Karnataka news paper

ಅಮೆರಿಕ ಜಿಮ್ನಾಸ್ಟಿಕ್ ತಾರೆ ಸಿಮೊನ್‌ ಬೈಲ್ಸ್‌ಗೆ ‘ಟೈಮ್‌’ ಗೌರವ


Prajavani

ನ್ಯೂಯಾರ್ಕ್‌: ಅಮೆರಿಕದ ಜಿಮ್ನಾಸ್ಟಿಕ್ ತಾರೆ ಸಿಮೊನ್ ಬೈಲ್ಸ್ ಅವರು ಟೈಮ್‌ ನಿಯತಕಾಲಿಕೆ ನೀಡುವ 2021ರ ‘ವರ್ಷದ ಅಥ್ಲೀಟ್‌‘ ಗೌರವಕ್ಕೆ ಭಾಜನರಾಗಿದ್ದಾರೆ.

ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಿದ್ದ ಸಿಮೊನ್ ಅವರು ಟೋಕಿಯೊ ಒಲಿಂಪಿಕ್ಸ್‌ನ ನಾಲ್ಕು ವಿಭಾಗಗಳಿಂದ ಹಿಂದೆ ಸರಿದಿದ್ದರು. ಅವರ ದಿಟ್ಟ ನಿಲುವಿಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಒತ್ತಡದ ನಡುವೆಯೂ 24 ವರ್ಷದ ಜಿಮ್ನಾಸ್ಟ್‌, ಕ್ರೀಡಾಕೂಟದ ಬ್ಯಾಲನ್ಸ್ ಬೀಮ್ ವಿಭಾಗದಲ್ಲಿ ತಮ್ಮ ತಂಡಕ್ಕೆ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಡುವಲ್ಲಿ ನೆರವಾಗಿದ್ದರು.

ತಮ್ಮ ತಂಡದ ವೈದ್ಯ ಲ್ಯಾರಿ ನಾಸರ್ ಮಾಡಿದ ದೌರ್ಜನ್ಯಗಳ ಕುರಿತು, ಟೋಕಿಯೊ ಒಲಿಂಪಿಕ್ಸ್‌ ಮುಗಿದ ಒಂದು ತಿಂಗಳ ಬಳಿಕ, ಸೆನೆಟ್ ನ್ಯಾಯಾಂಗ ಸಮಿತಿಯ ಮುಂದೆ ಸಿಮೊನ್‌ ಹೇಳಿಕೊಂಡಿದ್ದರು.

ತಾವು ದೂರು ಕೊಟ್ಟಾಗ ಎಫ್‌ಬಿಐ ಅಧಿಕಾರಿಗಳು ಮತ್ತು ಅಮೆರಿಕ ಜಿಮ್ನಾಸ್ಟಿಕ್ಸ್ ಫೆಡರೇಷನ್, ಒಲಿಂಪಿಕ್‌ ಮತ್ತು ಪ್ಯಾರಾಲಿಂಪಿಕ್ಸ್ ಸಮಿತಿಗಳು ತೋರಿದ ನಿರ್ಲಕ್ಷ್ಯ ಧೋರಣೆಯ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ಹಲವು ಅಥ್ಲೀಟ್‌ಗಳೂ ತಮ್ಮ ಮೇಲಿನ ದೌರ್ಜನ್ಯದ ಘಟನೆಗಳನ್ನು ಬಹಿರಂಗಪಡಿಸಿದರು.



Read more from source