Karnataka news paper

16-17 ಕ್ಕೆ ಬ್ಯಾಂಕ್‌ ಮುಷ್ಕರ: ಯಾವೆಲ್ಲಾ ಬ್ಯಾಂಕ್‌ಗಳ ಸೇವೆ ವ್ಯತ್ಯಯ?


Personal Finance

|

ಬ್ಯಾಂಕುಗಳ ಖಾಸಗೀಕರಣವನ್ನು ವಿರೋಧ ಮಾಡಿ ಡಿಸೆಂಬರ್‌ 16-17 ಬ್ಯಾಂಕ್‌ಗಳ ಸಂಘವು ಮುಷ್ಕರವನ್ನು ನಡೆಸಲಿದೆ. ಯುನೈಟೆಡ್‌ ಫಾರಮ್‌ ಆಫ್‌ ಬ್ಯಾಂಕ್‌ ಯೂನಿಯನ್ಸ್‌ (ಯುಎಫ್‌ಬಿಉ) ಈ ಮುಷ್ಕರಕ್ಕೆ ಕರೆಯನ್ನು ನೀಡಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ), ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಆರ್‌ಬಿಎಲ್‌ ಬ್ಯಾಂಕ್‌ ಈಗಾಗಲೇ ಈ ಮುಷ್ಕರದ ದಿನದಂದು ತಮ್ಮ ಬ್ಯಾಂಕ್‌ ಸೇವೆಯಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, “ನಮ್ಮ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಸಾಮಾನ್ಯವಾಗಿ ಸೇವೆ ನಡೆಸುವ ನಿಟ್ಟಿನಲ್ಲಿ ನಾವು ಎಲ್ಲಾ ಕ್ರಮವನ್ನು ಕೈಗೊಂಡಿದ್ದೇವೆ. ಆದರೆ ಮುಷ್ಕರದಿಂದಾಗಿ ನಮ್ಮ ಬ್ಯಾಂಕಿನ ಸೇವೆಯಲ್ಲಿ ಕೊಂಚ ವ್ಯತ್ಯಾಸ ಉಂಟಾಗಲಿದೆ,” ಎಂದು ಹೇಳಿದೆ.

ಗಮನಿಸಿ: ಮುಂದಿನ ವಾರ ನಾಲ್ಕು ದಿನ ಬ್ಯಾಂಕ್‌ ರಜೆ: ಇಲ್ಲಿದೆ ಮಾಹಿತಿ

ಇನ್ನು ಈ ಮುಷ್ಕರದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, “ಮುಷ್ಕರದ ಹಿನ್ನೆಲೆಯಿಂದಾಗಿ ಎಲ್ಲಾ ಕ್ರಮವನ್ನು ಕೈಗೊಳ್ಳಲಾಗಿದೆ. ಎಲ್ಲಾ ಶಾಖೆ, ಕಚೇರಿಯಲ್ಲಿ ಸಾಮಾನ್ಯವಾಗಿ ಕಾರ್ಯ ನಿರ್ವಹಣೆ ನಡೆಯುವಂತೆ ನಾವು ಕ್ರಮವನ್ನು ಕೈಗೊಂಡಿದ್ದೇವೆ. ಆದರೆ ಮುಷ್ಕರದ ಸಂದರ್ಭದಲ್ಲಿ ಬ್ರಾಂಚ್‌ ಹಾಗೂ ಕಚೇರಿಗಳ ಸೇವೆಯಲ್ಲಿ ಕೊಂಚ ವ್ಯತ್ಯಯ ಉಂಟಾಗಬಹುದು,” ಎಂದು ಉಲ್ಲೇಖಿಸಿದೆ.

ಆರ್‌ಬಿಎಲ್‌ ಬ್ಯಾಂಕ್‌ ಕೂಡಾ ಈ ಬಗ್ಗೆ ಹೇಳಿಕೆ ನೀಡಿದೆ. ಇದು ಬ್ಯಾಂಕಿಗೆ ಸಂಬಂಧಿಸಿದ ವಿಷಯವಾದ ಕಾರಣದಿಂದಾಗಿ ನಮ್ಮ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ, ಇದರಿಂದಾಗಿ ಸೇವೆಯಲ್ಲಿ ವ್ಯತ್ಯಯ ಆಗಬಹುದು ಎಂದು ಆರ್‌ಬಿಎಲ್‌ ಬ್ಯಾಂಕ್‌ ಹೇಳಿದೆ. “ಮುಷ್ಕರದ ಸಂದರ್ಭದಲ್ಲಿ ನಮ್ಮ ಕಚೇರಿ ಹಾಗೂ ಶಾಖೆಯಲ್ಲಿ ಸಾಮಾನ್ಯವಾಗಿ ಸೇವೆ ನೀಡುವ ನಿಟ್ಟಿನಲ್ಲಿ ನಾವು ಅಗತ್ಯ ಕ್ರಮವನ್ನು ಕೈಗೊಂಡಿದ್ದೇವೆ. ಆದರೆ ನಮ್ಮ ಕೆಲವು ಶಾಖೆಗಳ ಮೇಲೆ ಬ್ಯಾಂಕ್‌ ಮುಷ್ಕರದ ಪ್ರಭಾವ ಬೀರಬಹುದು,” ಎಂದು ಆರ್‌ಬಿಎಲ್‌ ಬ್ಯಾಂಕ್‌ ತಿಳಿಸಿದೆ.

