ಈ ವೇಳೆ, ಇದ್ದಕ್ಕಿಂದಂತೆ ಏನೋ ವಿಚಾರ ತೆಗೆದು ಮಾತನಾಡಿದರೆ ಹೇಗೆ? ಮಧ್ಯದಲ್ಲಿ ಯಾವ್ಯಾವ ವಿಚಾರವನ್ನು ಪ್ರಸ್ತಾಪ ಮಾಡಿದರೆ ಹೇಗೆ? ನಿಯಮಾವಳಿ ಪ್ರಕಾರ ಈ ವಿಚಾರವನ್ನು ಪ್ರಸ್ತಾಪ ಮಾಡಬೇಕು ಎಂದು ಸ್ಪೀಕರ್ ಸೂಚಿಸಿದರು.
ಸರಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಬಳಕೆಗೆ ಕಳಪೆ ಗುಣಮಟ್ಟದ ಔಷಧ ವಿತರಣೆ; ಪಿಎಸಿ ವರದಿ ಆಕ್ಷೇಪ
ಫೋಟೋ ಹಾಕುವ ವಿಚಾರವಾಗಿ ನಿಮಗೆ ಅಧಿಕಾರ ಇದೆ. ಈ ಬಗ್ಗೆ ಘೋಷಣೆ ಮಾಡಿ ಎಂದ ಅನ್ನದಾನಿ ಆಗ್ರಹಿಸಿದರು. ಇದಕ್ಕೆ ಗರಂ ಆದ ಸ್ಪೀಕರ್, ನನಗೆ ಯಾರು ಹೇಳುವವರು ನೀವು? ಸದನದ ಘನತೆ ಗೌರವ ಎತ್ತಿಹಿಡಿಯುವ ಜವಾಬ್ದಾರಿ ಬೇಕಲ್ವಾ? ಎಂದು ಸ್ವಲ್ಪ ಏರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು.
ಸಾವಿರ ಬಾರಿ ಹೇಳಿದ್ದೇನೆ. ಅಶಿಸ್ತು ಸಹಿಸುವುದಿಲ್ಲ. ನನ್ನಲ್ಲಿ ಬಂದು ಹೇಳಿ ಪ್ರಸ್ತಾಪ ಮಾಡಿದರೆ ಅದಕ್ಕೆ ಅರ್ಥ ಇರುತ್ತೆ. ನಿಮಗೆ ಅನುಭವ ಇದೆ. ಈ ನಿಟ್ಟಿನಲ್ಲಿ ಸದನದ ಗೌರವ ಕಾಪಾಡಬೇಕು ಎಂದು ಅವರು ಹೇಳಿದರು.
ಹೆಬ್ಬಾಳ್ಕರ್ ವಿರುದ್ಧ ಸೇಡು ತೀರಿಸಿಕೊಳ್ಳುವ ಭರದಲ್ಲಿ ಬಿಜೆಪಿ ಅಭ್ಯರ್ಥಿಗೇ ಸೋಲುಣಿಸಿದ ರಮೇಶ್ ಜಾರಕಿಹೊಳಿ!
ನೀವು ಅಧ್ಯಾಪಕರಾಗಿ ಕೆಲಸ ಮಾಡಿದವರು.ಬೇಜಾವಾಬ್ದಾರಿಯಿಂದ ವರ್ತಿಸಿದರೆ ಹೇಗೆ? ನೀವು ಹೇಳಿರುವ ವಿಚಾರ ಜಾರಿಗೆ ತರಲು ಸದನ ಬದ್ಧವಾಗಿದೆ. ಆದರೆ ಗೌರವದ ರೀತಿಯಲ್ಲಿ ಅದನ್ನು ಅನುಷ್ಠಾನಕ್ಕೆ ತರಬೇಕು. ಹಿರಿಯರು ಜೊತೆ ಸಮಾಲೋಚನೆ ಮಾಡಿ ಮುಂದಿನ ಪ್ರಕ್ರಿಯೆ ಮಾಡುತ್ತೇನೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದರು.
ಸದಸ್ಯರಿಗೇ ನಿರಾಸಕ್ತಿ!
ಬೆಳಗಾವಿಯಲ್ಲಿಅಧಿವೇಶನ ನಡೆಸಬೇಕು ಎಂಬ ಕೂಗು ದೊಡ್ಡದಾಗಿತ್ತಾದರೂ ನಿರೀಕ್ಷಿತ ಪ್ರಮಾಣದಲ್ಲಿ ಶಾಸಕರೇ ಹಾಜರಾಗದೆ ನಿರಾಸಕ್ತಿ ತೋರಿದ್ದು ಕಂಡುಬಂತು. ಆಡಳಿತ ಪಕ್ಷದ 62 ಮತ್ತು ಪ್ರತಿಪಕ್ಷದ 56 ಶಾಸಕರು ಮಾತ್ರ ಭಾಗವಹಿಸಿದ್ದರು. ಒಟ್ಟು 275 ಮಂದಿಯಲ್ಲಿ 118 ಮಂದಿ ಪಾಲ್ಗೊಂಡಿದ್ದು ಅಚ್ಚರಿ ಮೂಡಿಸಿತು. ಉತ್ತರ ಕರ್ನಾಟಕದ ಶಾಸಕರಲ್ಲೇ ಹೆಚ್ಚಿನವರು ಬಂದಿರಲಿಲ್ಲ.