Karnataka news paper

ಟಿ20 ಕ್ರಿಕೆಟ್‌ನಲ್ಲಿ ವಿಶೇಷ ವಿಶ್ವ ದಾಖಲೆ ಬರೆದ ಪಾಕಿಸ್ತಾನ ತಂಡ!


ಹೈಲೈಟ್ಸ್‌:

  • ಪಾಕಿಸ್ತಾನ-ವೆಸ್ಟ್‌ ಇಂಡೀಸ್‌ ನಡುವೆ ನಡೆಯುತ್ತಿರುವ ಟಿ20 ಕ್ರಿಕೆಟ್‌ ಸರಣಿ.
  • ಮೊದಲ ಪಂದ್ಯದಲ್ಲಿ 63 ರನ್‌ಗಳ ಭರ್ಜರಿ ಜಯ ದಾಖಲಿದ ಪಾಕ್‌ ಪಡೆ.
  • ವರ್ಷವೊಂದರಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯ ಗೆದ್ದ ದಾಖಲೆ.

ಕರಾಚಿ: ಎರಡು ಬಾರಿಯ ಟಿ20 ವಿಶ್ವ ಚಾಂಪಿಯನ್ಸ್‌ ವೆಸ್ಟ್‌ ಇಂಡೀಸ್‌ ಎದುರು ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಶುಭಾರಂಭ ಮಾಡಿರುವ ಆತಿಥೇಯ ಪಾಕಿಸ್ತಾನ ತಂಡ ವಿಶೇಷ ವಿಶ್ವ ದಾಖಲೆ ಒಂದನ್ನು ಬರೆದಿದೆ.

ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಆಲ್‌ರೌಂಡ್‌ ಆಟವಾಡಿದ ಪಾಕಿಸ್ತಾನ ಪ್ರವಾಸಿ ಪಡೆಯನ್ನು 63 ರನ್‌ಗಳ ಅಂತರದಲ್ಲಿ ಬಗ್ಗುಬಡಿದು 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವರ್ಷ ಒಂಡದರಲ್ಲೇ ಬರೋಬ್ಬರಿ 18 ಪಂದ್ಯಗಳನ್ನು ಗೆದ್ದ ಮೊದಲ ತಂಡವೆಂಬ ವಿಶ್ವ ದಾಖಲೆ ಬರೆದಿದೆ.

ಅಂದಹಾಗೆ 2018ರಲ್ಲಿ ಪಾಕಿಸ್ತಾನ 17 ಪಂದ್ಯಗಳನ್ನು ಗೆದ್ದು ಬೀಗಿತ್ತು. ಈಗ ತನ್ನದೇ ದಾಖಲೆಯನ್ನು ಮತ್ತಷ್ಟು ಸುಧಾರಿಸಿಕೊಂಡಿದೆ. ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯಂತ ಬಲಿಷ್ಠ ತಂಡವಾಗಿರುವ ಪಾಕಿಸ್ತಾನ ಕಳೆದ 11 ಪಂದ್ಯಗಳಲ್ಲಿ 10 ಜಯ ದಾಖಲಿಸಿದೆ. ಇತ್ತೀಚೆಗೆ ನಡೆದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸೂಪರ್‌ 12 ಹಂತದ ಎಲ್ಲ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ಸ್‌ ತಲುಪಿದ್ದ ಪಾಕ್‌ ತಂಡ ಆಸ್ಟ್ರೇಲಿಯಾ ಎದುರು ಸೋತು ನಿರಾಶೆ ಅನುಭವಿಸಿತ್ತು.

ಅತಿ ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ರವೀಂದ್ರ ಜಡೇಜಾ ವಿದಾಯ! ವರದಿ

2021ರಲ್ಲಿ ಬಾಬರ್‌ ಆಝಮ್‌ ಸಾರಥ್ಯದ ಪಾಕಿಸ್ತಾನ ತಂಡ ಒಟ್ಟು 27 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 21 ಪಂದ್ಯಗಳನ್ನು ಗೆದ್ದು ಬೀಗಿದೆ. ಚುಟುಕು ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆದಿರುವ ಪಾಕ್‌ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ವಿಶ್ವದ ಏಕಾಮಾತ್ರ ತಂಡವಾಗಿದೆ.

ಈ ವರ್ಷ ಪಾಕ್‌ ತಂಡದ ಪರ ನಾಯಕ ಬಾಬರ್ ಆಝಮ್‌ (853) ಮತ್ತು ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ರಿಝ್ವಾನ್‌ (1208) ಭರ್ಜರಿ ಬ್ಯಾಟಿಂಗ್‌ ನಡೆಸಿ ರನ್‌ ಶಿಖರವನ್ನೇ ನಿರ್ಮಿಸಿದ್ದಾರೆ. ಪಾಕಿಸ್ತಾನ ತಂಡದ ಯಶಸ್ಸಿಗೆ ಇದು ಬಹುದೊಡ್ಡ ಕಾರಣವಾಗಿದೆ.

