ಹೈಲೈಟ್ಸ್:
- ಬಿಜೆಪಿ ಸರಕಾರದ ಜಿಲ್ಲಾ ಉಸ್ತುವಾರಿಗಳ ನೇಮಕ ವಿಚಾರ
- 16 ವರ್ಷಗಳ ನಂತರ ನನ್ನ ಜನರ ಸೇವೆ ಮಾಡುವ ಸುದೈವಕಾಶ
- ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿಕೆ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರು ಮಾತನಾಡಿ, ತಾಯಿ ನೆಲದಲ್ಲಿ ನನ್ನ ಪಾಲಿಗೆ ಇದೊಂದು ಐತಿಹಾಸಿಕ ಹಾಗೂ ಭಾವನಾತ್ಮಕ ಕ್ಷಣ ಎಂದರೆ ತಪ್ಪಾಗಲ್ಲ.
ತಾಯಿ ಶಬರಿ ಶ್ರೀರಾಮನನ್ನು ಕಂಡ ಆ ಕ್ಷಣ, ಹಕ್ಕ-ಬುಕ್ಕರಿಗೆ, ಗುರು ವಿದ್ಯಾರಣ್ಯರು ಒಲಿದ ಆ ಕ್ಷಣ, ಹನುಮರಿಗೆ ಮೊದಲ ಬಾರಿಗೆ ಶ್ರೀರಾಮನ ದರ್ಶನವಾದ ಆ ಕ್ಷಣ.. ಬಣ್ಣಿಸಲು ಅಸಾಧ್ಯ. ಅಂತಹ ಕ್ಷಣ ನನ್ನೆದುರಿಗಿದೆ. ಶ್ರೀರಾಮನ 14 ವರ್ಷ ವನವಾಸ, ಪಾಂಡವರ 12 ವರ್ಷ ವನವಾಸ, ಎರಡೂ ಮುಗಿದದ್ದು ಅವರು ತಾಯಿ ನಾಡಿಗೆ ಮತ್ತೆ ಜನ ಸೇವೆಗೆ ಮರುಳಿದಂತೆ, ಇಲ್ಲಿಯೂ ಅಂತಹ ಕ್ಷಣ ಮರುಕಳಿಸಿದೆ. 16 ವರ್ಷಗಳ ನಂತರ ಇಂದು ನನ್ನ ಜನರ ಸೇವೆ ಮಾಡೋ ಅವಕಾಶ ಒದಗಿ ಬಂದಿದೆ ಎಂದರು.
2006 ರಿಂದ 5 ಬಾರಿ ಶಾಸಕನಾಗಿ, 3 ಬಾರಿ ಸಚಿವನಾಗಿದ್ದರೂ, ಉಸ್ತುವಾರಿಯಾಗಿ ಜಿಲ್ಲೆಯ ಜನರ ಸೇವೆ ಮಾಡಲು ಅವಕಾಶ ಸಿಕ್ಕಿರಲಿಲ್ಲ. 16 ವರ್ಷಗಳ ನಂತರ ಇಂದು ಸಿಕ್ಕಿದೆ ಭಾವದ್ವೇಗಕ್ಕೆ ಒಳಗಾದ ಸಚಿವ ಶ್ರೀರಾಮುಲು ಅವರು ಇದೆ ಪ್ರಜಾತಂತ್ರದ ವಿಶೇಷ. ಇದೇ ಈ ದಿನದ ವಿಶೇಷ ಎಂದರು.
ನಾನು ಒಮ್ಮೆ ಈ ಭಾಗದಲ್ಲಿ ಪಾದಯಾತ್ರೆ ಮಾಡುತ್ತಿದ್ದಾಗ ಎದುರಿಗೆ ಬಂದ ಅಜ್ಜಿಯೊಬ್ಬರು ಸತತವಾಗಿ ನಿನಗೆ ಮತ ಹಾಕಿ ಗೆಲ್ಲಿಸಿ ನಿನ್ನೊಂದಿಗಿದ್ದೇನೆ, ನಿನ್ನ ಸೇವೆ ನಮಗೆ ಯಾವಾಗ ಎಂದಿದ್ದರು..? ಇಂದು ನಿಮ್ಮ ಸೇವೆಗೆ ಬಂದಿದ್ದೇನೆ, ಆ ಅವಕಾಶ ಸಿಕ್ಕಿದೆ ಎಂದು ಅವರಿಗೆ ಹೇಳಬಯಸುತ್ತೇನೆ. ಒಬ್ಬ ಜನನಾಯಕನಿಗೆ ಜನರ ಋಣ ತೀರಿಸಲು ಸಿಗೋ ಅವಕಾಶವೇ ನಮ್ಮ ಸಂವಿಧಾನದ ಶಕ್ತಿ. ನಮ್ಮನ್ನ ಆರಿಸುವ ಶಕ್ತಿ ಜನರಿಗೆ ನೀಡಿ, ಅವರಿಗೆ ಮರು ಸೇವೆ ಸಲ್ಲಿಸೋ ಅವಕಾಶ ನೀಡುವುದೇ ನಮ್ಮ ಸಂವಿಧಾನದ ಶಕ್ತಿ. ಈ ದಿನದ ಶಕ್ತಿ ಎಂದು ಬಣ್ಣಿಸಿದರು.
ಎರಡು ಜಿಲ್ಲೆಗಳ ಉಸ್ತುವಾರಿ; ಖುಷಿಯಾದ ಕೆ. ಗೋಪಾಲಯ್ಯ!
ಜೋಗತಿ ಮಂಜಮ್ಮ ಮತ್ತು ಸಂಡೂರು ಲಂಬಾಣಿ ಕಸೂತಿಯನ್ನು ನೆನೆದ ಸಚಿವ ಶ್ರೀರಾಮುಲು ಅವರು ಚಿಕ್ಕ ಹಳ್ಳಿ ಒಂದರಲ್ಲಿ ಜನಿಸಿ ಸಮಾಜದಲ್ಲಿ ನೋವುಂಡು, ಜೋಗತಿಯೊಬ್ಬರು ಛಲ ಬಿಡದೇ ಸಾಧನೆ ಮಾಡಿ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಇಂದು ರಾಷ್ಟ್ರಗೌರವಕ್ಕೆ ಪಾತ್ರರಾಗಿ ಇಡೀ ರಾಜ್ಯಕ್ಕೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇಂದು ದೆಹಲಿಯಲ್ಲಿ ರಾಜ್ಯದ ಟ್ಯಾಬ್ಲೋ ಗಮನಿಸಬೇಕು. ಇದು ಈ ಕಲೆಯಲ್ಲಿ ತೊಡಗಿಸಿಕೊಂಡಿರೋ ಜಿಲ್ಲೆಯ ಪ್ರತಿ ಅಕ್ಕ-ತಂಗಿಯರಿಗೆ, ತಾಯಂದಿರಿಗೆ ಸಂದ ಗೌರವ ಎಂದರು.
Read more
[wpas_products keywords=”deal of the day sale today offer all”]