Karnataka news paper

ಕೋವಿಡ್-19: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 8,503 ಹೊಸ ಕೇಸು, 624 ಮಂದಿ ಸಾವು


Source : PTI

ನವದೆಹಲಿ: ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 3 ಕೋಟಿಯ 46 ಲಕ್ಷದ 74 ಸಾವಿರದ 744ಕ್ಕೆ ಏರಿಕೆಯಾಗಿದ್ದು ಕಳೆದ 24 ಗಂಟೆಗಳಲ್ಲಿ ಒಂದೇ ದಿನ 8 ಸಾವಿರದ 503 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 94 ಸಾವಿರದ 943ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 

ಭಾರತದಲ್ಲಿ ಇದುವರೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4 ಲಕ್ಷದ 74 ಸಾವಿರದ 735ಕ್ಕೆ ಏರಿಕೆಯಾಗಿದ್ದು ನಿನ್ನೆ ಒಂದೇ ದಿನ 624 ಮಂದಿ ಮೃತಪಟ್ಟಿದ್ದಾರೆ. ಕಳೆದ 43 ದಿನಗಳಿಂದ ದಿನಂಪ್ರತಿ ಕೊರೋನಾ ಸೋಂಕಿತರ ಸಂಖ್ಯೆ 15 ಸಾವಿರಕ್ಕಿಂತ ಕಡಿಮೆಯಾಗಿದೆ. ಸಕ್ರಿಯ ಸೋಂಕಿತ ಪ್ರಕರಣ ಸಂಖ್ಯೆ 94 ಸಾವಿರದ 943ಕ್ಕೆ ಏರಿಕೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆಯ ಶೇಕಡಾ 0.27ರಷ್ಟಿದೆ ಇದು ಕಳೆದ ವರ್ಷ ಮಾರ್ಚ್ 2020ರಿಂದ ಅತಿ ಕಡಿಮೆಯಾಗಿದೆ. 

ದೇಶದಲ್ಲಿ ಕೋವಿಡ್ ನಿಂದ ಗುಣಮುಖ ಹೊಂದುತ್ತಿರುವವರ ಪ್ರಮಾಣ ಶೇಕಡಾ 98.36ರಷ್ಟಿದ್ದು ಕಳೆದ ವರ್ಷ ಮಾರ್ಚ್ ನಿಂದ ಅತಿ ಹೆಚ್ಚಾಗಿದೆ ಎಂದು ಸಚಿವಾಲಯದ ಅಂಕಿಅಂಶ ಹೇಳುತ್ತಿದೆ.

ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 201ರಷ್ಟು ಹೆಚ್ಚಳವಾಗಿದೆ. ದೈನಂದಿನ ಪಾಸಿಟಿವ್ ದರವು 0.66 ಶೇಕಡಾ ದಾಖಲಾಗಿದೆ. ಕಳೆದ 67 ದಿನಗಳಿಂದ ಶೇ.2ಕ್ಕಿಂತ ಕಡಿಮೆಯಾಗಿದೆ. ಸಾಪ್ತಾಹಿಕ ಪಾಸಿಟಿವ್ ದರ 0.72 ಶೇಕಡಾದಲ್ಲಿ ದಾಖಲಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 26 ದಿನಗಳಿಂದ ಇದು ಶೇಕಡಾ 1 ಕ್ಕಿಂತ ಕಡಿಮೆಯಾಗಿದೆ.

ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 3,41,05,066 ಕ್ಕೆ ಏರಿದೆ, ಆದರೆ ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.37 ರಷ್ಟಿದೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಅಭಿಯಾನ ಅಡಿಯಲ್ಲಿ ಇದುವರೆಗೆ ದೇಶದಲ್ಲಿ ನೀಡಲಾದ ಡೋಸ್‌ಗಳು 131.18 ಕೋಟಿ ದಾಟಿದೆ. 





Read more

Leave a Reply

Your email address will not be published. Required fields are marked *