ಹೈಲೈಟ್ಸ್:
- ಮತ್ತೆ ತಲೆ ಎತ್ತಿದ ಮೈಸೂರಿನ ಸ್ವಾಭಿಮಾನಿ ಕನ್ನಡಿಗ ಗ್ರಾಂಥಾಲಯ
- ಕಳೆದ ವರ್ಷ ಬೆಂಕಿಗೆ ಆಹುತಿಯಾಗಿದ್ದ ಇಸಾಕ್ ಅವರ ಲೈಬ್ರರಿ
- ಸರ್ಕಾರದ ನೆರವಿಗೂ ಕಾಯದೇ ಗ್ರಾಂಥಾಲಯ ಮರು ಸ್ಥಾಪಿಸಿದ ಇಸಾಕ್
ಮೈಸೂರಿನ ಸ್ವಾಭಿಮಾನಿ ಕನ್ನಡಿಗನ ಕನಸು ಬುಧವಾರ ನನಸಾಗಿದೆ . ಸ್ವಾಭಿಮಾನದಿಂದ ಬದುಕಿದ್ರೆ ಎಲ್ಲವೂ ಸಾಧ್ಯ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ . ಮೈಸೂರಿನ ಅಪರೂಪದ ಕನ್ನಡ ಪ್ರೇಮಿ ಸೈಯದ್ ಇಸಾಕ್ ಮತ್ತೊಮ್ಮೆ ಈಗ ಖುಷಿಯಾಗಿದ್ದಾರೆ. ಕನ್ನಡ ಪ್ರೇಮಿ ಸಯ್ಯದ್ ಇಸಾಕ್ ನಡೆಸುತ್ತಿದ್ದ ಗ್ರಂಥಾಲಯ ಕಳೆದ ವರ್ಷ ಏಪ್ರಿಲ್‌ನಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ಸಹಾಯದಿಂದ ಗ್ರಂಥಾಲಯ ಮರುನಿರ್ಮಾಣಗೊಂಡಿದ್ದು, ಬುಧವಾರ ಟೇಪ್ ಕತ್ತರಿಸುವ ಮೂಲಕ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಗ್ರಂಥಾಲಯ ಲೋಕಾರ್ಪಣೆ ಮಾಡಿದ್ದಾರೆ.
ಮತ್ತೆ ತೆರೆದ ಕನ್ನಡ ಪ್ರೇಮಿ ಸೈಯ್ಯದ್ ಇಸಾಕ್ ಅವರ ಸ್ವಾಭಿಮಾನದ ಗ್ರಂಥಾಲಯ!
ಕನ್ನಡಪ್ರೇಮಿ ಸೈಯದ್ ಇಸಾಕ್ ತನ್ನ ಕನ್ನಡಾಭಿಮಾನದಿಂದಲೇ ಎಲ್ಲರ ಗಮನ ಸೆಳೆದಿದ್ದರು. ಗ್ರಾಂಥಾಲಯ ಬೆಂಗಾಹುತಿ ಆದ ಮೇಲೆ, ಅದನ್ನು ಪುನರ್ ನಿರ್ಮಾಣ ಮಾಡಿಕೊಡುವ ಭರಸವೆಯನ್ನು ಸರ್ಕಾರ ನೀಡಿತ್ತು . ಆದರೆ ಈ ಸ್ವಾಭಿಮಾನಿ ಕನ್ನಡಿಗ ಸರ್ಕಾರ ಕೊಟ್ಟ ಭರವಸೆಗೂ ಕಾಯದೆ ಖುದ್ದು ತಾವೇ ಶೆಲ್ಟರ್ ನಿರ್ಮಿಸಿ, ಗ್ರಂಥಾಲಯ ಆರಂಭಿಸುವ ಮೂಲಕ ಮತ್ತೊಮ್ಮೆ ಸೈಯದ್ ಭಾಷಾಭಿಮಾನವನ್ನ ಮೆರೆದಿದ್ದಾರೆ.
ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜೀವ್ ನಗರ ಬಡಾವಣೆಯಲ್ಲಿ ಕನ್ನಡ ಕಡಿಮೆ ಬಳಕೆ ಇರುವ ಪ್ರದೇಶದಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಿ 10 ವರ್ಷಗಳ ಕಾಲ ಸೈಯದ್ ನಡೆಸಿದ್ದರು. ಆದರೆ ದುರಾದೃಷ್ಟವಶಾತ್ ಕಿಡಿಗೇಡಿಯೊಬ್ಬ ಮಾಡಿದ ಎಡವಟ್ಟಿನಿಂದಾಗಿ ವರ್ಷಗಳ ಕಾಲದಿಂದ ಇದ್ದ ಇಸಾಕ್ ಅವರ ಗ್ರಂಥಾಲಯ, ಬೆಂಕಿ ಅನಾಹುತದಲ್ಲಿ ಸುಟ್ಟು ಭಸ್ಮವಾಗಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ ಗ್ರಂಥಾಲಯ ತಲೆಎತ್ತಿದೆ .
ಸೈಯದ್ ಅವರ ಗ್ರಾಂಥಾಲಯ ಬೆಂಕಿಗೆ ಆಹುತಿಯಾದ ಘಟಬೆ ಅದೆಷ್ಟೋ ಜನರಿಗೆ ಬೇಸರ ತಂದಿತ್ತು . ದೇಶದ ನಾನಾ ಭಾಗಗಳಿಂದ ಸೈಯದ್ ಅವರಿಗೆ ಬೆಂಬಲ ವ್ಯಕ್ತವಾಗಿತ್ತು. ಸರ್ಕಾರ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಇಸಾಕ್ ಅವರಿಗೆ ಹಣ ಸಹಾಯ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳು ನಡೆದ ತಿಂಗಳುಗಳೇ ಕಳೆದರೂ ಗ್ರಂಥಾಲಯ ನಿರ್ಮಿಸಿಕೊಡುವ ಕುರಿತು ಸರ್ಕಾರ ನೀಡಿದ್ದ ಭರವಸೆ ಕಾರ್ಯರೂಪಕ್ಕೆ ಬಾರದ ಹಿನ್ನೆಲೆಯಲ್ಲಿ, ರಾಜೀವ್ ನಗರದ ಪುಸ್ತಕ ಪ್ರೇಮಿ ಸೈಯದ್ ಇಸಾಕ್, ತಾವೇ ಶೆಲ್ಟರ್ ನಿರ್ಮಿಸಿ ಗ್ರಂಥಾಲಯ ಮರು ಆರಂಭಿಸಿದ್ದಾರೆ. ಮತ್ತೆ ಓದುಗರ ಭೇಟಿಗೂ ಅವಕಾಶ ನೀಡಿದ್ದಾರೆ. ಗಣರಾಜ್ಯೋತ್ಸವಕ್ಕೆ ಅಧಿಕೃತವಾಗಿ ಉದ್ಘಾಟನೆಯಾಗಿದೆ.
ಸರಕಾರ ಭರವಸೆ ಈಡೇರದಿದ್ರೂ ಸೈಯದ್ ಸ್ವಾಭಿಮಾನ ಗೆದ್ದಿದೆ . ಬೆಂಕಿಗಾಹುತಿಯಾಗಿದ್ದ ಸ್ಥಳದಲ್ಲೇ ಲೈಬ್ರರಿ ಮರು ಆರಂಭಗೊಂಡಿದೆ. ಕನ್ನಡ ಪಸರಿಸುವ ಸೈಯದ್ ಕನಸಿಗೆ ಮತ್ತೊಮ್ಮೆ ಜೀವ ಬಂದಿದೆ. ಲೈಬ್ರರಿಯಲ್ಲಿ ಕನ್ನಡ ನುಡಿಮುತ್ತುಗಳು ಎಲ್ಲರ ಗಮನ ಸೆಳೆಯುತ್ತಿದೆ. ಕನ್ನಡ ಹೆಸರಾಂತ ಕವಿಗಳ ಭಾವಚಿತ್ರವು ಗ್ರಂಥಾಲಯದಲ್ಲಿ ರಾರಾಜಿಸುತ್ತಿವೆ.
Read more
[wpas_products keywords=”deal of the day sale today offer all”]