Karnataka news paper

ಹೈಟಿ: ಇಂಧನ ಸಾಗಿಸುತ್ತಿದ್ದ ಲಾರಿ ಸ್ಫೋಟ, 40 ಸಾವು


Prajavani

ಪೋರ್ಟ್‌–ಒ–ಪ್ರಿನ್ಸ್, ಹೈಟಿ (ಎಪಿ): ಉತ್ತರ ಹೈಟಿಯಲ್ಲಿ ಇಂಧನ ಸಾಗಿಸುತ್ತಿದ್ದ ಟ್ರಕ್‌ವೊಂದು ಸ್ಫೋಟಗೊಂಡು 40 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮಂಗಳವಾರ ವರದಿಯಾಗಿದೆ.

ಕ್ಯಾಪ್‌–ಹೈಟಿಯನ್‌ ನಗರದಲ್ಲಿ ಸೋಮವಾರ ತಡರಾತ್ರಿ ಈ ಸ್ಫೋಟ ಸಂಭವಿಸಿದೆ. ಘಟನೆಯಿಂದ ತಮಗೆ ಆಘಾತ ಉಂಟಾಗಿದೆ ಎಂದು ಪ್ರಧಾನಿ ಏರಿಯಲ್‌ ಹೆನ್ರಿ ಹೇಳಿದ್ದಾರೆ.

ಘಟನೆ ಬಗ್ಗೆ ತಕ್ಷಣಕ್ಕೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಪೊಲೀಸರು ಯಾವುದೇ ವಿವರಗಳನ್ನು ನೀಡಿಲ್ಲ. 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಇನ್ನೂ ಹೆಚ್ಚಿನ ಜನರು ಆಸ್ಪತ್ರೆಗೆ ದಾಖಲಾಗುವ ನಿರೀಕ್ಷೆಯಿದೆ ಎಂದು ಲೆ ನೌವೆಲ್ಲಿಸ್ಟೆ ಪತ್ರಿಕೆಯು ವರದಿ ಮಾಡಿದೆ.  

ಗಾಯಗೊಂಡವರು ದುರಂತದ ಭೀಕರತೆಯನ್ನು ತೆರೆದಿಟ್ಟಿದ್ದಾರೆ. ಮಾಜಿ ಪ್ರಧಾನ ಮಂತ್ರಿ ಕ್ಲಾಡೆ ಜೋಸೆಫ್‌ ಅವರು ಸಂತ್ರಸ್ತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.



Read more from source