ಹೈಲೈಟ್ಸ್:
- ಮೈಸೂರು ನಗರದ ಉದಯಗಿರಿಯ ಸಾತಗಳ್ಳಿ ಲೇಔಟ್‌ನಲ್ಲಿ ಘಟನೆ
- 26 ವರ್ಷ ವಯಸ್ಸಿನ ಸಂತೋಷ್ ಹಾಗೂ 22 ವರ್ಷ ವಯಸ್ಸಿನ ಭವ್ಯ ಮೃತ ದಂಪತಿ
- ಊಟದಲ್ಲಿ ವಿಷ ಬೆರೆಸಿಕೊಂಡು ಆತ್ಮಹತ್ಯೆಗೆ ಶರಣು
ಮೈಸೂರು ನಗರದ ಉದಯಗಿರಿಯ ಸಾತಗಳ್ಳಿ ಲೇಔಟ್‌ನಲ್ಲಿ ಈ ದಾರುಣ ಘಟನೆ ನಡೆದಿದೆ. 26 ವರ್ಷ ವಯಸ್ಸಿನ ಸಂತೋಷ್ ಹಾಗೂ 22 ವರ್ಷ ವಯಸ್ಸಿನ ಭವ್ಯ ಮೃತ ದಂಪತಿ. ಇಬ್ಬರೂ ಊಟದಲ್ಲಿ ವಿಷ ಬೆರೆಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಂತೋಷ್ ಮತ್ತು ಭವ್ಯ ಕಳೆದ ಕೆಲ ದಿನಗಳಿಂದ ಆರ್ಥಿಕ ಸಮಸ್ಯೆಗೆ ಸಿಲುಕಿದ್ದರು. ಹೀಗಾಗಿ ಸಾಲಕ್ಕೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಉದಯಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಊಟದಲ್ಲಿ ಸೈನೇಡ್..!?
ದಂಪತಿಯ ಆತ್ಮಹತ್ಯೆ ಹಿಂದೆ ಸಾಕಷ್ಟು ಅನುಮಾನ ಮೂಡುತ್ತಿದೆ. ಮೂಲಗಳ ಪ್ರಕಾರ ಸೈನೇಡ್ ಸೇವಿಸಿ ದಂಪತಿ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ 4 – 5 ದಿನಗಳಿಂದಲೂ ಈ ದಂಪತಿ ಮಾನಸಿಕವಾಗಿ ತುಂಬಾನೇ ನೊಂದಿದ್ದರು. ಮೌನಕ್ಕೆ ಶರಣಾಗಿದ್ದರು ಎಂದು ಹತ್ತಿರದಿಂದ ನೋಡಿದವರು ಮಾಹಿತಿ ನೀಡಿದ್ದಾರೆ. ಸಮಸ್ಯೆಯಿಂದ ಹೊರ ಬರಲಾರದೆ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬದುಕಿಗೇ ಉರುಳಾದ ಸಾಲದ ಶೂಲ..!
ಕೋವಿಡ್ ಅಲೆ ಬಂದಾಗಿನಿಂದ ಮಧ್ಯಮ ವರ್ಗದ ಬಹಳಷ್ಟು ಕುಟುಂಬಗಳ ಆರ್ಥಿಕತೆ ಕುಗ್ಗಿದೆ. ಜೀವನ ನಿರ್ವಹಣೆಗೆ ಪರಿತಪಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಇದೇ ಪರಿಸ್ಥಿತಿ ಸಂತೋಷ್ ಮತ್ತು ಭವ್ಯ ದಂಪತಿಗೂ ಎದುರಾಗಿತ್ತು. ಜೀವನ ನಿರ್ವಹಣೆಗಾಗಿ ಈ ದಂಪತಿ ಸಾಕಷ್ಟು ಸಾಲ ಮಾಡಿಕೊಂಡಿದ್ರು. ನಿಗದಿತ ಸಮಯಕ್ಕೆ ಸಾಲ ತೀರಿಸಲು ಸಾಧ್ಯವಾಗದೆ ಪರದಾಡುತ್ತಿದ್ದರು. ಬಡ್ಡಿಗೆ ಬಡ್ಡಿ ಬೆಳೆದು ಸಾಲ ಬೆಟ್ಟದಷ್ಟು ಆಗಿತ್ತು. ಇತ್ತೀಚಿನ ದಿನಗಳಲ್ಲಿ ಊಟಕ್ಕೂ ಕಷ್ಟ ಪಡುವಂಥಹ ಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ. ಹೀಗಾಗಿ, ಭವಿಷ್ಯದ ಬಗ್ಗೆ ಇಬ್ಬರೂ ಚಿಂತೆಗೆ ಬಿದ್ದಿದ್ದರು. ಹೀಗಾಗಿ, ದಿಕ್ಕು ತೋಚದಂತಾದ ದಂಪತಿ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿ ಹೊಸ ಬದುಕಿನ ಆರಂಭದಲ್ಲೇ ಸಾವಿಗೆ ಶರಣಾಗಿದ್ದಾರೆ.
ಹೆಚ್ಚುತ್ತಿದೆ ಆತ್ಮಹತ್ಯೆ ಪ್ರಕರಣ..
ಕೋವಿಡ್ ಅಟ್ಟಹಾಸ, ಲಾಕ್‌ಡೌನ್, ಕರ್ಫ್ಯೂ ಹೀಗೆ ಹಲವು ನಿರ್ಬಂಧಗಳಿಂದಾಗಿ ಬಡವರು, ಮಧ್ಯಮ ವರ್ಗದವರು ಅದರಲ್ಲೂ ವ್ಯಾಪಾರ, ವಹಿವಾಟಿನಲ್ಲಿ ತೊಡಗಿರುವವರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಬಹಳಷ್ಟು ಕಡೆ ಉತ್ತಮ ಸಂಬಳ ಪಡೆಯುತ್ತಿದ್ದ ನೌಕರರೂ ಕೂಡಾ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ, ಹಣಕಾಸಿನ ಮುಗ್ಗಟ್ಟು ಸರ್ವೇ ಸಾಮಾನ್ಯ ಎಂಬಂತಾಗಿದೆ. ಇದು ಮಾನಸಿಕ ಖಿನ್ನತೆ ಹಾಗೂ ಆತ್ಮಹತ್ಯೆಗೆ ದಾರಿ ಮಾಡಿಕೊಡುತ್ತಿದೆ. ಆದ್ರೆ, ಹೊಸದಾಗಿ ಮದುವೆಯಾದ ಜೋಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಹೊತ್ತಲ್ಲಿ ಆತ್ಮಹತ್ಯೆಗೆ ಶರಣಾಗಿರೋದು ಸಾಂಸ್ಕೃತಿಕ ನಗರಿ ಮೈಸೂರಿನ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಪೊಲೀಸರಿಂದ ತನಿಖೆ
ಪ್ರಕರಣವನ್ನು ಮೈಸೂರು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸಂತೋಷ್ ಮತ್ತು ಭವ್ಯ ಕುಟುಂಬದ ಸದಸ್ಯರ ವಿಚಾರಣೆ ನಡೆಸೋ ಸಾಧ್ಯತೆ ಇದೆ. ಮೊಬೈಲ್ ಕಾಲ್ ಹಿಸ್ಟರಿ ಪರಿಶೀಲನೆಗೂ ಮುಂದಾಗಿದ್ದಾರೆ. ಸಕಲ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದಾರೆ.
Read more
[wpas_products keywords=”deal of the day sale today offer all”]