16-17 ಕ್ಕೆ ಬ್ಯಾಂಕ್‌ ಮುಷ್ಕರ: ಯಾವೆಲ್ಲಾ ಬ್ಯಾಂಕ್‌ಗಳ ಸೇವೆ ವ್ಯತ್ಯಯ?

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಏನು ಹೇಳುತ್ತದೆ?

ಎರಡು ದಿನಗಳ ಬ್ಯಾಂಕ್‌ ಸಂಘಟನೆಗಳ ಮುಷ್ಕರದಿಂದಾಗಿ ನಮ್ಮ ಸೇವೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ ಎಂದು ಈ ಹಿಂದೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹೇಳಿತ್ತು. ಹಾಗೆಯೇ ಸಾಮಾನ್ಯವಾಗಿ ಸೇವೆಯು ಮುಂದುವರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ನಾವು ಕೈಗೊಳ್ಳುತ್ತೇವೆ ಎಂದು ಕೂಡಾ ಎಸ್‌ಬಿಐ ಹೇಳಿಕೆ ನೀಡಿತ್ತು.

ಬ್ಯಾಂಕುಗಳ ಖಾಸಗೀಕರಣವನ್ನು ವಿರೋಧ ಮಾಡಿ ಬ್ಯಾಂಕುಗಳು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಸರ್ಕಾರವು ಬ್ಯಾಂಕ್‌ಗಳ ಖಾಸಗೀಕರಣ ಮಾಡಲಾಗುವುದು ಎಂದು ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ, “ಬ್ಯಾಂಕುಗಳ ಖಾಸಗೀಕರಣವು ಸಾರ್ವಜನಿಕ ವಲಯಕ್ಕೆ ದೊಡ್ಡ ಪರಿಣಾಮವನ್ನು ಬೀರಲಿದೆ. ಮುಖ್ಯವಾಗಿ ಗ್ರಾಮೀಣ ವಲಯದ ಆರ್ಥಿಕತೆಗೆ ಪೆಟ್ಟು ಬೀಳಲಿದೆ,” ಎಂದು ಹೇಳಿದ್ದಾರೆ.

ಖಾಸಗೀಕರಣದ ವಿರುದ್ಧ ಆಕ್ರೋಶ: ರಾಷ್ಟ್ರವ್ಯಾಪ್ತಿ ಎರಡು ದಿನ ಬ್ಯಾಂಕ್‌ಗಳ ಮುಷ್ಕರ

ನಾಲ್ಕು ದಿನಗಳ ಕಾಲ ಬ್ಯಾಂಕ್‌ ಸೇವೆಯಲ್ಲಿ ವ್ಯತ್ಯಯ

ಈ ಎರಡು ದಿನ ಮಾತ್ರವಲ್ಲದೇ ಈ ವಾರದಲ್ಲಿ ಮತ್ತೆ ಎರಡು ದಿನಗಳ ಕಾಲ ಬ್ಯಾಂಕ್‌ಗಳು ಬಂದ್‌ ಆಗುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ಅಗತ್ಯ ಬ್ಯಾಂಕ್‌ ವಹಿವಾಟು ಇದ್ದರೆ ಮುಂದಿನ ವಾರಕ್ಕೂ ಮುನ್ನವೇ ಅಥವಾ ಮುಂದಿನ ವಾರದ ಆರಂಭದಲ್ಲೇ ಮುಗಿಸಿಬಿಡಿ. ಈ ಸಮಯದಲ್ಲಿ ಎಲ್ಲಾ ಬ್ಯಾಂಕುಗಳ ಆನ್‌ಲೈನ್‌ ವಹಿವಾಟು ಅಥವಾ ಮೊಬೈಲ್‌ ವಹಿವಾಟು ಎಂದಿನಂತೆಯೇ ನಡೆಯಲಿದೆ. ಆದರೆ ಬ್ಯಾಂಕುಗಳಿಗೆ ಹೋಗಿಯೇ ಮಾಡಬೇಕಾದ ಕಾರ್ಯಗಳು ಇದ್ದಲ್ಲಿ ಜನರು ಇಂದು ಅಥವಾ ಮುಂದಿನ ವಾರದ ಆರಂಭದಲ್ಲೇ ಮುಗಿಸಿಬಿಡಿ.

ಡಿಸೆಂಬರ್‌ 16-17 ಬ್ಯಾಂಕ್‌ ಖಾಸಗೀಕರಣದ ವಿರುದ್ಧ ಬ್ಯಾಂಕ್‌ ಯೂನಿಯನ್‌ ಮುಷ್ಕರ, ಡಿಸೆಂಬರ್‌ 18 ರಂದು ಯು ಸೊಸೊ ಥಾಮ್‌ ಪುಣ್ಯ ಸ್ಮರಣೆ/ಗುರುಘಿಸಿದಾಸ್‌ ಜಯಂತಿ ಹಿನ್ನೆಲೆ ಕೆಲವೆಡೆ ಬ್ಯಾಂಕ್‌ ಸೇವೆ ಇರಲ್ಲ. ಡಿಸೆಂಬರ್‌ 19 ರಂದು ಭಾನುವಾರವಾದ ಹಿನ್ನೆಲೆ ದೇಶಾದಾದ್ಯಂತ ಬ್ಯಾಂಕ್‌ ಸೇವೆ ಇರುವುದಿಲ್ಲ.

English summary

Bank Strike on 16, 17 December: Services of These Banks to Remain Affected

Bank Strike on 16, 17 December: Services of These Banks to Remain Affected.

Story first published: Tuesday, December 14, 2021, 20:25 [IST]



Read more…