Karnataka news paper

ಮಣಿಪಾಲ್ ಆಸ್ಪತ್ರೆಯಿಂದ ದೇವೇಗೌಡ ಡಿಸ್ಚಾರ್ಜ್, ವೈದ್ಯರಿಗೆ ಪುಸ್ತಕ ಗಿಫ್ಟ್ ನೀಡಿದ ಮಾಜಿ ಪ್ರಧಾನಿ


Online Desk

ಬೆಂಗಳೂರು: ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್. ​ಡಿ ದೇವೇಗೌಡ ಅವರು ಬುಧವಾರ ಡಿಸ್ಚಾರ್ಜ್ ಆಗಿದ್ದಾರೆ.

ದೇವೇಗೌಡ ಅವರಲ್ಲಿ ಯಾವುದೋ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದರೂ ಮುನ್ನೆಚ್ಚರಿ ಕ್ರಮವಾಗಿ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನು ಓದಿ: ರಾಜಕೀಯ ಹೋರಾಟದಿಂದ ಅಂತರರಾಜ್ಯ ಜಲ ವಿವಾದ ಗೆಲ್ಲಲು ಸಾಧ್ಯವಿಲ್ಲ: ದೇವೇಗೌಡ​

ಮಾಜಿ ಪ್ರಧಾನಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜಾ ಆಗಿದ್ದು, ವೈದ್ಯೋ ನಾರಾಯಣೋ ಹರಿಃ , ಅನಾರೋಗ್ಯದ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನನಗೆ ಡಾ. ಸತ್ಯನಾರಾಯಣ ಮೈಸೂರು ಅವರು ಚಿಕಿತ್ಸೆ ನೀಡಿ ಆರೈಕೆ ಮಾಡಿದರು. ಈ ಹಿನ್ನಲೆಯಲ್ಲಿ ನನ್ ಜೀವನಚರಿತ್ರೆ Furrows In Field ಪುಸ್ತಕವನ್ನು ಅವರಿಗೆ ಕೃತಜ್ಞತಾ ಸಂಕೇತವಾಗಿ ನೀಡಿ ಅಭಿನಂದಿಸಿದೆ ಎಂದು ದೇವೇಗೌಡ ಅವರು ಟ್ವೀಟ್ ಮಾಡಿದ್ದಾರೆ.

ಈ ಹಿಂದೆಯೂ ಅಂದರೆ ಕೊರೋನಾ ಎರಡನೇ ಅಲೆಯಲ್ಲೂ ದೇವೇಗೌಡ ದಂಪತಿಗೆ ಕೊರೋನಾ ಸೋಂಕು ತಗುಲಿತ್ತು.





Read more

[wpas_products keywords=”deal of the day”]