ಹೈಲೈಟ್ಸ್:
- ಭಾರತ-ವೆಸ್ಟ್ ಇಂಡೀಸ್ ನಡುವಣ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿ.
- ತಲಾ 3 ಪಂದ್ಯಗಳ ಟಿ20 ಮತ್ತು ಕ್ರಿಕೆಟ್ ಸರಣಿಗಳಲ್ಲಿ ಭಾರತಕ್ಕೆ ವಿಂಡೀಸ್ ಸವಾಲು.
- ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಸಾದ ಕ್ಯಾಪ್ಟನ್ ರೋಹಿತ್ ಶರ್ಮಾ ಶೀಘ್ರವೇ ತಂಡ ಸೇರಲಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರೋಹಿತ್ ಅನುಪಸ್ಥಿತಿ ಕಾರಣ ಕೆಎಲ್ ರಾಹುಲ್ ಸಾರಥ್ಯದಲ್ಲಿ ಆಡಿದ್ದ ಟೀಮ್ ಇಂಡಿಯಾ ಒಡಿಐ ಸರಣಿಯನ್ನು 3-0 ಅಂತರದಲ್ಲಿ ಹೀನಾಯವಾಗಿ ಸೋತಿತ್ತು. ಇದೀಗ ರೋಹಿತ್ ತಂಡಕ್ಕೆ ಹಿಂದಿರುಗುವುದು ಖಾತ್ರಿಯಾಗಿದ್ದು, ವಿಂಡೀಸ್ ವಿರುದ್ಧದ ತಲಾ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಮತ್ತು ಟಿ20 ಕ್ರಿಕೆಟ್ ಸರಣಿಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದಿಂದ ಚೇತರಿಸಿರುವ ರವೀಂದ್ರ ಜಡೇಜಾ ಕೂಡ ತಂಡ ಸೇರುವ ನಿರೀಕ್ಷೆ ಇದೆ.
ಈ ಬೆಳವಣಿಗೆಗೆ ಹತ್ತಿರದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿ ಶೀಘ್ರವೇ ಸಭೆ ಸೇರಲಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಮತ್ತು ಟಿ20 ಕ್ರಿಕೆಟ್ ಸರಣಿಗಳಿಗೆ ಭಾರತ ತಂಡದ ಆಯ್ಕೆ ಮಾಡಲಿದೆ ಎಂದು ತಿಳಿಸಿವೆ.
ವಿಂಡೀಸ್ ವಿರುದ್ಧದ ಸರಣಿಯಿಂದ ಅಶ್ವಿನ್-ಭುವನೇಶ್ವರ್ ಔಟ್!
ಪಿಟಿಐ ಸುದ್ದಿ ಸಂಸ್ಥೆ ಮಾಡಿರುವ ವರದಿ ಪ್ರಕಾರ ರೋಹಿತ್ ಶರ್ಮಾ ಅವರನ್ನು ಭಾರತ ಟೆಸ್ಟ್ ತಂಡದ ನಾಯಕನನ್ನಾಗಿ ನೇಮಕ ಮಾಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಬಳಿಕ ವಿರಾಟ್ ಕೊಹ್ಲಿ ನಾಯಕತ್ವ ಬಿಟ್ಟರು. ಸರಣಿಯಲ್ಲಿ ಟೀಮ್ ಇಂಡಿಯಾ 1-2 ಅಂತರದ ಸೋಲುಂಡಿತ್ತು. ಹಂಗಾಮಿ ನಾಯಕ ಕೆಎಲ್ ರಾಹುಲ್ ಈಗ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಎಲ್ಲಾ ಮಾದರಿಯಲ್ಲಿ ಉಪನಾಯಕನಾಗಿ ಕೆಲಸ ಮಾಡಲಿದ್ದಾರೆ.
