Karnataka news paper

ಯೋಗಿ ಒಬ್ಬ ರಿಯಲ್ ಆಕ್ಟರ್: ಒಂಭತ್ತನೇ ದಿಕ್ಕು ನಿರ್ದೇಶಕ ದಯಾಳ್ ಪದ್ಮನಾಭನ್


The New Indian Express

ಯೋಗಿ ನಾಯಕರಾಗಿ ಅಭಿನಯಿಸಿರುವ ‘ಒಂಭತ್ತನೇ ದಿಕ್ಕು’ ಕ್ರೈಂ ಥ್ರಿಲ್ಲರ್ ಸಿನಿಮಾ ತಮಿಳು ಸಿನಿಮಾದ ರೀಮೇಕ್ ಆಗಿದ್ದರೂ ಮೂಲ ಸಿನಿಮಾಗಿಂತ ವಿಭಿನ್ನವಾಗಿ ಮೂಡಿ ಬರಲಿದೆ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ಹೇಳಿದ್ದಾರೆ.

ಇದನ್ನೂ ಓದಿ: PRK ಪ್ರೊಡಕ್ಷನ್ಸ್, ದಾನಿಶ್ ಸೇಠ್ ಅಭಿನಯದ ‘ಒನ್ ಕಟ್ ಟು ಕಟ್’ ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆ

ರಂಗನಾಯಕಿ, ಆ ಕರಾಳ ರಾತ್ರಿ ರೀತಿಯ ವಿಭಿನ್ನ ಬಗೆಯ ಸಿನಿಮಾಗಳನ್ನು ನೀಡಿರುವ ದಯಾಳ್ ಪದ್ಮನಾಭನ್ ‘ಒಂಭತ್ತನೇ ದಿಕ್ಕು’ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಚಿತ್ರಕಥೆ ನಾನ್ ಲೀನಿಯರ್ ಅಪ್ರೋಚ್ ಅನ್ನು ಹೊಂದಿದೆ.

ಇದನ್ನೂ ಓದಿ: ‘ವೇದ’ ನಂತರ ನಿರ್ದೇಶಕ ಯೋಗರಾಜ್ ಭಟ್ ಜೊತೆ ಶಿವಣ್ಣ ಹೊಸ ಸಿನಿಮಾ

ಪ್ರಯೋಗಾತ್ಮಕವಾದರೂ ತಮ್ಮ ಚಿತ್ರ ಕಮರ್ಷಿಯಲ್ ಅಂಶಗಳನ್ನು ಹೊಂದಿರುವುದಾಗಿ ದಯಾಳ್ ವಿಶ್ವಾಸದಿಂದ ಹೇಳುತ್ತಾರೆ. ಈ ಸಿನಿಮಾದ ದೃಶ್ಯಗಳನ್ನು ತೆರೆ ಮೇಲೆ ನೋಡುತ್ತಿದ್ದರೆ ನಿಜವಾದ ಘಟನೆಯನ್ನು ನೋಡಿದಂತೆ ಭಾಸವಾಗುತ್ತದೆ. ಅದರ ಶ್ರೇಯವನ್ನು ನಾಯಕ ಯೋಗಿಯವರಿಗೆ ಸಮರ್ಪಿಸುತ್ತಾರೆ ದಯಾಳ್. ಅದಿತಿ ಪ್ರಭುದೇವ ನಾಯಕಿಯಾಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಶ್ರೀಮುರಳಿ ಸ್ಟಾರರ್ ‘ಮದಗಜ’ ತಂಡದಿಂದ ಹೊಸ ಸಿನಿಮಾ: ನಿರ್ದೇಶಕ ಮಹೇಶ್ ಕುಮಾರ್ ಸುಳಿವು

ಯಾವುದೇ ಸಿನಿಮಾಗೆ ರಿಯಲ್ ಅಕ್ಟರ್ ಅತ್ಯಗತ್ಯ. ಆ ದೆಸೆಯಲ್ಲಿ ಯೋಗಿ ಸಿಕ್ಕಿದ್ದು ತಮ್ಮ ಸಿನಿಮಾಗೆ ವರದಾನವಾಗಿ ಪರಿಣಮಿಸಿದೆ ಎಂದು ದಯಾಳ್ ಹರ್ಷ ವ್ಯಕ್ತಪಡಿಸುತ್ತಾರೆ. 

ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ



Read more…

[wpas_products keywords=”party wear dress for women stylish indian”]