Karnataka news paper

73ನೇ ಗಣರಾಜ್ಯೋತ್ಸವ: ಇಂದು ಸಂಜೆ 7 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ


PTI

ನವದೆಹಲಿ: ನಾಳೆ ಜನವರಿ 26 ರಂದು ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಇಂದು ಸಂಜೆ 7 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ವಾಹಿನಿಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನೇರ ಪ್ರಸಾರವಾಗುತ್ತದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣವನ್ನು ದೂರದರ್ಶನದ ಎಲ್ಲ ಪ್ರಾದೇಶಿಕ ಚಾನೆಲ್‌ಗಳಲ್ಲಿ ಭಾಷಣದ ನಂತರ ಅನುವಾದ ಪ್ರಸಾರವಾಗಲಿದೆ. ಆಕಾಶವಾಣಿ ರಾತ್ರಿ 9.30ಕ್ಕೆ ಪ್ರಾದೇಶಿಕ ಭಾಷೆಗಳಲ್ಲಿ ರಾಷ್ಟ್ರಪತಿ ಭಾಷಣವನ್ನು ಪ್ರಸಾರ ಮಾಡಲಿದೆ.

ರಾಷ್ಟ್ರಪತಿಗಳ ಭಾಷಣದ ನೇರ ಪ್ರಸಾರವನ್ನು ಡಿಡಿ ನ್ಯೂಸ್ ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ ವೀಕ್ಷಿಸಬಹುದು. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ದೇಶ 73 ವರ್ಷಗಳಲ್ಲಿ ಮಾಡಿರುವ ಸಾಧನೆ, ಮುಂದಿನ ದಿನಗಳಲ್ಲಿನ ಸವಾಲುಗಳ ಬಗ್ಗೆ ವಿವರಿಸಲಿದ್ದಾರೆ. 

ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ 25 ಸ್ತಬ್ಧಚಿತ್ರ, 16 ಕವಾಯತು ತಂಡ, 17 ಮಿಲಿಟರಿ ಬ್ಯಾಂಡ್‌ಗಳು ಭಾಗಿ

ಈ ವರ್ಷ ಕೂಡ ಕೋವಿಡ್-19 ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ಸಮಾರಂಭ ಸರಳವಾಗಿ ಸಾಂಕೇತಿಕವಾಗಿ ನಡೆಯಲಿದೆ. ಗಣರಾಜ್ಯೋತ್ಸವ ದಿನ ದೆಹಲಿಯ ರಾಜಪಥ್ ಮಾರ್ಗದಲ್ಲಿ ಸಾಗಲಿರುವ ಸ್ತಬ್ಧಚಿತ್ರಗಳ ಸಂಖ್ಯೆ 144ರಿಂದ ಈ ವರ್ಷ 96ಕ್ಕೆ ಇಳಿದಿದೆ. ಪರೇಡ್ ರೈಸಿನಾ ಹಿಲ್ಸ್ ನಿಂದ ಆರಂಭವಾಗಿ ರಾಷ್ಟ್ರೀಯ ಕ್ರೀಡಾಂಗಣದವರೆಗೆ ಸಾಗಲಿದೆ. 

ಈ ವರ್ಷದ ವಿಶೇಷತೆ: ಈ ವರ್ಷದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾರತದ ಮಿಲಿಟರಿಯ ಹಳೆ ಮತ್ತು ಹೊಸ ಯುಗವನ್ನು ಅದರ ಯೋಧರ ಸಮವಸ್ತ್ರ ಮತ್ತು ಶಸ್ತ್ರಾಸ್ತ್ರಗಳ ಮೂಲಕ ತೋರಿಸಲಾಗುತ್ತದೆ. ಸಾವಿರ ಡ್ರೋನ್ ಗಳು ಹಿನ್ನೆಲೆ ಸಂಗೀತದೊಂದಿಗೆ ಹಾರಾಟ ನಡೆಸಲಿವೆ. ಲೇಸರ್ ಪ್ರೊಜೆಕ್ಷನ್ ಪ್ರದರ್ಶನ ಕೂಡ ಇರಲಿದೆ.



Read more

[wpas_products keywords=”deal of the day”]