The New Indian Express
ಬೆಂಗಳೂರು: ಮಾಜಿ ಸಚಿವ ಆರ್.ಎಲ್. ಜಾಲಪ್ಪ ನಿಧನದ ನಂತರ ಕುಟುಂಬ ಕಲಹ ಜಗಜ್ಜಾಹೀರಾಗಿದೆ. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಆಂತರಿಕ ಕಲಹ ಇದೀಗ ಬೀದಿಗೆ ಬಂದಿದ್ದು, ಮಾಜಿ ಕೇಂದ್ರ ಸಚಿವ ದಿವಂಗತ ಆರ್.ಎಲ್. ಜಾಲಪ್ಪ ನಿಧನ ನಂತರ ಸಂಸ್ಥೆಯ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ಶುರುವಾಗಿದೆ.
ಶಿಕ್ಷಣ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜಾಲಪ್ಪ ಸಂಬಂಧಿ ಜಿ.ಎಚ್. ನಾಗರಾಜ್ ಆಯ್ಕೆ ಆಗಿದ್ದು, ಈ ಆಯ್ಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜಾಲಪ್ಪನವರ ಕುಟುಂಬದವರಿಗೆ ಟ್ರಸ್ಟ್ ಹಾಗೂ ಸಂಸ್ಥೆಯಲ್ಲಿ ಸೂಕ್ತ ಸ್ಥಾನಮಾನ ನೀಡದೆ ಸರ್ವಾಧಿಕಾರಿ ಧೋರಣೆಯಿಂದ ವರ್ತನೆ ಮಾಡುತ್ತಿದ್ದಾರೆ ಎಂದು ಜಿ.ಎಚ್. ನಾಗರಾಜ್ ವಿರುದ್ಧ ಆರೋಪಿಸಲಾಗಿದೆ. ಆರ್.ಎಲ್. ಜಾಲಪ್ಪ ಅವರ ಕುಟುಂಬದ ಸದಸ್ಯರನ್ನು ಟ್ರಸ್ಟ್ ಹಾಗೂ ಸಂಸ್ಥೆಗಳಿಂದ ಹೊರಗಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಕೋಲಾರ ನಗರ ಹೊರವಲಯದಲ್ಲಿರುವ ದೇವರಾಜ್ ಅರಸು ಎಜುಕೇಶನ್ ಟ್ರಸ್ಟ್ ಹಾಗೂ ಮೆಡಿಕಲ್ ಕಾಲೇಜ್ ಮತ್ತು ಶಿಕ್ಷಣ ಸಂಸ್ಥೆಗಳ ಅಧಿಪತ್ಯಕ್ಕಾಗಿ ಮುಸುಕಿನ ಗುದ್ದಾಟ ನಡೆದಿದೆ. ಜಾಲಪ್ಪ ಅವರ ಹಿರಿಯ ಮಗ ಹಾಗೂ ಮಾಜಿ ಶಾಸಕ ನರಸಿಂಹಸ್ವಾಮಿಗೆ ಅಧ್ಯಕ್ಷ ಪಟ್ಟ ನೀಡುವಂತೆ ಪಟ್ಟು ಹಿಡಿದಿದ್ದರು.
ಜಿ.ಎಚ್. ನಾಗರಾಜ್ ವಿರುದ್ಧ ಆರ್.ಎಲ್. ಜಾಲಪ್ಪ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದು, ಜಿ.ಎಚ್. ನಾಗರಾಜ್ ನಮ್ಮ ಸಂಬಂಧಿ ಅಲ್ಲ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ಹಾಗೂ ಸಂಸ್ಥೆಯ ಆಡಳಿತ ಆರ್.ಎಲ್. ಜಾಲಪ್ಪ ಮಕ್ಕಳಿಗೆ ನೀಡಲು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗತಕಾಲದ ಅನುಭವ ಮಂಟಪ ಮರುಸೃಷ್ಠಿಗೆ ಸೂಚನೆ: ಸಿಎಂ ಬೊಮ್ಮಾಯಿ
ಅಲ್ಲದೆ ಕೋಲಾರದ ಟಮಕ ಬಳಿಯ ಮೆಡಿಕಲ್ ಕಾಲೇಜಿನಲ್ಲಿ ಆರ್.ಎಲ್. ಜಾಲಪ್ಪ ಮಕ್ಕಳು, ನೂರಾರು ಬೆಂಬಲಿಗರು ಪ್ರತಿಭಟನೆ ನಡೆಸಿದರು. ಆರ್.ಎಲ್. ಜಾಲಪ್ಪ ಕುಟುಂಬಸ್ಥರಿಗೆ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟ ನಡೆಯಿತು. ಪೊಲೀಸರನ್ನು ತಳ್ಳಿ ಪ್ರತಿಭಟನಾಕಾರರು ಕಾಲೇಜು ಒಳಕ್ಕೆ ನುಗ್ಗಿದ್ದಾರೆ. ಪೊಲೀಸರಿಂದ ಲಾಠಿಚಾರ್ಜ್ ಇನ್ನು ಪ್ರತಿಭಟನಾಕಾರರು ವೈದ್ಯಕೀಯ ಕಾಲೇಜು ಒಳಕ್ಕೆ ನುಗ್ಗಿದ್ದು, ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಟ್ರಸ್ಟ್ ನ ಅಧ್ಯಕ್ಷರಾಗಿ ನಾಗರಾಜ್ ಅವಿರೋಧವಾಗಿ ಆಯ್ಕೆಯಾದರು, ಉಪಾಧ್ಯಕ್ಷರಾಗಿ ಜಾಲಪ್ಪ ಅವರ ಕಿರಿಯ ಪುತ್ರ ರಾಜೇಂದ್ರ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತರಾಜು ಆಯ್ಕೆಯಾದರು. 12 ಟ್ರಸ್ಟಿಗಳಿದ್ದು, ಅವರಲ್ಲಿ ಆರು ಮಂದಿ ಮತದಾನದ ಅಧಿಕಾರ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದರು. ಈಗ ಅವರ ಪುತ್ರ ಡಾ.ಯತೀಂದ್ರ ಟ್ರಸ್ಟಿಯಾಗಿದ್ದಾರೆ.
Read more
[wpas_products keywords=”deal of the day”]