Karnataka news paper

ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯ ಕುದುರೆ ‘ವಿರಾಟ್’ ನಿವೃತ್ತಿ: ಪ್ರಧಾನಿ, ರಾಷ್ಟ್ರಪತಿಯಿಂದ ವಿದಾಯ


ಹೈಲೈಟ್ಸ್‌:

  • ರಾಷ್ಟ್ರಪತಿಗಳ ಅಂಗರಕ್ಷಕ ಕಮಾಂಡೆಂಟ್ ಕುದುರೆ ವಿರಾಟ್ ನಿವೃತ್ತಿ
  • 13 ಬಾರಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದ ಕುದುರೆ
  • ವಿರಾಟ್ ಮೈದಡವಿ ವಿದಾಯ ಹೇಳಿದ ಪ್ರಧಾನಿ, ರಾಷ್ಟ್ರಪತಿ, ಸಚಿವರು
  • ಸೇನಾ ಸಿಬ್ಬಂದಿ ಮುಖ್ಯಸ್ಥರಿಂದ ಗೌರವ ಪಡೆದಿದ್ದ ಮೊದಲ ಕುದುರೆ

ಹೊಸದಿಲ್ಲಿ: ರಾಜಪಥದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ ಬಳಿಕ ರಾಷ್ಟ್ರಪತಿಗಳ ಅಂಗ ರಕ್ಷಕ ಪಡೆ (ಪಿಬಿಜಿ) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಭವನಕ್ಕೆ ಕರೆತಂದಿತ್ತು. ಈ ವೇಳೆ ಗಮನ ಸೆಳೆದಿದ್ದು ಪಿಬಿಜಿಯ ವಿಶೇಷ ಕುದುರೆ ವಿರಾಟ್. ಅಲ್ಲಿದ್ದ ಪ್ರತಿಯೊಬ್ಬರ ಗಮನ ವಿರಾಟ್ ಮೇಲೆಯೇ ಇತ್ತು.

ರಾಷ್ಟ್ರಪತಿಗಳ ಬಾಡಿಗಾರ್ಡ್ ಕಮಾಂಡೆಂಟ್‌ನ ಕಪ್ಪು ಕುದುರೆಯಾದ ವಿರಾಟ್, 13 ಬಾರಿ ಗಣರಾಜ್ಯೋತ್ಸವ ಪಥಸಂಚಲನಗಳಲ್ಲಿ ಭಾಗವಹಿಸಿತ್ತು. ಬಾಡಿಗಾರ್ಡ್ ಕಮಾಂಡೆಂಟ್ ಕರ್ನಲ್ ಅನೂಪ್ ತಿವಾರಿ ಅವರು ಸವಾರಿ ಮಾಡುತ್ತಿದ್ದ ಈ ಕುದುರೆ, ಜನವರಿ 15ರ ಸೇನಾ ದಿನದಂದು ಸೇನಾ ಸಿಬ್ಬಂದಿ ಕಮೆಂಡೇಷನ್ ಗೌರವ ಪಡೆದಿತ್ತು. ಈ ಗೌರವ ಪಡೆದ ಮೊದಲ ಕುದುರೆ ಎನಿಸಿತ್ತು.
ಗಣರಾಜ್ಯೋತ್ಸವ ಟ್ಯಾಬ್ಲೋದಲ್ಲಿ ಭಾರತದ ಮೊದಲ ಮಹಿಳಾ ರಫೇಲ್ ಪೈಲಟ್ ಶಿವಾಂಗಿ ಸಿಂಗ್
ಗಣರಾಜ್ಯ ದಿನದ ಪಥಸಂಚಲನದ ಮುಕ್ತಾಯದೊಂದಿಗೆ ವಿರಾಟ್‌ನ ನಿವೃತ್ತಿಯನ್ನು ಪಿಬಿಜಿ ಘೋಷಿಸಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಥಸಂಚಲನದ ಬಳಿಕ ವಿರಾಟ್ ಮೈದಡವಿ, ಅದಕ್ಕೆ ವಿದಾಯ ಹೇಳಿದರು.

