Karnataka news paper

2022ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ 9ಕ್ಕೆ ಕಡಿತಗೊಳಿಸಿದ ಐಎಂಎಫ್


ಹೈಲೈಟ್ಸ್‌:

  • ವರ್ಲ್ಡ್ ಎಕನಾಮಿಕ್ ಔಟ್‌ಲುಕ್‌ನಲ್ಲಿ ಐಎಎಂಪ್ ವರದಿ ಬಿಡುಗಡೆ
  • ಮಾರ್ಚ್ 31ರ ಹಣಕಾಸು ವರ್ಷದ ಅಂತ್ಯದಲ್ಲಿ ಶೇ 9ರ ಜಿಡಿಪಿ ಪ್ರಗತಿ
  • ಅಕ್ಟೋಬರ್ ತಿಂಗಳಲ್ಲಿ ಶೇ 9.5ರಷ್ಟು ಜಿಡಿಪಿ ಪ್ರಗತಿ ಅಂದಾಜಿಸಿದ್ದ ಸಂಸ್ಥೆ

ಹೊಸದಿಲ್ಲಿ: ಮಾರ್ಚ್ 31ರಂದು ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಶೇ 9ಕ್ಕೆ ಕಡಿತ ಮಾಡಿದೆ. ಉದ್ಯಮ ಚಟುವಟಿಕೆ ಮತ್ತು ಚಲನಶೀಲತೆ ಮೇಲೆ ಕೊರೊನಾ ವೈರಸ್ ಹೊಸ ತಳಿಯ ಪರಿಣಾಮದಿಂದ ಹಿನ್ನಡೆಯನ್ನು ಅಂದಾಜಿಸಿರುವ ಕಂಪೆನಿಗಳಂತೆಯೇ ಐಎಂಎಫ್ ಕೂಡ, ಪ್ರಗತಿ ಹಿನ್ನಡೆಯನ್ನು ಊಹಿಸಿದೆ.

ಮಂಗಳವಾರ ವರ್ಲ್ಡ್ ಎಕನಾಮಿಕ್ ಔಟ್‌ಲುಕ್‌ನಲ್ಲಿ ತನ್ನ ಇತ್ತೀಚಿನ ವರದಿ ಪ್ರಕಟಿಸಿರುವ ಐಎಂಎಫ್ (IMF), ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಭಾರತದ ಜಿಡಿಪಿ ಬೆಳವಣಿಗೆಯನ್ನು ಶೇ 9.5ರಷ್ಟು ಅಂದಾಜಿಸಿತ್ತು. ಮುಂದಿನ ಹಣಕಾಸು ವರ್ಷಕ್ಕೆ (ಏಪ್ರಿಲ್ 2022 ರಿಂದ ಮಾರ್ಚ್ 2023) ಶೇ 7.1ರಷ್ಟು ಜಿಡಿಪಿ ಪ್ರಗತಿ ಲೆಕ್ಕ ಹಾಕಿತ್ತು.
ಭಾರತೀಯರಲ್ಲಿ ಕೋವಿಡ್‌ ನಂತರ ಆರ್ಥಿಕ ಭದ್ರತೆಯ ನಿರೀಕ್ಷೆ ಹೆಚ್ಚಳ
ಭಾರತದ ಆರ್ಥಿಕತೆಯು 2020-21ನೇ ಹಣಕಾಸು ವರ್ಷದಲ್ಲಿ ಶೇ 7.3ರಷ್ಟು ಕುಸಿತ ಕಂಡಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಶೇ 9.5ರಷ್ಟು ಆರ್ಥಿಕತೆ ಪ್ರಗತಿ ಅಂದಾಜಿಸಿದ್ದರೆ, ಕೇಂದ್ರ ಸರ್ಕಾರದ ಸಾಂಖ್ಯಿಕ ಕಚೇರಿ ಶೇ 9.2ಕ್ಕಿಂತರಷ್ಟು ಅಂದಾಜಿಸಿದೆ. ಆದರೆ ವಾಷಿಂಗ್ಟನ್ ಮೂಲದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್, ಇವುಗಳಿಗಿಂತ ಕಡಿಮೆ ಆರ್ಥಿಕ ಪ್ರಗತಿ ಊಹಿಸಿದೆ.

