ಹೈಲೈಟ್ಸ್:
- 2021-22ರ ಸಾಲಿನ ವಿಜಯ್ ಹಝಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ.
- ಬಂಗಾಳ ವಿರುದ್ಧ ನಡೆದ ಕೊನೇ ಲೀಗ್ ಪಂದ್ಯದಲ್ಲಿ ಕರ್ನಾಟಕಕ್ಕೆ ಸೋಲು.
- ನಾಯಕ ಮನೀಶ್ ಪಾಂಡೆ ಹೋರಟಯುತ ಅರ್ಧಶತಕ ವ್ಯರ್ಥ.
ಇಲ್ಲಿನ ಸೇಂಟ್ ಗ್ಸೇವಿಯರ್ ಕಾಲೇಜು ಕ್ರಿಕೆಟ್ ಗ್ರೌಂಡ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಕರ್ನಾಟಕ ತಂಡ ತನ್ನ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 252 ರನ್‌ಗಳ ಸಾಧಾರಣ ಮೊತ್ತ ದಾಖಲಿಸಲಷ್ಟೇ ಶಕ್ತವಾಯಿತು.
ಕರ್ನಾಟಕದ ಪರ ಓಪನರ್ ರೋಹನ್ ಕದಮ್ (37), ಕರುಣ್ ನಾಯರ್ (25) ಮತ್ತು ಪ್ರವೀಣ್ ದುಬೇ (37*) ಉತ್ತಮ ಬ್ಯಾಟಿಂಗ್ ನಡೆಸಿದರೆ, ನಾಯಕನ ಆಟವಾಡಿದ ಮನೀಶ್ ಪಾಂಡೆ 85 ಎಸೆತಗಳಲ್ಲಿ ತಲಾ ನಾಲ್ಕು ಫೋರ್ ಮತ್ತು ಸಿಕ್ಸರ್‌ಗಳೊಂದಿಗೆ 90 ರನ್ ಸಿಡಿಸಿ ಶತಕ ವಂಚಿತರಾದರು. ಬಂಗಾಳ ಪರ ಎಡಗೈ ಸ್ಪಿನ್ನರ್ ಪ್ರದೀಪ್ತಾ ಪ್ರಾಮಾಣಿಕ್ (48ಕ್ಕೆ 4) ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಕರ್ನಾಟಕ ತಂಡ ದೊಡ್ಡ ಮೊತ್ತ ಗಳಿಸಿದಂತೆ ಮಾಡಿದರು.
ಮೆಗಾ ಆಕ್ಷನ್‌ನಲ್ಲಿ ಈ 5 ಸ್ಪಿನ್ನರ್‌ಗಳಿಗೆ ಹಣದ ಹೊಳೆ ಹರಿಯೋ ಸಾಧ್ಯತೆ!
ಬಂಗಾಳಕ್ಕೆ ದೊಡ್ಡ ಗೆಲುವು ಬೇಕಿತ್ತು!
ಬಳಿಕ ಗುರಿ ಬೆನ್ನತ್ತಿದ ಬಂಗಾಳ ತಂಡಕ್ಕೆ ನಾಕ್‌ಔಟ್ಸ್ ಹಂತಕ್ಕೇರಲು ಭರ್ಜರಿ ಗೆಲುವಿನ ಅಗತ್ಯವಿತ್ತು. 253 ರನ್‌ಗಳ ಗುರಿಯನ್ನು 25 ಓವರ್‌ಗಳ ಒಳಗೆ ಮೆಟ್ಟಿ ನಿಂತಿದ್ದರೆ ಬಹುಶಃ ರನ್ ರೇಟ್ ಸುಧಾರಿಸಿ ಬಂಗಾಳಕ್ಕೆ ಪ್ರಿ ಕ್ವಾರ್ಟರ್ ಫೈನಲ್ಸ್ ತಲುಪುವ ಅವಕಾಶ ಸಿತ್ತುತ್ತಿತ್ತು. ಆದರೆ, ಕರ್ನಾಟಕದ ಶಿಸ್ತಿನ ಬೌಲಿಂಗ್ ಎದುರು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ 6 ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ 48.3 ಗೆಲುವಿನ ದಡ ಸೇರಿತು.
ಈ ಜಯದೊಂದಿಗೆ ಬಂಗಾಳ ಕೂಡ ‘ಬಿ’ ಗುಂಪಿನಲ್ಲಿ 3 ಜಯ ಮತ್ತು 2 ಸೋಲಿನೊಂದಿಗೆ 12 ಅಂಕಗಳನ್ನು ಗಳಿಸಿದೆ ಆದರೂ, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಈ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಮಿಳುನಾಡು ತಂಡಕ್ಕೆ ಅಂತಿಮ 8ರ ಘಟ್ಟಕ್ಕೆ (ಕ್ವಾರ್ಟರ್‌ಫೈನಲ್ಸ್) ನೇರ ಅರ್ಹತೆ ಲಭ್ಯವಾಗಿದೆ. ದ್ವಿತೀಯ ಸ್ಥಾನ ಪಡೆದ ಕರ್ನಾಟಕ ತಂಡ ಪ್ರಿಕ್ವಾರ್ಟರ್ ಫೈನಲ್ಸ್‌ಗೆ ಅರ್ಹತೆ ಪಡೆದಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಓಡಿಐ ಸರಣಿಯಿಂದ ವಿರಾಟ್ ಕೊಹ್ಲಿ ಔಟ್?
ಲೀಗ್ ಹಂತದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಪಾಂಟಿಚೆರಿ ತಂಡವನ್ನು ಕಾರ್ನಾಟಕ ತಂಡ 200ಕ್ಕೂ ಹೆಚ್ಚು ರನ್‌ಗಳ ಅಂತರದಲ್ಲಿ ಸೋಲುಣಿಸಿದ್ದು, ನೆಟ್ ರನ್‌ರೇಟ್ ಗಳಿಕೆಗೆ ನೆರವಾಯಿತು. ಇದೀಗ ಇದೇ ನೆಟ್ ರನ್‌ರೇಟ್ ಬಲದಿಂದ ಟೂರ್ನಿಯಲ್ಲಿ ಮುಂದಿನ ಘಟ್ಟಕ್ಕೆ ಕಾಲಿಟ್ಟಿದೆ.
ಸಂಕ್ಷಿಪ್ತ ಸ್ಕೋರ್
ಕರ್ನಾಕಟ: 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 252 ರನ್ (ರೋಹನ್ ಕದಮ್ 37, ಮನೀಶ್ ಪಾಂಡೆ 90, ಕರುಣ್ ನಾಯರ್ 25, ಪ್ರವೀಣ್ ದುಬೇ 37*; ಪ್ರದೀಪ್ತಾ ಪ್ರಾಮಾಣಿಕ್ 48ಕ್ಕೆ 4, ವೃತಿಕ್ ಚಟರ್ಜಿ 51ಕ್ಕೆ 2, ಶಹಯಬಾಝ್ ಅಹ್ಮದ್ 40ಕ್ಕೆ 1).
ಬಂಗಾಳ: 48.3 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 253 ರನ್ (ಅಭಿಷೇಕ್ ದಾಸ್ 58, ಸುದೀಪ್ ಚಟರ್ಜಿ 63, ಋತ್ವಿಕ್ ರಾಯ್ ಚೌಧುರಿ 49, ಶಹಬಾಝ್ ಅಹ್ಮದ್ 26*; ಪ್ರತೀಕ್ ಜೈನ್ 56ಕ್ಕೆ 3).