ಪಥಸಂಚಲನ ಸಂದರ್ಭದಲ್ಲಿ ವಿರಾಟ್ ಅತ್ಯಂತ ವಿಶ್ವಾಸಾರ್ಹ ಕುದುರೆಯಾಗಿತ್ತು. ಹಾನೋವೇರಿಯನ್ ತಳಿಯ ಈ ಕುದುರೆಯನ್ನು 2003ರಲ್ಲಿ ಅಂಗರಕ್ಷಕ ಪಡೆಗೆ ಸೇರ್ಪಡೆ ಮಾಡಲಾಗಿತ್ತು. ಇದಕ್ಕೆ ರಾಷ್ಟ್ರಪತಿ ಬಾಡಿಗಾರ್ಡ್‌ನ ‘ಚಾರ್ಜರ್’ ಎಂದೂ ಕರೆಯಲಾಗುತ್ತಿತ್ತು.

ಬಹಳ ಶಿಸ್ತಿನ ಪ್ರಾಣಿಯಾದ ವಿರಾಟ್, ತನ್ನ ಗಾತ್ರ ಹಾಗೂ ಆಕಾರದಿಂದ ಜನಪ್ರಿಯತೆ ಪಡೆದಿತ್ತು. ತನ್ನ ವೃದ್ಧಾಪ್ಯದ ಮಧ್ಯೆಯೂ ವಿರಾಟ್, 2021ರ ಗಣರಾಜ್ಯೋತ್ಸವ ದಿನದ ಪಥಸಂಚಲನ ಮತ್ತು ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಅದ್ಭುತ ಪ್ರದರ್ಶನ ತೋರಿತ್ತು.
ಕಾಸರಗೋಡಿನಲ್ಲಿ ತಲೆಕೆಳಗಾಗಿ ಹಾರಾಡಿದ ರಾಷ್ಟ್ರಧ್ವಜ: ಸಚಿವರ ರಾಜೀನಾಮೆಗೆ ಬಿಜೆಪಿ ಆಗ್ರಹ
ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯು ಭಾರತೀಯ ಸೇನೆಯ ಅತ್ಯಂತ ಉತ್ಕೃಷ್ಟ ರೆಜಿಮೆಂಟ್ ಆಗಿದೆ. ಸಾವಿರಾರು ಯೋಧರ ಮಧ್ಯೆ ಕೆಲವರನ್ನು ಅನೇಕ ಮಾನದಂಡಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. 200 ಪ್ರಬಲ ಅಶ್ವ ದಳವನ್ನು ದೇಶದ ಅತ್ಯುನ್ನತ ವಿಐಪಿಗಳಿಗೆ ಮೀಸಲಿಡಲಾಗುತ್ತದೆ. ಇದು ಶತಮಾನಗಳಿಂದಲೂ, ಬ್ರಿಟಿಷ್ ವೈಸ್‌ರಾಯ್‌ನಿಂದ ಆಧುನಿಕ ಕಾಲದ ರಾಷ್ಟ್ರಪತಿವರೆಗೂ ಈ ಪರಂಪರೆ ಬೆಳೆದು ಬಂದಿದೆ.

ಪ್ರತಿ ಗಣರಾಜ್ಯ ದಿನದಂದು ಕಡುಗೆಂಪು ಬಣ್ಣದ ಕೋಟ್‌ಗಳು, ಚಿನ್ನದ ಬಣ್ಣ ಕವಚ ಮತ್ತು ಆಕರ್ಷಕ ಪೇಟಗಳನ್ನು ಧರಿಸಿದ ಅಶ್ವಾರೋಹಿಗಳು, ರಾಷ್ಟ್ರಪತಿ ಅವರನ್ನು ವೇದಿಕೆಗೆ ಬೆಂಗಾವಲಿನಲ್ಲಿ ಕರೆತರುತ್ತಾರೆ ಮತ್ತು ರಾಷ್ಟ್ರಗೀತೆ ಆರಂಭವಾಗುವುದಕ್ಕೆ ಆದೇಶ ನೀಡುತ್ತಾರೆ. ಪಿಬಿಜಿ ಸಿಬ್ಬಂದಿ ಸಮರ್ಥ ಟ್ಯಾಂಕ್‌ಮೆನ್ ಮತ್ತು ಪ್ಯಾರಾಟ್ರೂಪ್‌ಗಳೂ ಆಗಿರುತ್ತಾರೆ.



Read more

[wpas_products keywords=”deal of the day sale today offer all”]