ಹೈಲೈಟ್ಸ್:
- ಮುಂದುವರಿದ ಕಾಂಗ್ರೆಸ್ -ಬಿಜೆಪಿ ನಡುವಿನ ವಾಕ್ಸಮರ
- ಹಾವು ಬುಸ್ ಅನ್ನುತ್ತೋ ಠುಸ್ ಆಗುತ್ತೋ ನೋಡೋಣ
- ಕೈ ನಾಯಕರ ಬಗ್ಗೆ ಸೋಮಶೇಖರ್ ವ್ಯಂಗ್ಯ
ಮೈಸೂರಲ್ಲಿ ಮಾತಾಡಿದ ಅವ್ರು ಸುಮ್ನೆ ಹಾವಿನ ಬುಟ್ಟಿ ಇಟ್ಟುಕೊಂಡು ಹಾವು ಬಿಡ್ತಿನಿ ಬಿಡ್ತಿನಿ ಅಂತಾರೆ. ಹಾವಿನ ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು. ಬುಸ್ ಅನ್ನತಾ ಅಥವಾ ಟುಸ್ ಅನ್ನುತ್ತಾ ಅಂತಾ. ಇತ್ತೀಚೆಗೆ ಇದು ಎಲ್ಲರಿಗೂ ಚಟ ಆಗಿದೆ. ರಮೇಶ್ ಜಾರಕಿಹೊಳಿ ಸಹ ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಅಂತಾ ಹೇಳಿದ್ದಾರೆ. ಇದು ಎಲ್ಲರಿಗೂ ಒಂದು ತರಹದ ಹ್ಯಾಬಿಟ್ ಆಗಿದೆ. ಇದಕ್ಕೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯ ಹಾಗೂ ತಮ್ಮದೇ ಪಕ್ಷ ರಮೇಶ್ ಜಾರಕಿಹೋಳಿಗೂ ಸಚಿವ ಎಸ್.ಟಿ ಸೋಮಶೇಖರ್ ಟಾಂಗ್ ನೀಡಿದರು.
ಚುನಾವಣೆ ಜನಪ್ರತಿನಿಧಿಗಳು ಜವಾಬ್ದಾರಿ ಯಿಂದ ನಡೆದುಕೊಳ್ಳಬೇಕು. ಪಕ್ಷಾಂತರ ರಾಜಕೀಯದ ಭಾಗವಾದ್ರೂ, ಎಲ್ಲಾ ಸಮಯದಲ್ಲೂ ರಾಜಕಾರಣಿಗಳು ಲಘು ಹೇಳಿಕೆ ಕೊಡಬಾರದು ಅಂತ ತಿಳಿಸಿದ್ರು. ಕಾಂಗ್ರೆಸ್ ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ನಮಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಕೆಲಸ ಇಲ್ಲದೆ ಅವರು ಏನೇನೋ ಮಾತಾಡುತ್ತಾರೆ. ಆದರೆ ನಮಗೆ ಅಭಿವೃದ್ಧಿ ಮಾಡುವ ಕೆಲಸ ಇದೆ. ಸಿಎಂ ಅವರು ಅತ್ಯುತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಕೆಲಸ ಇಲ್ಲದ ಕಾಂಗ್ರೆಸ್ ಸುಮ್ಮನೆ ಮಾತಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ದೇವರ ಮೇಲೆ ಪ್ರಮಾಣ ಮಾಡುತ್ತೇನೆ, ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿಲ್ಲ! ಎಂಟಿಬಿ
ಯಾರನ್ನೂ ಕಡೆಗಣಿಸಿಲ್ಲ..!
ಮೈಸೂರಲ್ಲಿ ಕಾಂಗ್ರೆಸ್ ಶಾಸಕರನ್ನ ಕಡೆಗಣಿಸಲಾಗಿದೆ ಅನ್ನೋ ವಿಚಾರಕ್ಕೆ STS ಪ್ರತಿಕ್ರಿಯೆ ಕೊಟ್ರು.. ಯಾವ ಶಾಸಕರನ್ನು ಕಡೆಗಣಿಸಿಲ್ಲ. 2 ವರ್ಷದಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ. ಕೈ ಶಾಸಕರು ಮಾಡಿದ ಆರೋಪಗಳಲ್ಲಿ ಹುರುಳಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ತರಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳನ್ನ ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದೇವೆ ಅಂತ ತಿಳಿಸಿದ್ರು.
ಅನುದಾನ ಮನೆ ಬಾಗಿಲಿಗೆ ಬರಲ್ಲ..!
ಸರ್ಕಾರದ ಅನುದಾನ ಮನೆ ಬಾಗಿಲಿಗೆ ಬರಲ್ಲ. ಶಾಸಕರು ಓಡಾಡಿ ಅನುದಾನ ತರಬೇಕು ಕ್ಷೇತ್ರ ಸಮಸ್ಯೆ ಕುರಿತು ಸಚಿವರ ಜತೆ ಚರ್ಚಿಸಬೇಕು. ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರಸಬಾರದು.ಸಿಎಂ ಬೊಮ್ಮಾಯಿ ಯವರು ಅನುದಾನ ನೀಡೋದ್ರಲ್ಲಿ ತಾರತಮ್ಯ ಮಾಡಿಲ್ಲ. ಬಿಜೆಪಿ ,ಜೆಡಿಎಸ್ ಕಾಂಗ್ರೆಸ್ ಎಲ್ಲಾ ಶಾಸಕರಿಗೂ ಸರಿಸಮನಾಗಿ ಅನುದಾನ ಹಂಚಿಕೆ ಮಾಡ್ತಿದ್ದಾರೆ ಅಂತ ತಿಳಿಸಿದ್ರು.
Read more
[wpas_products keywords=”deal of the day sale today offer all”]