ಎಸ್‌ & ಪಿ ಅಂದಾಜಿಸಿರುವ ಶೇ 9.5 ಮತ್ತು ಮೂಡೀಸ್‌ನ ಶೇ 9.3ಕ್ಕಿಂತ ಐಎಂಎಫ್ ಲೆಕ್ಕಾಚಾರದಲ್ಲಿ ಭಾರತದ ಆರ್ಥಿಕತೆ ಪ್ರಗತಿ ಕಡಿಮೆ ಇದೆ. ಆದರೆ ವಿಶ್ವ ಬ್ಯಾಂಕ್‌ನ ಶೇ 8.3 ಫಿಚ್‌ನ ಶೇ 8.4ಕ್ಕಿಂತ ಅಧಿಕವಿದೆ. ಐಎಂಎಫ್ ಪ್ರಕಾರ, 2023ರಲ್ಲಿ ಕ್ರೆಡಿಟ್ ಬೆಳವಣಿಗೆ ಉಂಟಾಗಲಿದೆ. ಅಲ್ಲದೆ, ಹೂಡಿಕೆ ಹಾಗೂ ಅನುಭೋಗದಲ್ಲಿ ಕೂಡ ಹೆಚ್ಚಳವಾಗಲಿದ್ದು, ಹಣಕಾಸು ವಲಯದಲ್ಲಿ ನಿರೀಕ್ಷಿಸಿರುವುದಕ್ಕಿಂತ ಉತ್ತಮ ಪ್ರದರ್ಶನ ಇರಲಿದೆ.

2021ರ ಶೇ 5.9ರಿಂದ 2022ರಲ್ಲಿ ಶೇ 4.4ಕ್ಕೆ ಜಾಗತಿಕ ಆರ್ಥಿಕ ಬೆಳವಣಿಗೆ ನಿರೀಕ್ಷಿಸಲಾಗಿದೆ ಎಂದು ಐಎಂಎಫ್ ಹೇಳಿದೆ. ಅಕ್ಟೋಬರ್‌ನಲ್ಲಿ ಇದ್ದಿದ್ದಕ್ಕಿಂತ 2022ರಲ್ಲಿ ಶೇ ಅರ್ಧದಷ್ಟು ಕಡಿಮೆ ಇರಲಿದೆ.
ಮಾರುತಿ ಸುಜುಕಿಯ ಭಾರತದ ಅತಿ ದೊಡ್ಡ ಘಟಕ ಸೋನಿಪತ್‌ನಲ್ಲಿ ಶೀಘ್ರದಲ್ಲೇ ಕಾರ್ಯ ಆರಂಭ
ಚೀನಾದಲ್ಲಿ ಸಾಂಕ್ರಾಮಿಕವು ಭಾರಿ ಹಾನಿ ಮಾಡಿದೆ. ಮುಖ್ಯವಾಗಿ ಚೀನಾ ಸರ್ಕಾರದ ಶೂನ್ಯ ಸಹಿಷ್ಣುತೆ ಕೋವಿಡ್ 19 ನೀತಿ ಹಾಗೂ ಪ್ರಾಪರ್ಟಿ ಡೆವಲಪರ್‌ಗಳ ಮೇಲಿನ ಸುದೀರ್ಘ ಹಣಕಾಸು ಒತ್ತಡಗಳು ಶೇ 0.8ರಷ್ಟು ಅಂಕಗಳ ಕುಸಿತಕ್ಕೆ ಕಾರಣವಾಗಿದೆ. ಜಾಗತಿಕ ಪ್ರಗತಿ 2023ರಲ್ಲಿ ಶೇ 3.8ರಷ್ಟು ಕುಸಿಯುವ ಸಾಧ್ಯತೆ ಇದೆ. ಇದು ಹಿಂದಿನ ಅಂದಾಜಿಗಿಂತ ಶೇ 0.2ರಷ್ಟು ಅಧಿಕವಾಗಿದ್ದರೂ, 2022ರ ದ್ವಿತೀಯಾರ್ಧದಲ್ಲಿ ಕುಸಿತದ ಮಧ್ಯೆ ಹಠಾತ್ ಸುಧಾರಣೆ ಕಂಡಿದೆ.

ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್‌ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.



Read more…

[wpas_products keywords=”deal of the day”]