ಹೈಲೈಟ್ಸ್:
- ನಟ ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ ನಟನೆಯ ‘ಮಾಫಿಯಾ’
- ‘ಮಾಫಿಯಾ’ ಚಿತ್ರಕ್ಕೆ ಲೋಹಿತ್ ನಿರ್ದೇಶನ
- ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಅವರಿಗೆ ಇದು 666ನೇ ಸಿನಿಮಾ
ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದ ಟೀಸರ್ ಕೂಡ ಏಕಕಾಲಕ್ಕೆ ಬಿಡುಗಡೆಯಾಗಿದೆ. ಕನ್ನಡದಲ್ಲಿ ಧ್ರುವ ಸರ್ಜಾ, ಸತೀಶ್ ನೀನಾಸಂ ಹಾಗೂ ರಿಷಬ್ ಶೆಟ್ಟಿ, ತೆಲುಗಿನಲ್ಲಿ ಸುಧೀರ್ ಬಾಬು ಮತ್ತು ರಾಜಶೇಖರ್ ಹಾಗೂ ತಮಿಳಿನಲ್ಲಿ ಸತ್ಯರಾಜ್, ವೆಂಕಟ್ ಪ್ರಭು, ಪಾರ್ಥಿಬನ್ ಹಾಗೂ ನಿರ್ದೇಶಕ ಶಿಶೀಂದ್ರನ್ “ಮಾಫಿಯಾ” ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಅಷ್ಟೇ ಅಲ್ಲದೇ ಚಿತ್ರದ ಆಡಿಯೋ ಹಕ್ಕು ಸಹ ಆನಂದ್ ಆಡಿಯೋಗೆ ಭಾರೀ ಮೊತ್ತಕ್ಕೆ ಮಾರಾಟವಾಗಿದೆ.
ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ದೇವರಾಜ್ ಅವರು ಸಹ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಧುಕೋಕಿಲ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. ತರುಣ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ.
ಮತ್ತೊಂದು ಸಿನಿಮಾಕ್ಕೆ ಚಾಲನೆ ಕೊಟ್ಟ ನಟ ಪ್ರಜ್ವಲ್ ದೇವರಾಜ್; ಟೈಟಲ್ ಏನು?
ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ದೇವರಾಜ್ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ‘ಅರ್ಜುನ’ ಚಿತ್ರದಲ್ಲಿ ಇವರಿಬ್ಬರು ವಿರುದ್ಧ ಪಾತ್ರಗಳಲ್ಲಿ ನಟಿಸಿದ್ದೆವು. ಸಾಧುಕೋಕಿಲ ಅವರು ಸ್ಪೆಷಲ್ ಪೊಲೀಸ್ ಆಫಿಸರ್ ಆಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ದುನಿಯಾ ವಿಜಯ್, ಪ್ರಿಯಾಂಕಾ ಉಪೇಂದ್ರ ಆಗಮಿಸಿ ಸಾಥ್ ನೀಡಿದ್ದರು. ಈ ಚಿತ್ರಕ್ಕಾಗಿ ಎರಡು ವರ್ಷಗಳಿಂದ ಬೆಳೆಸಿದ ಕೂದಲನ್ನು ಕತ್ತರಿಸಿ, ಹೊಸ ಲುಕ್‌ನಲ್ಲಿ ಪ್ರಜ್ವಲ್ ರೆಡಿಯಾಗಿದ್ದಾರೆ. ಒರಟ ಪ್ರಶಾಂತ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿರೋದು ವಿಶೇಷ. ತನಿಖೆ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿರುವ ಅದಿತಿ ಪ್ರಭುದೇವ ಈ ಪಾತ್ರಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಂಡಿದ್ದರಂತೆ. ಪ್ರಜ್ವಲ್ ಅವರೊಟ್ಟಿಗೆ ಮೊದಲ ಬಾರಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ.
‘ಮಾಫಿಯಾ’ಕ್ಕಾಗಿ ಪೊಲೀಸ್ ಪೋಷಾಕು ಧರಿಸಿದ ಅಪ್ಪ ‘ಡೈನಾಮಿಕ್’ ದೇವರಾಜ್, ಮಗ ಪ್ರಜ್ವಲ್ ದೇವರಾಜ್
ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿರುವ ಲೋಹಿತ್ ಅವರು ‘ಮಮ್ಮಿ’, ‘ದೇವಕಿ’ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಆ ಚಿತ್ರಗಳಿಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗಿತ್ತು. ಚಿಕ್ಕ ವಯಸ್ಸಿನಿಂದ ಯಾರು ಇಲ್ಲದ ಹುಡುಗನಿಗೆ ಗೆಳೆಯನ ಮೇಲೆ ಹೆಚ್ಚು ಪ್ರೀತಿ ಇರುತ್ತದೆ. ಅವನ ಗೆಳೆಯ ಕೂಡ ಇಮ್ಸ್‌ಪೆಕ್ಟರ್ ಆಗಿರುತ್ತಾನೆ. ಆತನನ್ನು ನೋಡಿ ಹೀರೋ, ತಾನು ಕೂಡ ಪೊಲೀಸ್ ಇನ್ಸ್‌ಪೆಕ್ಟರ್ ಆಗಬೇಕು ಎಂದುಕೊಳ್ಳುತ್ತಾನೆ. ಆ ನಂತರ ಏನಾಗುವುದು ಎಂಬುದು ಮಾಫಿಯಾ ಚಿತ್ರಕಥೆಯಂತೆ. ಅಂದಹಾಗೆ ಇದೊಂದು ಕಂಟೆಂಟ್ ಓರಿಯಂಟೆಡ್ ಚಿತ್ರ. ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿ, ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ. ಈ ಸಿನಿಮಾಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಅವರಿಗೆ ಇದು 666ನೇ ಸಿನಿಮಾ.
Read more
[wpas_products keywords=”deal of the day party wear dress for women stylish indian”]