Karnataka news paper

ಕೋವಿಡ್ ನಿಯಮ ಉಲ್ಲಂಘಿಸಿದ ಬಸವ ಕಲ್ಯಾಣದ ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್


ಹೈಲೈಟ್ಸ್‌:

  • ಗ್ರಾಮಸ್ಥರು ಹೊತ್ತಿದ್ದ ಹರಕೆ ತೀರಿಸಲು ಪಾದಯಾತ್ರೆ
  • ಬಸವ ಕಲ್ಯಾಣದಿಂದ ಗೋಕುಳ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ
  • ಜನವರಿ 24 ರಂದು ಬೆಂಬಲಿಗರ ಜೊತೆ ಪಾದಯಾತ್ರೆ ಮಾಡಿದ್ದ ಶಾಸಕ ಶರಣು ಸಲಗಾರ

ಬೀದರ್: ರಾಜ್ಯದಲ್ಲಿ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಶಾಸಕ ಶರಣು ಸಲಗಾರ ವಿರುದ್ದ ಎಫ್‌ಐಆರ್ ದಾಖಲಾಗಿದೆ. ಅಭಿಮಾನಿಗಳು ಹಾಗೂ ಬೆಂಬಲಿಗರ ಜೊತೆಗೆ ಶಾಸಕ ಶರಣು ಪಾದಯಾತ್ರೆ ನಡೆಸಿದ ಹಿನ್ನೆಲೆಯಲ್ಲಿ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಾಸಕ ಪಾದಯಾತ್ರೆ ನಡೆಸಿದ್ದು ಏಕೆ..?ಬಸವ ಕಲ್ಯಾಣ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ನಾರಾಯಣ ರಾವ್ ಅವರು ಕೋವಿಡ್‌ನಿಂದ ನಿಧನರಾದ ವೇಳೆ, ಬಸವ ಕಲ್ಯಾಣ ಕ್ಷೇತ್ರದಲ್ಲಿ ವಿಧಾನ ಸಭಾ ಉಪ ಚುನಾವಣೆ ಎದುರಾಗಿತ್ತು. ಆಗ ಬಿಜೆಪಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿತ್ತು. ಈ ವೇಳೆ ಬಸವ ಕಲ್ಯಾಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಶರಣು ಸಲಗಾರ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿತ್ತು.

ರಾಜ್ಯದಲ್ಲಿ ಕೋವಿಡ್ ಮಹಾಸ್ಫೋಟ: ಅರ್ಧ ಲಕ್ಷದ ಗಡಿ ದಾಟಿದ ದೈನಂದಿನ ಪ್ರಕರಣ
ಹರಕೆ ಹೊತ್ತಿದ್ದ ಅಭಿಮಾನಿಗಳು..!

ವಿಧಾನ ಸಭಾ ಉಪ ಚುನಾವಣೆಯಲ್ಲಿ ಶರಣು ಸಲಗಾರ ಗೆಲುವು ಸಾಧಿಸಿದರೆ, ಬಸವ ಕಲ್ಯಾಣದಿಂದ ಗೋಕುಳ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದವರೆಗೆ ಶರಣು ಸಲಗಾರ ಅವರ ಜೊತೆ ಪಾದಯಾತ್ರೆ ಮಾಡುವುದಾಗಿ ಗ್ರಾಮಸ್ಥರು ಹರಕೆ ಹೊತ್ತಿದ್ದರು. ಅವರ ಮಹದಾಸೆಯಂತೆ ಶರಣು ಸಲಗಾರ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರು. ಬಳಿಕ ಗ್ರಾಮಸ್ಥರು ಹೊತ್ತಿದ್ದ ಹರಕೆ ತೀರಿಸಲು ಬಸವ ಕಲ್ಯಾಣದಿಂದ ಗೋಕುಳ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದವರೆಗೆ ಜನವರಿ 24 ರಂದು ಶಾಸಕ ಶರಣು ಸಲಗಾರ ಪಾದಯಾತ್ರೆ ಮಾಡಿದ್ದರು.

bidar

ಶಾಸಕ ಸಲಗಾರ ಅವರ ಜೊತೆ ಬೆಂಲಿಗರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು. ರಾಜ್ಯದಲ್ಲಿ ಜಾರಿಯಲ್ಲಿರುವ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪ ಈ ವೇಳೆ ಕೇಳಿ ಬಂತು. ಬಸವ ಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗಾರ ಹಾಗೂ ಬೆಂಬಲಿಗರು ಪಾದಯಾತ್ರೆ ವೇಳೆ ಸಂಪೂರ್ಣವಾಗಿ ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ, ಶಾಸಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಕುಂದಾ ಎಂಬುವರು ಬಸವ ಕಲ್ಯಾಣ ನಗರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾಡಿದ್ದ ಶಾಸಕರ ವಿರುದ್ಧ ಬಸವ ಕಲ್ಯಾಣ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಎಫ್‌ಐಆರ್‌ನಲ್ಲಿ ಶಾಸಕರಷ್ಟೇ ಅಲ್ಲ, ಪಾದಯಾತ್ರೆ ಆಯೋಜನ ಮಾಡಿದ ಕೃಷ್ಣಾ ರೆಡ್ಡಿ ಸೇರಿದಂತೆ ಹಲವರ ಹೆಸರನ್ನೂ ನಮೂದಿಸಲಾಗಿದೆ.

ಕೋವಿಡ್ ನಿಯಮ ಉಲ್ಲಂಘನೆ: ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ವಿರುದ್ಧ ದೂರು
ಕೋವಿಡ್‌ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತವು ಮಾರ್ಗಸೂಚಿಯನ್ನು ಪಾಲನೆ ಮಾಡುವಂತೆ ಸಾರ್ವಜನಿಕರಿಗೆ ಕಾಲ ಕಾಲಕ್ಕೆ ಸೂಚನೆ ನೀಡುತ್ತಲೇ ಇದೆ. ಕೋವಿಡ್‌ ಹರಡುವಿಕೆ ತಡೆಯಲು ಅನೇಕ ನಿಯಮಗಳನ್ನೂ ಜಾರಿಗೆ ತರಲಾಗಿದೆ. ಆದ್ರೆ, ಶಾಸಕರೇ ಈ ನಿಯಮ ಉಲ್ಲಂಘಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

bidar

ಬೀದರ್ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದರೂ ಅನೇಕ ರಾಜಕೀಯ ಪಕ್ಷಗಳ ನಾಯಕರು ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಕೊರೊನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈದ್ಯರೇ ಬಾರದ ಆಸ್ಪತ್ರೆಯಲ್ಲಿ ಮದ್ಯದ ಬಾಟಲಿಗಳ ಕಾರುಬಾರು..! ಬೀದರ್‌ನಲ್ಲಿ ಆಸ್ಪತ್ರೆಗೇ ಅನಾರೋಗ್ಯ..!



Read more

[wpas_products keywords=”deal of the day sale today offer all”]