Karnataka news paper

ನ್ಯಾಯಬೆಲೆ ಅಂಗಡಿಗಳಲ್ಲಿ ಉಪ್ಪಿನಕಾಯಿ ಮಾರಾಟ ಸಾಧ್ಯವಿಲ್ಲ: ಸಚಿವ ಉಮೇಶ್ ಕತ್ತಿ


Online Desk

ವಿಜಯಪುರ: `ನ್ಯಾಯಬೆಲೆ ಅಂಗಡಿಗಳಲ್ಲಿ ನಿಂಬೆ ಹಣ್ಣಿನ ಉತ್ಪನ್ನದ ಉಪ್ಪಿನಕಾಯಿ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನ್ಯಾಯಬೆಲೆ ಅಂಗಡಿಗಳಲ್ಲಿ ನಿಂಬೆ ಹಣ್ಣಿನ ಉತ್ಪನ್ನದ ಉಪ್ಪಿನಕಾಯಿ ಮಾರಾಟ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಬೇಕಾದರೆ ಶಾಲೆ, ಅಂಗನವಾಡಿ ಕೇಂದ್ರದಲ್ಲಿ ಆ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು.  ಶಾಲೆಯಲ್ಲಿ ಉಪ್ಪಿನಕಾಯಿ ನೀಡುವ ಕುರಿತು ಶಿಕ್ಷಣ ಇಲಾಖೆ ಜತೆ ಚರ್ಚೆ ನಡೆಸಲಾಗುವುದು. ಪಡಿತರ ಧಾನ್ಯ ವಿತರಣೆಯಲ್ಲಿ ಸದ್ಯ ಜೋಳ, ರಾಗಿ, ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದ್ದು, ಇದರ ಜತೆ ಉಪ್ಪಿನಕಾಯಿ ನೀಡಲು ಸಾಧ್ಯವಿಲ್ಲ. ನಿಂಬೆ ಅಭಿವೃದ್ಧಿ ಮಂಡಳಿಯ ಬೇಡಿಕೆ ತಮ್ಮ ಬಳಿ ತಲುಪಿದೆ. ನಿಂಬೆ  ಯಾವ ರೀತಿ ರಫ್ತು ಮಾಡಬಹುದು ಎನ್ನುವ ಕುರಿತು ಸರ್ಕಾರ ಚರ್ಚೆ ನಡೆಸಲಿದೆ’ ಎಂದರು.

`ರಾಜ್ಯದಲ್ಲಿ ಪಡಿತರ ವಿತರಣೆ ಯೋಜನೆಯಡಿ ಆರೂವರೆ ಲಕ್ಷ ಟನ್ ಜೋಳ, ಆರೂವರೆ ಲಕ್ಷ ಟನ್ ರಾಗಿ ಅಗತ್ಯವಿದ್ದು, ಸದ್ಯ ರಾಗಿ ಎರಡು ಲಕ್ಷ ಟನ್ ಅಷ್ಟೇ ದಾಸ್ತಾನು ಮಾಡಲಾಗಿದೆ. ಜೋಳ 70 ಸಾವಿರ ಟನ್ ಸಂಗ್ರಹವಾಗಿದೆ. ಬೇಕಾದಷ್ಟು ರಾಗಿ, ಜೋಳ ಸಂಗ್ರಹಣೆಯಾಗದಿರುವ ಕಾರಣ ಹಂಚಿಕೆ ಮಾಡಲು  ಕಷ್ಟವಾಗಿದೆ. ಹೀಗಾಗಿ ಅಕ್ಕಿಯನ್ನ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೂ ಸ್ಥಳೀಯವಾಗಿ ಬೆಂಬಲ ಬೆಲೆ(ಎಂಎಸ್‍ಪಿ) ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಈಗಾಗಲೇ ಪಡಿತರದಾರರಿಗೆ ಐದು ಕೆಜಿ ಅಕ್ಕಿ, ಒಂದು ಕೆಜಿ ರಾಗಿ, ಒಂದು ಕೆಜಿ ಜೋಳ ವಿತರಣೆ ಮಾಡಲಾಗುತ್ತಿದೆ. ರೈತರು ಮತ್ತು  ಪಡಿತರ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲು ಸರ್ಕಾರ ಬದ್ಧವಾಗಿದೆ.
 



Read more

[wpas_products keywords=”deal of the day”]