Karnataka news paper

‘ನಾವಿಬ್ಬರೂ ಮದುವೆಯಾಗ್ತಿದ್ದೇವೆ’ ಎಂದ ಕನ್ನಡ ಧಾರಾವಾಹಿ ನಟಿ ದೀಪಾ ಜಗದೀಶ್, ಸಾಗರ್ ಪುರಾಣಿಕ್


ಹೈಲೈಟ್ಸ್‌:

  • ಪ್ರೀತಿ ಮಾಡುತ್ತಿರುವ ನಟಿ ದೀಪಾ ಜಗದೀಶ್, ನಿರ್ದೇಶಕ ಸಾಗರ್ ಪುರಾಣಿಕ್
  • ಶೀಘ್ರದಲ್ಲಿ ದೀಪಾ ಜಗದೀಶ್, ಸಾಗರ್ ಪುರಾಣಿಕ್ ನಿಶ್ಚಿತಾರ್ಥ, ಮದುವೆ
  • ಮಹಾಸತಿ ಸೆಟ್‌ನಲ್ಲಿ ಭೇಟಿಯಾದ ದೀಪಾ ಜಗದೀಶ್, ಸಾಗರ್ ಪುರಾಣಿಕ್

ನಟಿ ದೀಪಾ ಜಗದೀಶ್ ಹಾಗೂ ನಿರ್ದೇಶಕ ಸಾಗರ್ ಪುರಾಣಿಕ್ ಅವರು ಸಂಗಾತಿಯಾಗಿ ಬಾಳಲು ರೆಡಿಯಾಗಿದ್ದಾರಂತೆ. ಪ್ರೀತಿ ಮಾಡಿರುವ ಈ ಜೋಡಿ ಮುಂದಿನ ದಿನಗಳಲ್ಲಿ ನಿಶ್ಚಿತಾರ್ಥ, ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾಗರ್ ಪುರಾಣಿಕ್, ದೀಪಾ ಜಗದೀಶ್ ಅವರು ರಿಲೇಶನ್‌ಶಿಪ್‌ನ್ನು ಅಧಿಕೃತಪಡಿಸಿದ್ದಾರೆ.

ಮಹಾಸತಿ ಧಾರಾವಾಹಿ ಸೆಟ್‌ನಲ್ಲಿ ದೀಪಾ ಜಗದೀಶ್, ಸಾಗರ್ ಪುರಾಣಿಕ್ ಭೇಟಿಯಾಗಿದೆ. ಈ ಧಾರಾವಾಹಿ ನಿರ್ಮಾಣ ಮಾಡಿದವರು ಸುನೀಲ್ ಪುರಾಣಿಕ್. ಆನಂತರದಲ್ಲಿ ದೀಪಾ ಜಗದೀಶ್, ಸಾಗರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಲು ಆರಂಭಿಸಿದ್ದರು. ಆ ಮೂಲಕ ಒಬ್ಬರನ್ನೊಬ್ಬರು ಇನ್ನಷ್ಟು ಅರ್ಥ ಮಾಡಿಕೊಂಡರು. ಕಳೆದ ವರ್ಷ ಇವರಿಬ್ಬರೂ ಪಾಲಕರಿಗೆ ಪ್ರೀತಿ ವಿಷಯ ತಿಳಿಸಿದ್ದಾರೆ. ಅವರಿಗೆ ಯಾವುದೇ ತಕರಾರು ಇರಲಿಲ್ಲ. ಇವರಿಬ್ಬರೂ ಮನರಂಜನಾ ಕ್ಷೇತ್ರದಲ್ಲಿ ಇದ್ದಾರೆ. ಇಬ್ಬರಿಗೂ ಅವರ ಆಸೆ ಆಕಾಂಕ್ಷೆ ಗೊತ್ತಿದೆ ಹೀಗಾಗಿ ಜೀವನ ಸಂಗಾತಿಯಾಗಿ ಮುಂದುವರೆಯಲು ನಿರ್ಧಾರ ಮಾಡಿದ್ದಾರೆ.

