐಎಎಫ್ ಟ್ಯಾಬ್ಲೋ ಥೀಮ್ನಲ್ಲಿ ಸೆಲ್ಯೂಟ್ ಹೊಡೆದು ನಿಂತ ಶಿವಾಂಗಿ ನೆರೆದಿದ್ದ ಎಲ್ಲ ಗಣ್ಯರಿಗೆ ಗೌರವ ಸೂಚಿಸಿದರು.

ಇದನ್ನು ಓದಿ: 73ನೇ ಗಣರಾಜ್ಯೋತ್ಸವ ವಿಶೇಷ: ಭಾರತದ ತೆಕ್ಕೆಗೆ ಜಾರಿದ ಬ್ರಿಟಿಷ್ ಬ್ರ್ಯಾಂಡ್ ಕಂಪನಿಗಳು!

ಕಳೆದ ವರ್ಷ, ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ಐಎಎಫ್ ಟ್ಯಾಬ್ಲೋದಲ್ಲಿ ಭಾಗವಹಿಸಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ ಮೊದಲ ಮಹಿಳಾ ಫೈಟರ್ ಜೆಟ್ ಪೈಲಟ್ ಎಂಬ ಖ್ಯಾತಿ ಪಡೆದುಕೊಂಡಿದ್ದರು. ವಾರಣಾಸಿಯವರಾದ ಶಿವಾಂಗಿ ಸಿಂಗ್ 2017 ರಲ್ಲಿ ಐಎಎಫ್ ಗೆ ಸೇರ್ಪಡೆಗೊಂಡರು ಮತ್ತು ಐಎಎಫ್ ನ ಮಹಿಳಾ ಫೈಟರ್ ಪೈಲಟ್‌ಗಳ ಎರಡನೇ ಬ್ಯಾಚ್ಗೆ ನೇಮಕಗೊಂಡರು.

ರಫೇಲ್ ಯುದ್ಧ ವಿಮಾನ ಅನ್ನು ಹಾರಿಸುವ ಮುನ್ನ ಅವರು ಮಿಗ್ -21 ಬೈಸನ್ ವಿಮಾನವನ್ನು ಹಾರಿಸುತ್ತಿದ್ದರು. ಶಿವಾಂಗಿ ಸಿಂಗ್ ಅವರು ಪಂಜಾಬ್‌ನ ಅಂಬಾಲಾ ಮೂಲದ ಐಎಎಫ್ ನ ಗೋಲ್ಡನ್ ಆರೋಸ್ ಸ್ಕ್ವಾಡ್ರನ್ ನ ಭಾಗವಾಗಿದ್ದಾರೆ.

ರಫೇಲ್ ಫೈಟರ್ ಜೆಟ್‌ನ ಸ್ಕೇಲ್ ಡೌನ್ ಮಾದರಿಗಳು, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್ (LCH) ಮತ್ತು 3D ಕಣ್ಗಾವಲು ರಾಡಾರ್ ಅಸ್ಲೇಶಾ MK-1 ಫ್ಲೋಟ್‌ನ ಭಾಗವಾಗಿತ್ತು. ಭಾರತವು ಪಾಕಿಸ್ತಾನವನ್ನು ಸೋಲಿಸಿದ 1971 ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ MiG-21 ವಿಮಾನದ ಸ್ಕೇಲ್ಡ್ ಡೌನ್ ಮಾದರಿಯನ್ನು ಸಹ ಇದು ಒಳಗೊಂಡಿತ್ತು, ಇದು ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು, ಜೊತೆಗೆ ಇದು ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಿಮಾನವಾದ ಗ್ನಾಟ್ ನ ಮಾದರಿಯಾಗಿದೆ.

59,000 ಕೋಟಿ ವೆಚ್ಚದಲ್ಲಿ 36 ವಿಮಾನಗಳನ್ನು ಖರೀದಿಸಲು ಭಾರತವು ಫ್ರಾನ್ಸ್‌ನೊಂದಿಗೆ ಅಂತರ್ ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ನಾಲ್ಕು ವರ್ಷಗಳ ನಂತರ ಜುಲೈ 29, 2020 ರಂದು ಮೊದಲ ಬ್ಯಾಚ್ ರಫೇಲ್ ಯುದ್ಧ ವಿಮಾನಗಳು ಆಗಮಿಸಿವೆ. ಇಲ್ಲಿಯವರೆಗೆ, 32 ರಫೇಲ್ ಜೆಟ್‌ಗಳನ್ನು ಐಎಎಫ್ ಗೆ ತಲುಪಿಸಲಾಗಿದೆ ಮತ್ತು ಈ ವರ್ಷದ ಏಪ್ರಿಲ್ ವೇಳೆಗೆ ನಾಲ್ಕು ರಫೇಲ್ ಜೆಟ್‌ಗಳನ್ನು ನಿರೀಕ್ಷಿಸಲಾಗಿದೆ.



Read more

[wpas_products keywords=”deal of the day”]