ಹೈಲೈಟ್ಸ್:
- 73ನೇ ಗಣರಾಜ್ಯ ದಿನ ಆಚರಣೆ ಪ್ರಯುಕ್ತ ಟ್ಯಾಬ್ಲೋಗಳ ಪ್ರದರ್ಶನ
- ಭಾರತದ ಮೊದಲ ಮಹಿಳಾ ರಫೇಲ್ ಪೈಲಟ್ ಶಿವಾಂಗಿ ಸಿಂಗ್ ಭಾಗಿ
- ಭವಿಷ್ಯಕ್ಕಾಗಿ ಭಾರತೀಯ ವಾಯುಪಡೆ ಪರಿವರ್ತನೆ ಥೀಮ್ ಟ್ಯಾಬ್ಲೋ
ವಾರಾಣಸಿ ಮೂಲದ ಶಿವಾಂಗಿ ಸಿಂಗ್ ಅವರು 2017ರಲ್ಲಿ ಐಎಎಫ್ ಸೇರಿಕೊಂಡಿದ್ದರು. ಐಎಎಫ್ ಮಹಿಳಾ ಯುದ್ಧ ವಿಮಾನ ಪೈಲಟ್‌ಗಳ ಎರಡನೇ ಬ್ಯಾಚ್‌ಗೆ ನೇಮಕವಾಗಿದ್ದರು. ಅವರು ಮಿಗ್-21 ಬಿಸಾನ್ ಯುದ್ಧ ವಿಮಾನ ಚಾಲನೆ ಮಾಡುತ್ತಿದ್ದರು. ಬಳಿಕ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನವನ್ನು ನಡೆದ ಮೊದಲ ಮಹಿಳಾ ಪೈಲಟ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಅವರು ಪಂಜಾಬ್‌ನ ಅಂಬಾಲಾದಲ್ಲಿ ಇರುವ ಐಎಎಫ್‌ನ ಗೋಲ್ಡನ್ ಆರೋಸ್ ಸ್ಕ್ವಾಡ್ರನ್‌ನ ಭಾಗವೂ ಆಗಿದ್ದಾರೆ. 2020ರಲ್ಲಿ ಅವರು ರಫೇಲ್ ಪೈಲಟ್ ಕಾರ್ಯಾಚರಣೆಗೆ ಆಯ್ಕೆಯಾದ ಮೊದಲ ಮಹಿಳಾ ಪೈಲಟ್ ಎಂವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರಫೇಲ್ ಚಾಲನೆಗೆ ಅತ್ಯಂತ ಕಠಿಣ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
73ನೇ ಗಣರಾಜ್ಯೋತ್ಸವ: ಈ ವರ್ಷದ ಆಚರಣೆಯ ವಿಶೇಷತೆಗಳೇನು?
‘ಭವಿಷ್ಯಕ್ಕಾಗಿ ಭಾರತೀಯ ವಾಯುಪಡೆ ಪರಿವರ್ತನೆ’ ಎನ್ನುವುದು ಈ ಬಾರಿಯ ಐಎಎಫ್ ಟ್ಯಾಬ್ಲೋದ ಥೀಮ್ ಆಗಿತ್ತು. ರಫೇಲ್ ಯುದ್ಧ ವಿಮಾನ, ಸ್ವದೇಶಿ ನಿರ್ಮಿತ ಹಗುರ ಯುದ್ಧ ಹೆಲಿಕಾಪ್ಟರ್ (ಎಲ್‌ಸಿಎಚ್) ಮತ್ತು 3ಡಿ ನಿಗಾದ ರೇಡಾರ್ ಆಸ್ಲೇಶಾ ಎಂಕೆ-1 ಈ ಟ್ಯಾಬ್ಲೋದಲ್ಲಿ ಸೇರಿಕೊಂಡಿದ್ದವು. ಅಲ್ಲದೆ, 1971ರಲ್ಲಿ ಪಾಕಿಸ್ತಾನವನ್ನು ಭಾರತ ಮಣಿಸಿದ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮಿಗ್-21 ವಿಮಾನದ ಮಾಡೆಲ್ ಅನ್ನು ಹಾಗೂ ದೇಶದ ಮೊದಲ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ಗ್ನಾಟ್‌ನ ಮಾಡೆಲ್ ಅನ್ನು ಕೂಡ ಟ್ಯಾಬ್ಲೋ ಒಳಗೊಂಡಿತ್ತು.
ರಫೇಲ್ ಯುದ್ಧ ವಿಮಾನಗಳ ಮೊದಲ ಬ್ಯಾಚ್ 2020ರ ಜುಲೈ 29ರಂದು ಫ್ರಾನ್ಸ್‌ನಿಂದ ಭಾರತಕ್ಕೆ ಬಂದಿದ್ದವು. 59,000 ಕೋಟಿ ರೂ ವೆಚ್ಚದಲ್ಲಿ 36 ಯುದ್ಧ ವಿಮಾನಗಳ ಖರೀದಿಗೆ ಭಾರತ ಸರ್ಕಾರವು ಫ್ರಾನ್ಸ್ ಜತೆಗೆ ಒಪ್ಪಂದ ಮಾಡಿಕೊಂಡ ನಾಲ್ಕು ವರ್ಷಗಳ ನಂತರ ಮೊದಲ ವಿಮಾನಗಳು ಬಂದಿದ್ದವು. ಈವರೆಗೂ 32 ವಿಮಾನಗಳು ಭಾರತದ ವಾಯುಪಡೆಗೆ ಸೇರ್ಪಡೆಯಾಗಿದ್ದು, ಇನ್ನು ನಾಲ್ಕು ವಿಮಾನಗಳು ಏಪ್ರಿಲ್‌ನಲ್ಲಿ ಬರುವ ನಿರೀಕ್ಷೆ ಇದೆ.
ಶಿವಾಂಗಿ ಸಿಂಗ್ ಅವರ ಪಾಲ್ಗೊಳ್ಳುವಿಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ‘ಯೆಸ್! ನೀವು ರಫೇಲ್ ರಾಣಿ ಎಂದು ತೋರಿಸಿ ಶಿವಾಂಗಿ’ ಎಂದು ಉದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಶಿವಾಂಗಿ ಸಿಂಗ್ ಅವರು ದೊಡ್ಡ ಕನಸು ಕಾಣುವ ಅನೇಕ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಕೆಲವರು ಹೇಳಿದ್ದಾರೆ.
Read more
[wpas_products keywords=”deal of the day sale today offer all”]