Karnataka news paper

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌ ನೇತೃತ್ವದಲ್ಲಿ ಜೆಡಿಎಸ್‌ ನೂತನ ಕೋರ್‌ ಕಮಿಟಿ ರಚನೆ


ಹೈಲೈಟ್ಸ್‌:

  • ಪಟ್ಟಿ ಬಿಡುಗಡೆ ಮಾಡಿದ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ
  • ಮಾಜಿ ಸಚಿವ ಎನ್. ಎಂ. ನಬಿ ಜೆಡಿಎಸ್‌ ರಾಜ್ಯ ಕಾರ್ಯಾಧ್ಯಕ್ಷ
  • ಜೆಡಿಎಸ್‌ ಪರಿಶಿಷ್ಠ ಪಂಗಡ ರಾಜ್ಯಾಧ್ಯಕ್ಷರಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ದೊರೆ

ಬೆಂಗಳೂರು: ಜೆಡಿಎಸ್‌ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌ ಅವರ ಅಧ್ಯಕ್ಷತೆಯಲ್ಲಿ ನೂತನ ಕೋರ್‌ ಕಮಿಟಿ ರಚನೆ ಮಾಡಲಾಗಿದ್ದು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಪಟ್ಟಿಯನ್ನು ಬಿಡುಗಡೆ ಮಾಡಿದರು.

ಪಕ್ಷದ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಅವರು ಮಾಧ್ಯಮಗೋಷ್ಠಿಯಲ್ಲಿ 20 ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಸೋತಿದ್ದಕ್ಕೆ ನಾವು ಕಣ್ಣೀರು ಹಾಕಿಲ್ಲ; ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಎಚ್‌ಡಿ ಕುಮಾರಸ್ವಾಮಿ
1. ಬಂಡೆಪ್ಪ ಕಾಶೆಂಪೂರ್ -‌ ಅಧ್ಯಕ್ಷರು
2. ವೆಂಕಟರಾವ್‌ ನಾಡಗೌಡ – ಸದಸ್ಯರು
3. ಸಿ. ಎಸ್. ಪುಟ್ಟರಾಜು — ಸದಸ್ಯರು
4. ಪ್ರಜ್ವಲ್‌ ರೇವಣ್ಣ — ಸದಸ್ಯರು
5. ಕುಪೇಂದ್ರ ರೆಡ್ಡಿ — ಸದಸ್ಯರು
6. ಮೊಹಮ್ಮದ್‌ ಝಫ್ರುಲ್ಲಾಖಾನ್ – ಸದಸ್ಯರು
7. ಎಂ. ಕೃಷ್ಣಾರೆಡ್ಡಿ – ಸದಸ್ಯರು
8. ರಾಜಾ ವೆಂಕಟಪ್ಪ ನಾಯಕ – ಸದಸ್ಯರು
9. ಬಿ. ಎಂ. ಫಾರೂಕ್ – ಸದಸ್ಯರು‌
10. ಕೆ. ಎ. ತಿಪ್ಪೇಸ್ವಾಮಿ – ಸದಸ್ಯರು & ಸಂಚಾಲಕರು
11. ವೈಎಸ್‌ವಿ ದತ್ತ — ಸದಸ್ಯರು
12. ಕೆ. ಎಂ. ತಿಮ್ಮರಾಯಪ್ಪ – ಸದಸ್ಯರು
13. ಟಿ. ಎ. ಶರವಣ – ಸದಸ್ಯರು
14. ಶಾರದಾ ಪೂರ್ಯನಾಯಕ್ – ಸದಸ್ಯರು‌
15. ನಾಸೀರ್‌ ಭಗವಾನ್ – ಸದಸ್ಯರು‌
16. ಹನುಮಂತಪ್ಪ ಬಸಪ್ಪ ಮಾವಿನ ಮರದ – ಸದಸ್ಯರು
17. ರೂತ್‌ ಮನೋರಮಾ – ಸದಸ್ಯರು
18. ಸುಧಾಕರ್‌ ಎಸ್.‌ ಶೆಟ್ಟಿ – ಸದಸ್ಯರು
19. ವಿ. ನಾರಾಯಣ ಸ್ವಾಮಿ – ಸದಸ್ಯರು
20. ಸಮೃದ್ಧಿ ಮಂಜುನಾಥ್ – ಸದಸ್ಯರು‌

ಸಿದ್ದರಾಮಯ್ಯನವರು ಮೊದಲೇ ಪಕ್ಷಾಂತರಿಗಳು! ಆರ್‌. ಅಶೋಕ್
ವಿಶೇಷ ಆಹ್ವಾನಿತರು

– ಎಚ್‌. ಡಿ. ದೇವೇಗೌಡರು, ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರು

– ಎಚ್. ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರು

– ಎಚ್. ಕೆ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷರು

ಎನ್. ಎಂ. ನಬಿ ಜೆಡಿಎಸ್‌ ರಾಜ್ಯ ಕಾರ್ಯಾಧ್ಯಕ್ಷರಾಗಿ ನೇಮಕ

ಮಾಜಿ ಸಚಿವ ಎನ್. ಎಂ. ನಬಿ ಅವರನ್ನು ಜೆಡಿಎಸ್‌ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಾಗೆಯೇ ಶಾಸಕ ರಾಜಾ ವೆಂಕಟಪ್ಪ ನಾಯಕ ದೊರೆ ಅವರನ್ನು ಜೆಡಿಎಸ್‌ ಪರಿಶಿಷ್ಠ ಪಂಗಡ ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ರಾಜ್ಯಾಧ್ಯಕ್ಷ ಎಚ್‌. ಕೆ. ಕುಮಾರಸ್ವಾಮಿ ಅವರು ನೇಮಕ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿಲ್ಲ! ಎಚ್‌ಡಿಕೆ



Read more

[wpas_products keywords=”deal of the day sale today offer all”]