Karnataka news paper

ರಂಗೇರಿದ ಪಂಜಾಬ್ ಚುನಾವಣಾ ಕಣ: ದುಷ್ಟರಿಂದ ನಿಮ್ಮನ್ನು ‘ಥೋರ್’ ಕಾಪಾಡುತ್ತಾನೆ ಎಂಬ ಕಾಂಗ್ರೆಸ್ ನ ವಿಡಿಯೊ ನೋಡಿ- Video


The New Indian Express

ಚಂಡೀಗಢ: ಪಂಜಾಬ್ ಚುನಾವಣಾ (Punjab state election 2022) ಕಣ ರಂಗೇರಿದೆ. ಆಯಾ ಪಕ್ಷಗಳು ಮತದಾರರನ್ನು ಸೆಳೆಯಲು ತಮ್ಮದೇ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿವೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾ ಪ್ರಭಾವ ಹೆಚ್ಚಾಗಿರುವುದರಿಂದ ಅದರ ಮೂಲಕವೂ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತವೆ.

ಕಾಂಗ್ರೆಸ್ ಪಕ್ಷ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊವೊಂದನ್ನು ಹಾಕಿದ್ದು ಅದರಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿಯವರನ್ನು (Charanjit Singh Channi) ಸೂಪರ್ ಹೀರೋ ಆಗಿ ಬಿಂಬಿಸಲಾಗಿದ್ದು ”ಕಾಂಗ್ರೆಸ್ ಹಿ ಆಯೇಗಿ”ಎಂಬ ಹ್ಯಾಶ್ ಟಾಗ್ ನ್ನು ಬಳಸಿದೆ.

ಹಾಲಿವುಡ್ ಚಿತ್ರ ‘ಅವೆಂಜರ್ಸ್: ಇನ್ಫಿನಿಟಿ ವಾರ್’ (‘Avengers: Infinity War’) ಚಿತ್ರದ ದೃಶ್ಯವನ್ನು ತೆಗೆದುಕೊಂಡು ವಿಡಿಯೊ ಮಾಡಲಾಗಿದ್ದು ಮಾರ್ವೆಲ್ ಕಾಮಿಕ್ಸ್ ಸೂಪರ್ ಹೀರೋ ಮಾದರಿಯಲ್ಲಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕರನ್ನು ತೋರಿಸಲಾಗಿದೆ. ರಾಹುಲ್ ಗಾಂಧಿ, ನವಜೋತ್ ಸಿಂಗ್ ಸಿಧು ಜೊತೆಗೆ ಚರಂಜಿತ್ ಸಿಂಗ್ ಚನ್ನಿಯವರ ಮುಖಗಳನ್ನು ಥಾರ್, ಬ್ರೂಸ್ ಬ್ಯಾನರ್ ಮತ್ತು ಕ್ಯಾಪ್ಟನ್ ಅಮೆರಿಕಾ ಪಾತ್ರಗಳಲ್ಲಿ ತೋರಿಸಲಾಗಿದೆ. 

ಇನ್ನು ಏಲಿಯನ್ಸ್ ಶತ್ರುಗಳ ಪಾತ್ರಗಳ ಮುಖಕ್ಕೆ ಪಿಎಂ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖಗಳನ್ನು ತೋರಿಸಲಾಗಿದೆ. ‘ಥಾರ್’ ಆಗಿ ಚನ್ನಿ ತನ್ನ ಸೇಡು ತೀರಿಸಿಕೊಳ್ಳುವವರನ್ನು ದುಷ್ಟ ಅನ್ಯಗ್ರಹ ಜೀವಿಗಳ ದಾಳಿಯಿಂದ ರಕ್ಷಿಸಲು ಹೇಗೆ ಬರುತ್ತಾರೆ, ‘ಏಲಿಯನ್ಸ್’ ಅನ್ನು ಹೇಗೆ ಸೋಲಿಸುತ್ತಾರೆ ಎಂಬುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಪಂಜಾಬ್ ಲೋಕ ಕಾಂಗ್ರೆಸ್ (PLC) ಮತ್ತು ಶಿರೋಮಣಿ ಅಕಾಲಿದಳದ (SAD) ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರ ಪಕ್ಷವನ್ನು, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನೂ ವಿಡಿಯೊದಲ್ಲಿ ದುಷ್ಟ ಅನ್ಯಗ್ರಹ ಜೀವಿಗಳಾಗಿ ಚಿತ್ರಿಸಿ ತೋರಿಸಲಾಗಿದೆ. 

ಪಂಜಾಬ್ ರಾಜ್ಯದ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ದುಷ್ಟ ಶಕ್ತಿಗಳ ಹಿಡಿತದಿಂದ ನಮ್ಮ ರಾಜ್ಯವನ್ನು ವಿಮೋಚನೆಗೊಳಿಸಲು ನಾವು ಏನು ಬೇಕಾದರೂ ಮಾಡುತ್ತೇವೆ” ಎಂದು ಪಂಜಾಬ್ ಕಾಂಗ್ರೆಸ್ ವೀಡಿಯೊದೊಂದಿಗೆ ಟ್ವೀಟ್ ಮಾಡಿದೆ.

ಕಾಂಗ್ರೆಸ್ ಪಕ್ಷ, ಬಲ್ಬೀರ್ ಸಿಂಗ್ ರಾಜೇವಾಲ್ ನೇತೃತ್ವದ ಸಂಯುಕ್ತ ಸಮಾಜ ಮೋರ್ಚಾ (SSM) ಮತ್ತು ಗುರ್ನಾಮ್ ಸಿಂಗ್ ಚಾರುಣಿ ನೇತೃತ್ವದ ಸಂಯುಕ್ತ ಸಂಘರ್ಷ ಪಕ್ಷ (SSP), ಮಿತ್ರಪಕ್ಷಗಳಾದ ಭಾರತೀಯ ಜನತಾ ಪಕ್ಷ (ಬಿಜೆಪಿ), ಸುಖದೇವ್ ಸಿಂಗ್ ಧಿಂಡ್ಸಾ ನೇತೃತ್ವದ ಶಿರೋಮಣಿ ಅಕಾಲಿದಳ (ಸಂಯುಕ್ತ), ಮತ್ತು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ (PLC) ಜೊತೆಗೆ AAP ಮತ್ತು SAD ಪಕ್ಷಗಳು ಅದರ ಮೈತ್ರಿ ಪಕ್ಷವಾದ ಬಹುಜನ ಸಮಾಜ ಪಕ್ಷ (BSP) ಜೊತೆಗೆ ಮುಂದಿನ ಚುನಾವಣೆಯಲ್ಲಿ ಹೋರಾಡಲಿವೆ. 

ಫೆಬ್ರವರಿ 20ರಂದು ಒಂದೇ ಹಂತದಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.





Read more

[wpas_products keywords=”deal of the day”]