Karnataka news paper

ಗೂಗಲ್ ಪೇ ಬಳಸಿ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ಈ ಕ್ರಮ ಅನುಸರಿಸಿ!


ಪಾವತಿ

ಹೌದು, ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ಗೂಗಲ್ ಪೇ ಕೂಡ ಒಂದಾಗಿದೆ. ಗೂಗಲ್ ಪೇ ತನ್ನ ಬಳಕೆದಾರರಿಗೆ ರಿವಾರ್ಡ್ಸ್‌,ಅನ್ನು ಸಹ ನೀಡುತ್ತಿದೆ. ಇನ್ನು ಗೂಗಲ್ ಪೇ ಅಪ್ಲಿಕೇಶನ್‌ ಕೇವಲ ಆನ್‌ಲೈನ್ ಪಾವತಿಗಳನ್ನು ಮಾಡಲು ಮತ್ತು ಬಿಲ್‌ಗಳನ್ನು ಪಾವತಿಸಲು ವಿನ್ಯಾಸಗೊಳಿಸಲಾಗಿಲ್ಲ. ಬದಲಿಗೆ ಹಲವಾರು ಬ್ಯಾಂಕ್ ಸಂಬಂಧಿತ ಸೌಲಭ್ಯಗಳನ್ನು ಸಹ ನೀಡುತ್ತವೆ. ಗೂಗಲ್ ಪೇ ಅಪ್ಲಿಕೇಶನ್‌ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬಹುದಾಗಿದೆ. ಹಾಗಾದರೇ ಗೂಗಲ್ ಪೇ ಅಪ್ಲಿಕೇಶನ್‌ ಬಳಸಿಕೊಂಡು ಖಾತೆಗೆ ಹಣವನ್ನು ವರ್ಗಾಯಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್ ಪೇ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ಹೀಗೆ ಮಾಡಿರಿ:

ಗೂಗಲ್ ಪೇ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ಹೀಗೆ ಮಾಡಿರಿ:

ಹಂತ 1: ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪೇ ಆಪ್ ತೆರೆಯಿರಿ.
ಹಂತ 2: ಹೋಮ್ ಸ್ಕ್ರೀನ್‌ನಲ್ಲಿ “ಹೊಸ ಪಾವತಿ” ಟ್ಯಾಪ್ ಮಾಡಿ, ಅದು ನಿಮ್ಮನ್ನು ಪಾವತಿ ಆಯ್ಕೆಗಳಿಗೆ ಕರೆದೊಯ್ಯುತ್ತದೆ.
ಹಂತ 3: ಹೊಸ ಪರದೆಯಲ್ಲಿ ಬ್ಯಾಂಕ್ ವರ್ಗಾವಣೆ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 4: ಒಮ್ಮೆ ನೀವು ಬ್ಯಾಂಕ್ ವರ್ಗಾವಣೆಯನ್ನು ಆರಿಸಿದರೆ, ಪರದೆಯು ಈ ಕೆಳಗಿನ ವಿವರಗಳನ್ನು ಕೇಳುತ್ತದೆ.
* ಸ್ವೀಕರಿಸುವವರ ಹೆಸರು
* ಸ್ವೀಕರಿಸುವವರ ಖಾತೆ ಸಂಖ್ಯೆ ಮತ್ತು ಮತ್ತೊಮ್ಮೆ ಮರು ನಮೂದಿಸಿ.
* IFSC ಕೋಡ್

ಕಳುಹಿಸಿದರೆ

ಹಂತ 5: ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ ಮತ್ತು ಮುಂದುವರಿಸಿ ಟ್ಯಾಪ್ ಮಾಡಿ.
ಹಂತ 6: ಮೊತ್ತವನ್ನು ನಮೂದಿಸಿ. ನೀವು ಬಯಸಿದರೆ ನಂತರ ನೀವು ವಿವರಣೆಯನ್ನು ಸೇರಿಸಬಹುದು ಮತ್ತು ಮುಗಿದಿದೆ ಟ್ಯಾಪ್ ಮಾಡಬಹುದು (ಬಾಣವನ್ನು ಮುಂದುವರಿಸಿ).
ಹಂತ 7: ಮುಂದಿನ ಪುಟದಲ್ಲಿ, ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ ಮತ್ತು ಪಾವತಿಸಲು ಮುಂದುವರಿಯಿರಿ ಟ್ಯಾಪ್ ಮಾಡಿ.
ಹಂತ 8: ನಿಮ್ಮ UPI ಪಿನ್ ನಮೂದಿಸಿ ಮತ್ತು ಮುಗಿದಿದೆ ಟ್ಯಾಪ್ ಮಾಡಿ.
(ಎಚ್ಚರವಹಿಸಿ: ನೀವು ಸರಿಯಾದ ವಿವರಗಳನ್ನು ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಒಮ್ಮೆ ನೀವು ಹಣವನ್ನು ಕಳುಹಿಸಿದರೆ, ವಹಿವಾಟನ್ನು ರದ್ದುಗೊಳಿಸಲಾಗುವುದಿಲ್ಲ.)

ಫೋನ್‌ಪೇ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ಹೀಗೆ ಮಾಡಿರಿ:

ಫೋನ್‌ಪೇ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ಹೀಗೆ ಮಾಡಿರಿ:

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನ ಅಪ್ಲಿಕೇಶನ್ ಡ್ರಾಯರ್‌ಗೆ ಹೋಗಿ ಮತ್ತು ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ.
ಹಂತ 2: ಮುಖಪುಟದಲ್ಲಿ ನೀವು multiple money ವರ್ಗಾವಣೆ ಮತ್ತು ಇತರ ಆಯ್ಕೆಯನ್ನು ನೋಡಬಹುದಾಗಿದ್ದು, ‘ ಟು ಅಕೌಂಟ್‌’ ಆಯ್ಕೆಯನ್ನು ಆರಿಸಿ.
ಹಂತ 3: ಮುಂದಿನ ಹಂತದಲ್ಲಿ ನೀವು ಹಣವನ್ನು ವರ್ಗಾಯಿಸಬೇಕಾದ ಖಾತೆಯನ್ನು ಲಿಂಕ್ ಮಾಡಲು ನೀವು ಸೇರಿಸಬೇಕಾಗಿದೆ. ಇದಕ್ಕಾಗಿ, ‘Add Beneficiary’ ಆಯ್ಕೆಯನ್ನು ಆರಿಸಿ.
ಹಂತ 4: ನಂತರ ಬ್ಯಾಂಕ್ ಹೆಸರನ್ನು ಆಯ್ಕೆ ಮಾಡಿ ಮತ್ತು ಖಾತೆಯ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
ಹಂತ 5: ಬ್ಯಾಂಕ್ ಮಾಹಿತಿಯನ್ನು ಯಶಸ್ವಿಯಾಗಿ ಲಾಗ್ ಮಾಡಿದ ನಂತರ, ಖಾತೆಯನ್ನು ಆರಿಸಿ ಮತ್ತು ನೀವು ವರ್ಗಾಯಿಸಲು ಬಯಸುವ ಮೊತ್ತವನ್ನು ನಮೂದಿಸಿ.
ಹಂತ 6: ಉಳಿದ ಪಾವತಿ ವಿಧಾನವು ಇತರ ಪಾವತಿಗಳಂತೆ ಮಾಡಬಹುದಾಗಿದೆ.



Read more…

[wpas_products keywords=”smartphones under 15000 6gb ram”]