Karnataka news paper

ವಾರದಿಂದ ಕುಸಿದ ಅವರೆಕಾಯಿ ಬೆಲೆ; ಬೆಳೆಗಾರರಿಗೆ ಕತ್ತರಿ, ವ್ಯಾಪಾರಿಗಳಿಗೆ ಆದಾಯ!


ಹೈಲೈಟ್ಸ್‌:

  • ಅವರೆಕಾಯಿ ಬೆಲೆ ಕೆಜಿಗೆ 20ರಿಂದ 25 ರೂ.ಗೆ ಬೆಲೆ ಕುಸಿದು ಬೆಳೆಗಾರರು ಕಂಗಾಲಾಗಿದ್ದಾರೆ
  • ಅವರೆಕಾಯಿ ಫಸಲು ಶಿವರಾತ್ರಿ ಬರುವ ಮುನ್ನವೇ ಕ್ಷೀಣಿಸುತ್ತಿದೆ
  • ರೈತರಿಗೆ ಆದಾಯ ಬಾರದಿದ್ದರೂ ದಲ್ಲಾಳಿಗಳಿಗೆ ಕಮೀಷನ್‌, ಚಿಲ್ಲರೆ ವ್ಯಾಪಾರಿಗಳಿಗೆ ಆದಾಯ ಕಟ್ಟಿಟ್ಟ ಬುತ್ತಿ

ಶ್ರೀನಿವಾಸಪುರ: ಒಂದು ವಾರದಿಂದ ಅವರೆಕಾಯಿ ಬೆಲೆ ಕೆಜಿಗೆ 20ರಿಂದ 25 ರೂ.ಗೆ ಬೆಲೆ ಕುಸಿದು ಬೆಳೆಗಾರರು ಕಂಗಾಲಾಗಿದ್ದಾರೆ. ಈ ವರ್ಷ ಮಳೆ ಹೆಚ್ಚಾಗಿ ಬಿದ್ದು ಬಿತ್ತನೆ ಮಾಡಿದ್ದ ಪ್ರದೇಶ ಕಡಿಮೆಯಾಗಿದ್ದರೂ ಇರುವ ತೋಟಗಳು ಮಳೆಗೆ ಸಿಲುಕಿ ನಾಶವಾಗಿದೆ.

ಅಲಲ್ಲಿ ಮಳೆಯಾಶ್ರಿತ ಬಿತ್ತನೆ ಮತ್ತು ಕೊಳವೆ ಬಾವಿಗಳ ಬಳಿ ನೀರಾವರಿ ಬೆಳೆಯಾಗಿ ಬೆಳೆದಿರುವ ಅವರೆಕಾಯಿ ಫಸಲು ಶೇ.30 ಭಾಗ ಫಸಲು ಬಂದಿದೆಯಾದರೂ ಆರಂಭದಲ್ಲಿ 55ರಿಂದ 70 ರೂ.ವರೆಗೆ ಮಾರಾಟ ಆಗುತ್ತಿದ್ದ ಅವರೆಕಾಯಿ ಸಂಕ್ರಾಂತಿ ನಂತರ ಸಂಪೂರ್ಣ ಬೆಲೆ ಕುಸಿದಿದೆ. ಮಾವಿಗೆ ಪ್ರಸಿದ್ಧಿಯಾದ ತಾಲೂಕಿನಲ್ಲಿ ಮಾವಿನ ತೋಟ ಸೇರಿದಂತೆ ನಾನಾ ತೋಟದ ಬೆಳೆಯಾಗಿ ಬೆಳೆದಿದ್ದ ಅವರೆಕಾಯಿ ಫಸಲು ಶಿವರಾತ್ರಿ ಬರುವ ಮುನ್ನವೇ ಕ್ಷೀಣಿಸುತ್ತಿದೆ.

