ಹೈಲೈಟ್ಸ್:
- ಈ ಬಾರಿಯ ಬಜೆಟ್‌ನಲ್ಲಿ ‘ಪಾಪದ’ ತೆರಿಗೆ ಏರಿಕೆ ಮಾಡುವ ಸಾಧ್ಯತೆ
- ತಂಬಾಕು ಮತ್ತು ಆಲ್ಕೋಹಾಲ್ ಉತ್ಪನ್ನಗಳ ಮೇಲಿನ ಅಧಿಕ ತೆರಿಗೆ
- ದುಷ್ಪರಿಣಾಮ ಬೀರುವ ಉತ್ಪನ್ನಗಳ ಬಳಕೆ ನಿಯಂತ್ರಿಸಲು ತೆರಿಗೆ ಹೆಚ್ಚಳ
ಭಾರತ ಸರ್ಕಾರವು ಕಳೆದ ಎರಡು ವರ್ಷಗಳಿಂದ ಈ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಏರಿಕೆ ಮಾಡಿಲ್ಲ. ಆದರೆ ಕೆಲವು ತಿಂಗಳ ಹಿಂದೆ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಎಲ್ಲ ತಂಬಾಕು ಉತ್ಪನ್ನಗಳನ್ನು ಒಳಗೊಳ್ಳುವಂತಹ ಸಮಗ್ರ ತೆರಿಗೆ ನೀತಿ ಪ್ರಸ್ತಾಪವನ್ನು ಸಿದ್ಧಗೊಳಿಸಲು ಪರಿಣತರ ಸಮಿತಿಯನ್ನು ಸರ್ಕಾರ ರಚಿಸಿತ್ತು.
ಮಧ್ಯಮ ವರ್ಗದ ಹಿತಾಸಕ್ತಿಗೆ ಕೇಂದ್ರದ ಬಜೆಟ್‌ನಲ್ಲಿ ಏನೇನು ಇರಲಿದೆ?
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪರಿಣತರು, ತಂಬಾಕು ಉತ್ಪನ್ನಗಳ ಮೇಲೆ ಅಧಿಕ ‘ಪಾಪದ’ ತೆರಿಗೆಯನ್ನು ವಿಧಿಸುವ ನಿರೀಕ್ಷೆ ಹೊಂದಿದ್ದಾರೆ. ತಂಬಾಕು ಉತ್ಪನ್ನಗಳು ಶೇ 28ರ ಜಿಎಸ್‌ಟಿ ಸ್ಲ್ಯಾಬ್ ಅಡಿಯಲ್ಲಿ ಬರುತ್ತವೆ. ಹಾಗೆಯೇ ತಂಬಾಕು ಎಲೆಗಳು ಶೇ 5ರಷ್ಟು ತೆರಿಗೆಗೆ ಒಳಪಡುತ್ತದೆ.
ಸಮಾಜಕ್ಕೆ ಹಾನಿಕರವಾದ ವಸ್ತುಗಳು ಮತ್ತು ಸೇವೆಗಳ ಮೇಲೆ ಸಿನ್ ಟ್ಯಾಕ್ಸ್ ಹೇರಿಕೆ ಮಾಡಲಾಗುತ್ತದೆ. ತಂಬಾಕು, ಜೂಜು ಸಂಸ್ಥೆಗಳು, ಮದ್ಯ, ಸಿಗರೇಟ್ ಮುಂತಾದವು ಇವುಗಳಲ್ಲಿ ಸೇರಿವೆ. ಹಾನಿಕಾರಕ ವಸ್ತುಗಳ ಬಳಕೆಯನ್ನು ತಗ್ಗಿಸಲು ಅಥವಾ ನಿರ್ಮೂಲನೆ ಮಾಡಲು ಅವುಗಳನ್ನು ಮತ್ತಷ್ಟು ದುಬಾರಿ ಮಾಡುವುದು ಈ ತೆರಿಗೆ ಹಿಂದಿನ ಉದ್ದೇಶ. ಈ ರೀತಿಯ ತೆರಿಗೆ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಬಳಕೆಯಲ್ಲಿದೆ.
Read more…
[wpas_products keywords=”deal of the day”]