ಪ್ರತಿಷ್ಠಿತ ಢಾಕಾ ಫಿಲ್ಮ್‌ ಫೆಸ್ಟ್‌ಗೆ ಆಯ್ಕೆಯಾದ ಪವನ್‌ ಒಡೆಯರ್ ನಿರ್ಮಾಣದ ‘ಡೊಳ್ಳು’ ಸಿನಿಮಾ

‘ಡೊಳ್ಳು’ ಸಿನಿಮಾಕ್ಕೆ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ. ನಟ ಕಾರ್ತಿಕ್ ಮಹೇಶ್ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಡೊಳ್ಳು’ ಸಿನಿಮಾಗೆ ಪವನ್ ಬಂಡವಾಳ ಹೂಡಿದ್ದಾರೆ, ಪ್ರತಿಷ್ಠಿತ ಢಾಕಾ ಇಂಟರ್‌ನ್ಯಾಷನಲ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರೀಮಿಯರ್ ಆಗಲಿದೆ. ಈ ಹಿಂದೆ ‘ಮಹಾನ್ ಹುತಾತ್ಮ’ ಕಿರುಚಿತ್ರ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಇದು ಅವರ ನಿರ್ದೇಶನದ ಮೊದಲ ಸಿನಿಮಾ.

ಕೊರೊನಾ ನಂತರ ಜೀವನದಲ್ಲಿ ತುಂಬ ಸಮಸ್ಯೆ ಆಯ್ತು: ‘ಕಾವ್ಯಾಂಜಲಿ’ ಧಾರಾವಾಹಿ ನಟಿ ದೀಪಾ ಹಿರೇಮಠ

ದೀಪಾ ಜಗದೀಶ್ ಅವರು ಪ್ರಸ್ತುತ ತೆಲುಗು ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಕೆಲ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಕನ್ನಡದಲ್ಲಿ ‘ಕಾವ್ಯಾಂಜಲಿ’ ಧಾರಾವಾಹಿಯಲ್ಲಿ ದೀಪಾ ಜಗದೀಶ್ ಅಭಿನಯಿಸುತ್ತಿದ್ದಾರೆ. ಕಾವ್ಯಾಂಜಲಿ ಸೆಟ್‌ನಲ್ಲಿ ತೊಂದರೆಯಾಯ್ತು ಎಂದು ಅವರು ಈ ಧಾರಾವಾಹಿ ತೊರೆದಿದ್ದಾರೆ. ‘ಬ್ರಹ್ಮಾಸ್ತ್ರ’ ಧಾರಾವಾಹಿಯಲ್ಲಿಯೂ ದೀಪಾ ನಟಿಸಿದ್ದರು. ‘ಕೆಮಿಸ್ಟ್ರಿ ಆಫ್ ಕೆರಿಯಪ್ಪ’ ಖ್ಯಾತಿಯ ಎಲ್ ಕುಮಾರ್ ನಿರ್ದೇಶನದಲ್ಲಿ ‘ಕ್ರಿಟಿಕಲ್ ಕೀರ್ತನೆಗಳು’, ‘ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಸಿನಿಮಾದಲ್ಲಿ ದೀಪಾ ಜಗದೀಶ್ ನಟಿಸಿದ್ದಾರೆ.

‘ಮಹಾಸತಿ’, ತೆಲುಗಿನ ‘ಪ್ರೇಮ ಸಾಗರ’ ಧಾರಾವಾಹಿಯಲ್ಲಿ ದೀಪಾ ಜಗದೀಶ್ ನಟಿಸಿದ್ದಾರೆ. ನಟಿ ದೀಪಾ ಹೀರೆಮಠ ಅವರಿಗೆ ಬಾಲ್ಯದಿಂದಲೂ ನಟನೆ ಅಂದರೆ ತುಂಬ ಇಷ್ಟ. ಇನ್ನು ದೀಪಾ ಅವರಿಗೆ ಪುನೀತ್ ರಾಜ್‌ಕುಮಾರ್ ಅಂದರಂತೂ ತುಂಬ ಅಚ್ಚುಮೆಚ್ಚು. ಇನ್ನು ಅವರಿಗೆ ಒಳ್ಳೆಯ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳುವ ಆಸೆಯಿದೆಯಂತೆ.



Read more

[wpas_products keywords=”deal of the day party wear dress for women stylish indian”]