ಇನ್ನು ವಿಂಡೀಸ್ ವಿರುದ್ಧದ ಸರಣಿಯಲ್ಲಿ ಅನುಭವಿ ವೇಗಿ ಜಸ್‌ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ಕೊಡುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಕಳಪೆ ಲಯದಲ್ಲಿರುವ ಆರ್ ಅಶ್ವಿನ್, ಭುವನೇಶ್ವರ್ ಕುಮಾರ್ ಮತ್ತು ಯುಜ್ವೇಂದ್ರ ಚಹಲ್ ಕೂಡ ಹೊರ ಬೀಳುವ ಸಾಧ್ಯತೆ ಇದ್ದು, ಯುವ ಸ್ಪಿನ್ನರ್‌ಗಳಾದ ರವಿ ಬಿಷ್ಣೋಯ್, ರಾಹುಲ್ ಚಹರ್ ಮತ್ತು ಕುಲ್ದೀಪ್ ಯಾದವ್ ಅವರನ್ನು ಕರೆತರುವ ಕಡೆಗೂ ಟೀಮ್ ಇಂಡಿಯಾ ಸೆಲೆಕ್ಟರ್ಸ್ ಆಲೋಚಿಸಿದ್ದಾರೆ ಎನ್ನಲಾಗಿದೆ.
‘ಒಂದು ಸರಣಿ ಸೋತ ಮಾತ್ರಕ್ಕೆ ಟೀಕೆ ಶುರು, ಇದು ತಾತ್ಕಾಲಿಕ ಅಷ್ಟೇ’ ಎಂದ ಶಾಸ್ತ್ರಿ!
ಕೆಎಲ್ ರಾಹುಲ್‌ಗೆ ಮಧ್ಯಮ ಕ್ರಮಾಂಕ
ಏಕದಿನ ಕ್ರಿಕೆಟ್ ಸರಣಿಯಲ್ಲಿ ರೋಹಿತ್ ಶರ್ಮಾ ಕಮ್‌ಬ್ಯಾಕ್ ಮೂಲಕ ಶಿಖರ್ ಧವನ್ ಮತ್ತು ರೋಹಿತ್ ಆರಂಭಿಕರಾಗಿ ಆಡಲಿದ್ದು, ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವಂತ್ತಾಗುತ್ತದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಮುಖ್ಯ ಕಾರಣವಾಗಿತ್ತು. ಈಗ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಮೂಲಕ ಭಾರತ ತಂಡದ ಬ್ಯಾಟಿಂಗ್‌ಗೆ ಹೆಚ್ಚಿನ ಬಲ ಬಂದಂತ್ತಾಗಲಿದೆ. ಶ್ರೇಯಸ್ ಅಯ್ಯರ್ ಸ್ಥಾನದಲ್ಲಿ ರಾಹುಲ್ 4ನೇ ಕ್ರಮಾಂಕ ಪಡೆದುಕೊಳ್ಳಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಪರಿಷ್ಕೃತ ವೇಳಾಪಟ್ಟಿ
ಮೊದಲ ಒಡಿಐ, ಫೆಬ್ರವರಿ 6 (ಅಹ್ಮದಾಬಾದ್)
ಎರಡನೇ ಒಡಿಐ, ಫೆಬ್ರವರಿ 9 (ಅಹ್ಮದಾಬಾದ್)
ಮೂರನೇ ಒಡಿಐ, ಫೆಬ್ರವರಿ 11 (ಅಹ್ಮದಾಬಾದ್)
ಮೊದಲ ಟಿ20, ಫೆಬ್ರವರಿ 16 (ಕೋಲ್ಕತಾ)
ಎರಡನೇ ಟಿ20, ಫೆಬ್ರವರಿ 18 (ಕೋಲ್ಕತಾ)
ಮೂರನೇ ಟಿ20, ಫೆಬ್ರವರಿ 20 (ಕೋಲ್ಕತಾ)
Read more
[wpas_products keywords=”deal of the day gym”]