6ರಲ್ಲಿ 5 ಸರಣಿ ಜಯ
ಪಾಕಿಸ್ತಾನ ತಂಡ ಈ ವರ್ಷ ಆಡಿದ ಆರು ಸರಣಿಗಳಲ್ಲಿ ಬರೋಬ್ಬರಿ 5 ಸರಣಿಗಳನ್ನು ಗೆದ್ದಿದೆ. ಮೊದಲಿಗೆ ತಾಯ್ನಾಡಿನಲ್ಲಿ ದಕ್ಷಿಣ ಆಫ್ರಿಕಾ ಎದುರು 2-1 ಅಂತರದ ಜಯ ದಾಖಲಿ, ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಆತಿಥೇಯರನ್ನು 3-1 ಅಂತರದಲ್ಲಿ ಬಗ್ಗುಬಡಿದಿತ್ತು. ನಂತರ ಜಿಂಬಾಬ್ವೆ ಎದುರು 2-1 ಅಂತರದ ಜಯ ದಾಖಲಿಸಿದರೂ, ಇಂಗ್ಲೆಂಡ್‌ ಎದುರು 1-2 ಅಂತರದಲ್ಲಿ ಸೋಲನುಭವಿಸಿತ್ತು. ಬಳಿಕ ವೆಸ್ಟ್‌ ಇಂಡೀಸ್‌ ಎದುರು ಏಕೈಕ ಪಂದ್ಯದ ಸರಣಿಯನ್ನು ವಶಪಡಿಸಿಕೊಂಡಿತ್ತು. ನಂತರ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ 5 ಪಂದ್ಯ ಗೆದ್ದು ಸೆಮಿಫೈನಲ್‌ ಸೋತರೆ, ಬಾಂಗ್ಲಾದೆಶದ ಪ್ರವಾಸದಲ್ಲಿನ 3 ಪಂದ್ಯಗಳ ಸರಣಿಯನ್ನು ವೈಟ್‌ವಾಶ್‌ ಮಾಡಿತ್ತು.

ರೋಹಿತ್‌ ಸ್ಥಾನಕ್ಕೆ ಪ್ರಿಯಾಂಕ್‌ ಆಯ್ಕೆ ಮಾಡಿರುವುದಕ್ಕೆ ಚೋಪ್ರಾ ಬೇಸರ!

ವರ್ಷ ಒಂದರಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ತಂಡಗಳು

  • ಪಾಕಿಸ್ತಾನ: 18 ಗೆಲುವು (2021)
  • ಪಾಕಿಸ್ತಾನ: 17 ಗೆಲುವು (2018)
  • ಇಂಡಿಯಾ: 15 ಗೆಲುವು (2016)
  • ದ. ಆಫ್ರಿಕಾ: 15 ಗೆಲುವು (2021)
  • ಇಂಡಿಯಾ: 14 ಗೆಲುವು (2018)
  • ಐರ್ಲೆಂಡ್‌: 13 ಗೆಲುವು (2019)
  • ನ್ಯೂಜಿಲೆಂಡ್‌” 13 ಗೆಲುವು (2021)
  • ಅಫಘಾನಿಸ್ತಾನ: 11 ಗೆಲುವು (2016)
  • ಬಾಂಗ್ಲಾದೇಶ: 11 ಗೆಲುವು (2021)
  • ಇಂಗ್ಲೆಂಡ್‌: 11 ಗೆಲುವು (2021)
  • ಆಸ್ಟ್ರೇಲಿಯಾ: 10 ಗೆಲುವು (2010)
  • ಆಸ್ಟ್ರೇಲಿಯಾ: 10 ಗೆಲುವು (2018)
  • ಆಸ್ಟ್ರೇಲಿಯಾ: 10 ಗೆಲುವು (2021)
  • ಇಂಡಿಯಾ: 10 ಗೆಲುವು (2021)

ಪಾಕ್‌ಗೆ 63 ರನ್‌ ಜಯ
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ಆರಂಭದಲ್ಲೇ ಬಾಬರ್‌ ಆಝಮ್‌ (0) ವಿಕೆಟ್‌ ಕಳೆದುಕೊಂಡರೂ, ವಿಕೆಟ್‌ಕೀಪರ್‌ ಮೊಹಮ್ಮದ್ ರಿಝ್ವಾನ್‌ (78) ಮತ್ತು ಯುವ ಬ್ಯಾಟ್ಸ್‌ಮನ್‌ ಹೈದರ್‌ ಅಲಿ (68) ಬಾರಿಸಿದ ಅರ್ಧಶತಕಗಳ ಬಲದಿಂದ 200/6 ರನ್‌ಗಳ ಶಿಖರ ನಿರ್ಮಸಿತು. ಬಳಿಕ ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ 19 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲ್‌ಔಟ್‌ ಆಯಿತು. ಮೊಹಮ್ಮದ್‌ ವಾಸಿಮ್‌ 4 ವಿಕೆಟ್‌ ಕಿತ್ತು ತಂಡಕ್ಕೆ ಭರ್ಜರಿ ಜಯ ತಂದರು.



Read more