Karnataka news paper

ಮುಂದಿನ 3 ತಿಂಗಳಲ್ಲಿ 5 ಉಪಗ್ರಹ ಉಡಾವಣೆಗೊಳಿಸಲಿದೆ ಇಸ್ರೋ!


Online Desk

ನವದೆಹಲಿ: ಮುಂಬರುವ ಮೂರು ತಿಂಗಳಲ್ಲಿ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಐದು ಪ್ರಮುಖ ಉಪಗ್ರಹ ಉಡಾವಣೆ ಮಾಡಲಿದೆ ಎಂದು ಹಿರಿಯ ರಾಕೆಟ್ ವಿಜ್ಞಾನಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಜಿತೇಂದ್ರ ಸಿಂಗ್ ವಿವರಿಸಿದರು.

ಕೊರೋನಾ, ಸತತ ಲಾಕ್‌ಡೌನ್‌ಗಳಿಂದ ವಿಳಂಬಗೊಂಡಿದ ಇಸ್ರೋ ಕಾರ್ಯಚಟುವಟಿಕೆಗಳು ಇಸ್ರೋ ಹೊಸ ಮುಖ್ಯಸ್ಥರಾದ ಡಾ ಎಸ್ ಸೋಮನಾಥ್ ವೇಗವನ್ನು ಪಡೆದುಕೊಳ್ಳುತ್ತಿದೆ ಎಂದು ಹೇಳಿರುವ ಅವರು ಮುಂದಿನ ಮೂರು ತಿಂಗಳ ಅವಧಿಯಲ್ಲಿ ಮುಂಬರುವ ಕಾರ್ಯಾಚರಣೆಗಳ ಕುರಿತು ಇಸ್ರೋ ಅಧ್ಯಕ್ಷರು ಸಂಕ್ಷಿಪ್ತವಾಗಿ ಪ್ರಸ್ತುತಪಡಿಸಿದರು. ಇದರಲ್ಲಿ ಈ ವರ್ಷದ ಫೆಬ್ರವರಿಯಲ್ಲಿ RICAT-1A PSLV C5-2, OCEANSAT-3, ಮಾರ್ಚ್ನಲ್ಲಿ INS 2B ಆನಂದ್ PSLV C-53 ಉಡಾವಣೆ ಮತ್ತು ಏಪ್ರಿಲ್ ನಲ್ಲಿ SSLV-D1 ಮೈಕ್ರೋ SAT ಉಡಾವಣೆಗೊಳ್ಳಲಿದೆ. ಏತನ್ಮಧ್ಯೆ, ಇಸ್ರೋ GSAT-21 ಅನ್ನು ಸಹ ಉಡಾವಣೆ ಮಾಡಲಿದೆ ಎಂದು ಹೇಳಿದರು.

GSAT-21 ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (NSIL)ನ ಸಂಪೂರ್ಣ ಅನುದಾನಿತ ಮೊದಲ ಉಪಗ್ರಹ. ಡೈರೆಕ್ಟ್ ಟು ಹೋಮ್ (DTH) ಅಪ್ಲಿಕೇಶನ್ ಅಗತ್ಯಗಳನ್ನು ಪೂರೈಸಲು ಸಂವಹನ ಉಪಗ್ರಹವನ್ನು ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿಪಡಿಸುತ್ತದೆ ಮತ್ತು ನಿರ್ವಹಿಸುತ್ತದೆ ಎಂದು ಹೇಳಿದರು.

ಸಭೆಯ ನಂತರ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ವಿಶೇಷ ಉತ್ತೇಜನ ನೀಡಲಾಗಿದೆ ಮತ್ತು ರಸ್ತೆಗಳು ಮತ್ತು ಹೆದ್ದಾರಿಗಳು, ರೈಲ್ವೆಗಳು, ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಅನ್ವಯವಾಗುವಂತೆ ಮಾಡಲಾಗಿದೆ. “ಮುಂದಿನ ಕೆಲವು ವರ್ಷಗಳಲ್ಲಿ, ಭಾರತವು ಬಾಹ್ಯಾಕಾಶದಲ್ಲಿ ಮೈಲಿಗಲ್ಲು ಸಾಧಿಸಲಿದೆ ಎಂದು ಹೇಳಿದರು.

ಮೊದಲ ಸ್ಥಿತಿಯತ್ತ ಗಗನ್ ಯಾನ್
ಭಾರತದ ಚೊಚ್ಚಲ ಮಾನವಸಹಿತ ಮಿಷನ್ ಗಗನ್ ಯಾನ್ ಕುರಿತು ಸಚಿವರಿಗೆ ವಿವರಿಸಿದ ಸೋಮನಾಥ್, ಕೋವಿಡ್ -19 ಮತ್ತು ಇತರ ನಿರ್ಬಂಧಗಳಿಂದಾಗಿ ವಿಳಂಬವಾಗಿದೆ. ಆದರೆ ಈಗ ಮೊದಲ ಮಾನವರಹಿತ ಮಿಷನ್‌ಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇಸ್ರೋ 2022ರಲ್ಲಿ ಗಗನ್ ಯಾನ್ ಅಡಿಯಲ್ಲಿ ಸಿಬ್ಬಂದಿಗಳಿಲ್ಲದ ಮೊದಲ ಮಿಷನ್ ಅನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಅದರ ನಂತರ ಎರಡನೇ ಮಾನವರಹಿತ ಮಿಷನ್ “ವ್ಯೋಮಿತ್ರ” ಅನ್ನು ರೋಬೋಟ್ ಒಯ್ಯುತ್ತದೆ. ನಂತರ ಮಾನವಸಹಿತ ಮಿಷನ್ ಅನ್ನು ಬೆಂಬಲಿಸುತ್ತದೆ. ಆಯ್ಕೆಯಾದ ಭಾರತೀಯ ಗಗನಯಾತ್ರಿಗಳು ರಷ್ಯಾದಲ್ಲಿ ಜೆನೆರಿಕ್ ಬಾಹ್ಯಾಕಾಶ ಹಾರಾಟದ ತರಬೇತಿಯನ್ನು ಯಶಸ್ವಿಯಾಗಿ ಪಡೆದಿದ್ದಾರೆ ಮತ್ತು ಬೆಂಗಳೂರಿನಲ್ಲಿ ತಾತ್ಕಾಲಿಕ ಗಗನಯಾತ್ರಿ ತರಬೇತಿ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷರು ಹೇಳಿದರು.



Read more

[wpas_products keywords=”deal of the day”]