Karnataka news paper

ಯು ಮುಂಬಾಗೆ ಮತ್ತೆ ಶರಣಾದ ಬೆಂಗಳೂರು ಬುಲ್ಸ್‌!


ಹೈಲೈಟ್ಸ್‌:

  • ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ಎಂಟನೇ ಆವೃತ್ತಿಯ ಟೂರ್ನಿ.
  • ಬೆಂಗಳೂರಿನ ಶೆರ್ಟಾನ್‌ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಪಂದ್ಯಗಳ ಆಯೋಜನೆ.
  • ಎರಡನೇ ಬಾರಿ ಬೆಂಗಳೂರು ತಂಡಕ್ಕೆ ಸೋಲುಣಿಸಿದ ಯು ಮುಂಬಾ.

ಬೆಂಗಳೂರು: ಯು ಮುಂಬಾ ತಂಡದ ಸಂಘಟಿತ ಹೋರಾಟಕ್ಕೆ ಶರಣಾದ 2018ರ ಚಾಂಪಿಯನ್ಸ್‌ ಬೆಂಗಳೂರು ಬುಲ್ಸ್‌ ಪ್ರೊ ಕಬಡ್ಡಿ ಲೀಗ್‌ 8ನೇ ಆವೃತ್ತಿಯಲ್ಲಿ6ನೇ ಸೋಲಿಗೆ ಒಳಗಾಯಿತು. ಆದರೂ ಲೀಗ್‌ನಲ್ಲಿ ಆಡಿದ 15 ಪಂದ್ಯಗಳ ಪೈಕಿ 8 ಗೆಲುವು, 1 ಟೈನಿಂದ ಒಟ್ಟಾರೆ 46 ಅಂಕ ಕಲೆಹಾಕಿರುವ ಪವನ್‌ ಕುಮಾರ್‌ ಸೆಹ್ರಾವತ್‌ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ವೈಟ್‌ಫೀಲ್ಡ್‌ನ ಶೆರ್ಟಾನ್‌ ಗ್ರ್ಯಾಂಡ್‌ ಹೋಟೆಲ್‌ ಸಭಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 34-45 ಅಂಕಗಳಿಂದ ಮುಂಬಾ ತಂಡದ ವಿರುದ್ಧ ಸೋಲನುಭವಿಸಿತು. ಬುಲ್ಸ್‌ ಪರ ಮತ್ತೊಮ್ಮೆ ಮಿಂಚಿದ ನಾಯಕ ಪವನ್‌ ಕುಮಾರ್‌ 14 ಅಂಕ ಹಾಗೂ ರೇಡರ್‌ ಭರತ್‌ 7 ಅಂಕ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಅತ್ತ ರೇಡಿಂಗ್‌ ಮತ್ತು ಟ್ಯಾಕಲ್‌ ಸೇರಿ ಎಲ್ಲ ವಿಭಾಗಗಳಲ್ಲೂ ಸರ್ವಾಂಗೀಣ ಪ್ರದರ್ಶನ ನೀಡಿದ ದಿಲ್ಲಿ ತಂಡ ಟೂರ್ನಿಯಲ್ಲಿ 5ನೇ ಜಯ ದಾಖಲಿಸಿತು. ಇದರೊಂದಿಗೆ ಒಟ್ಟಾರೆ 41 ಅಂಕ ಹೊಂದಿರುವ ಮುಂಬಾ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದೆ.

ಪೈರೇಟ್ಸ್‌ ಎದುರು ಸೋತರೂ ಬೆಂಗಳೂರು ಬುಲ್ಸ್‌ಗೆ ಅಗ್ರಸ್ಥಾನ!

ಮುಂಬಾ ಪರ ರೇಡರ್‌ಗಳಾದ ಅಭಿಷೇಕ್‌ ಸಿಂಗ್‌ (11 ಅಂಕ), ರಾಹುಲ್‌ ಸೆತ್ಪಾಲ್‌(8 ಅಂಕ) ಮತ್ತು ವಿ. ಅಜಿತ್‌ (8 ಅಂಕ) ತಂಡದ ಗೆಲುವಿಗೆ ತಮ್ಮ ಕೊಡುಗೆ ನೀಡಿದರು. ಪ್ರಥಮಾರ್ಧಕ್ಕೆ ಬುಲ್ಸ್‌ 20-22ರಲ್ಲಿದಿಟ್ಟ ಪ್ರತಿರೋಧ ನೀಡಿತು. ಆದರೆ ದ್ವಿತೀಯಾರ್ಧದಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ 9 ಅಂಕ ಹಿನ್ನಡೆ ಅನುಭವಿಸಿತು.

ಗುರುವಾರದ ಪಂದ್ಯ
ಪುಣೇರಿ ಪಲ್ಟನ್‌ ಯು.ಪಿ. ಯೋಧಾ
ಪಂದ್ಯ ಆರಂಭ: ರಾತ್ರಿ 7.30

ಎರಡನೇ ಚರಣದಲ್ಲಿ ಬೆಂಗಳೂರಿಗೆ ಮೂರನೇ ಸೋಲು
ಮೊದಲ ಚರಣದಲ್ಲಿ ಅಬ್ಬರಿಸಿದ್ದ ಬೆಂಗಲೂರು ಬುಲ್ಸ್‌ ತಂಡ ಎರಡನೇ ಚರಣದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತು ಕಂಗಾಲಾಗಿದೆ. ಮುಂದಿನ ಪಂದ್ಯಗಳಲ್ಲಿ ಆದರೂ ತಂಡ ಚೇತರಿಸಿಕೊಳ್ಳುವುದೇ ಕಾದು ನೋಡಬೇಕಿದೆ. ಇದಕ್ಕೂ ಮುನ್ನ ಬೆಂಗಾಲ್‌ ವಾರಿಯರ್ಸ್‌ ಮತ್ತು ಪಟನಾ ಪೈರೇಟ್ಸ್‌ ಎದುರು ಮುಗ್ಗರಿಸಿತ್ತು. ಎರಡನೇ ಚರಣದಲ್ಲಿ ತೆಲುಗು ಟೈಟನ್ಸ್‌ ಎದುರು ಬೆಂಗಳೂರು ತಂಡಕ್ಕೆ ಸಿಕ್ಕಿರುವ ಏಕಮಾತ್ರ ಗೆಲುವಾಗಿದೆ.



Read more

[wpas_products keywords=”deal of the day sale today offer all”]