ರೈತರಿಗೆ ನಿರಾಸೆ
ಈ ವರ್ಷ ಮಳೆ ಹೆಚ್ಚಾಗಿ ಬಹುತೇಕ ಬೆಳೆಗಳು ಕೈಕೊಟ್ಟಿವೆ. ನೀರಾವರಿ ಅನುಕೂಲ ಇರುವ ಕೆಲವು ರೈತರು ಕೊಳವೆಬಾವಿಗಳ ಬಳಿ ಅವರೆ ಬಿತ್ತನೆ ಮಾಡಿದ್ದಾರೆ. ಡಿಸೆಂಬರ್‌ ಪ್ರಾರಂಭದಲ್ಲಿ ಅವರೆಕಾಯಿ ಫಸಲು ಆರಂಭವಾದಾಗ ಕೆಜಿ 55ರಿಂದ 70 ರೂ.ವರೆಗೆ ಸಗಟು ಮಾರಾಟವಾಗುತ್ತಿತ್ತು. ಕಳೆದ 10 ದಿನಗಳಿಂದ ಕೇವಲ 20ರಿಂದ 25 ರೂಗೆ ಧಾರಣೆ ಕೊನೆಯಾಗಿ ಅವರೆಕಾಯಿ ತೋಟಕ್ಕೆ ರೋಗ ತಡೆಯಲು ಸಿಂಪಡಿಸಿದ ಔಷಧಗಳವೂ ವೆಚ್ಚ ಬರುತ್ತಿಲ್ಲವೆಂದು ಹೇಳುತ್ತಿದ್ದಾರೆ.
ಗಗನಕ್ಕೇರಿದ್ದ ತರಕಾರಿಗಳ ಬೆಲೆ ಭಾರೀ ಇಳಿಕೆ; ಗ್ರಾಹಕರಿಗೆ ಸಂತಸವಾದ್ರೆ ಬೆಳೆಗಾರರಿಗೆ ನಿರಾಸೆ
ರೈತರಿಗೆ ಆದಾಯ ಬಾರದಿದ್ದರೂ ದಲ್ಲಾಳಿಗಳಿಗೆ ಕಮೀಷನ್‌, ಚಿಲ್ಲರೆ ವ್ಯಾಪಾರಿಗಳಿಗೆ ಕೆಜಿಗೆ 5ರಿಂದ 10 ರೂ. ಆದಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹುಲುಸಾಗಿ ಫಸಲು ಬಂದಿದ್ದರೆ ಲಾಭವಾಗುತ್ತಿತ್ತು. ಫಸಲು ಕಡಿಮೆಯಾಗಿದ್ದು ಇರುವ ಫಸಲಿಗೆ ಹುಳ ಕೀಟ ರೋಗ ಬಾಧೆ ಹೆಚ್ಚಾಗಿ ಕಮರಿ ಹೋಗಿ ಬೆಳೆಗಾರರಿಗೆ ಕತ್ತರಿ, ವ್ಯಾಪಾರಿಗಳಿಗೆ ಆದಾಯ ಎನ್ನುವಂತಾಗಿದೆ.
‘ಬದನೆ’ ಕೈ ತುಂಬಾ ಸಂಪಾದನೆ; ಚಿಕ್ಕಾಲಘಟ್ಟ ರೈತರ ಕೈಹಿಡಿದ ಬದನೆ ಕೃಷಿ!
ಬೇಡಿಕೆ ಇಲ್ಲ
ಹೆಚ್ಚು ಪ್ರದೇಶದಲ್ಲಿಅವರೆಕಾಯಿ ಬೆಳೆದಿದ್ದರೂ ಮಳೆ ಹೆಚ್ಚಾ ದ್ದರಿಂದ ಬೆಳೆಗಳು ನಷ್ಟವಾಗಿ ಫಸಲು ಕ್ಷೀಣಿಸಿದೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಫಸಲು ಕಡಿಮೆ ಇದೆಯಾದರೂ ಅಲ್ಲಿಂದ ಬೇಡಿಕೆ ಇಲ್ಲದಿರುವುದರಿಂದ ಬೆಂಗಳೂರು, ಚೆನ್ನೈ ಮಾರುಕಟ್ಟೆಗೆ ದಿನಕ್ಕೆ 200ರಿಂದ 300 ಕ್ವಿಂಟಾಲ್‌ ಕಾಯಿ ಬರುತ್ತಿದೆ ಎಂದು ವರ್ತಕರು ಹೇಳುತ್ತಾರೆ. ಒಣಗಿದ ಅವರೆ ಬೇಳೆ ಕೆಜಿ 95ರಿಂದ 100 ರೂ.ವರೆಗೆ ಮಾರಾಟವಾಗುತ್ತಿದ್ದರೂ ಹಸಿ ಅವರೆ ಕಾಯಿ ಕೆಜಿ 30 ರೂ.ಗೆ ರೀಟೆಲ್‌ ಮಾರಾಟವಾಗುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ.



Read more

[wpas_products keywords=”deal of the day sale today offer all”]