Karnataka news paper

ಐಕ್ಯೂ ಕ್ವೆಸ್ಟ್ ಡೇಸ್ ಸೇಲ್‌ನಲ್ಲಿ ಐಕ್ಯೂ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್‌ ಡಿಸ್ಕೌಂಟ್‌!


ಐಕ್ಯೂ ಕಂಪೆನಿ

ಹೌದು, ಐಕ್ಯೂ ಕಂಪೆನಿ ಐಕ್ಯೂ ಕ್ವೆಸ್ಟ್ ಡೇಸ್ ಸೇಲ್‌ ಅನ್ನು ಆಯೋಜಿಸಿದೆ. ಈ ಸೇಲ್‌ ಈಗಾಗಲೇ ಲೈವ್‌ ಆಗಿದ್ದು, ಡಿಸೆಂಬರ್ 16, 2021 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಐಕ್ಯೂ 7 ಸರಣಿ, ಐಕ್ಯೂ Z5 ಮತ್ತು ಐಕ್ಯೂ Z3 ಸೇರಿದಂತೆ ಬ್ರ್ಯಾಂಡ್‌ನ ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ. ಹಾಗಾದ್ರೆ ಐಕ್ಯೂ ಕ್ವೆಸ್ಟ್‌ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಕ್ಯೂ 7

ಐಕ್ಯೂ 7

ಐಕ್ಯೂ ಕ್ವೆಸ್ಟ್‌ ಡೇಸ್‌ ಸೇಲ್‌ನಲ್ಲಿ ಐಕ್ಯೂ 7 ಮತ್ತು ಐಕ್ಯೂ 7 ಲೆಜೆಂಡ್ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ಪಡೆದುಕೊಂಡಿವೆ. ಇದರಲ್ಲಿ 31,990ರೂ ಮೂಲ ಬೆಲೆಯ ಐಕ್ಯೂ 7 ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ ಇದೀಗ ಅಮೆಜಾನ್‌ನಲ್ಲಿ 29,990ರೂ. ಬೆಲೆಗೆ ಲಭ್ಯವಾಗಲಿದೆ. 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಸೇರಿದಂತೆ ಫೋನ್‌ನ ಎಲ್ಲಾ ವೇರಿಯೆಂಟ್‌ ಆಯ್ಕೆಗಳ ಮೇಲೆ ಕೂಡ 2,000ರೂ.ಗಳ ತನಕ ರಿಯಾಯಿತಿ ಪಡೆಯಬಹುದಾಗಿದೆ. ಇದಲ್ಲದೆ ನೋ ಕಾಸ್ಟ್‌ ಇಎಂಐ ಆಯ್ಕೆಯನ್ನು ಸಹ ನೀಡಲಾಗಿದೆ. ಇದರಲ್ಲಿ iQOO 7 ಮೇಲೆ 9 ತಿಂಗಳ ನೋ ಕಾಸ್ಟ್‌ EMI ಆಯ್ಕೆ ಸಿಗಲಿದೆ.

ಐಕ್ಯೂ 7 ಲೆಜೆಂಡ್‌

ಐಕ್ಯೂ 7 ಲೆಜೆಂಡ್‌

ಇನ್ನು ಐಕ್ಯೂ 7 ಲೆಜೆಂಡ್‌ ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ ಐಕ್ಯೂ ಕ್ವೆಸ್ಟ್‌ ಡೇಸ್‌ ಸೇಲ್‌ನಲ್ಲಿ 36,990 ರೂ.ಗಳಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಮೂಲ ಬೆಲೆ 39,990 ರೂ. ಆಗಿದ್ದು, 3,000ರೂ.ಗಳ ರಿಯಾಯಿತಿ ನೀಡಿದೆ. ಈ ಎಲ್ಲಾ ರಿಯಾಯಿತಿಗಳು Amazon ಕೂಪನ್‌ಗಳ ಮೂಲಕ ಲಭ್ಯವಿವೆ. ಇದನ್ನು Amazon India ವೆಬ್‌ಸೈಟ್‌ನಲ್ಲಿ ಪ್ರಾಡಕ್ಟ್‌ ಪೇಜ್‌ನಲ್ಲಿ ಅನ್ವಯಿಸಬಹುದು. ಈ ಕೂಪನ್ ರಿಯಾಯಿತಿಯ ಪಕ್ಕದಲ್ಲಿರುವ ಬಾಕ್ಸ್ ಅನ್ನು ಚೆಕ್ ಮಾಡಲು ಖರೀದಿದಾರರು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇನ್ನು ಐಕ್ಯೂ 7 ಲೆಜೆಂಡ್‌ ಸ್ಮಾರ್ಟ್‌ಫೋನ್‌ 12 ತಿಂಗಳ ನೋ ಕಾಸ್ಟ್‌ EMI ಲಭ್ಯವಿದೆ.

ಐಕ್ಯೂ Z3 5G

ಐಕ್ಯೂ Z3 5G

ಐಕ್ಯೂ Z3 ಸ್ಮಾರ್ಟ್‌ಫೋನ್‌ iQOO ಕ್ವೆಸ್ಟ್ ಡೇಸ್ ಸೇಲ್‌ನಲ್ಲಿ 2,000 ರಿಯಾಯಿತಿಯನ್ನು ಪಡೆದಿದ್ದು, 17,990ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 8GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಮೇಲೂ ಕೂಡ ಇದೇ ರಿಯಾಯಿತಿ ಅನ್ವಯವಾಗಲಿದೆ. ಇದಲ್ಲದೆ ಐಕ್ಯೂ Z3 5G ಸ್ಮಾರ್ಟ್‌ಫೋನ್‌ ಖರೀದಿಸುವವರು 9 ತಿಂಗಳವರೆಗೆ ನೋ ಕಾಸ್ಟ್‌ EMI ಆಯ್ಕೆಯನ್ನು ಪಡೆಯಬಹುದಾಗಿದೆ.

ಐಕ್ಯೂ Z5

ಐಕ್ಯೂ Z5

iQOO ಕ್ವೆಸ್ಟ್ ಡೇಸ್ ಸೇಲ್‌ನಲ್ಲಿ ಐಕ್ಯೂ Z5 ಸ್ಮಾರ್ಟ್‌ಫೋನ್‌ 2,000ರಷ್ಟು ರಿಯಾಯಿತಿಯನ್ನು ಪಡೆದಿದ್ದು, 21,990ರೂ.ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 778G SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಒರಿಜಿನ್ ಓಎಸ್ 1.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 44W ಫ್ಲ್ಯಾಶ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸೇಲ್‌ನಲ್ಲಿ ಎಲ್ಲಾ iQOO ಸ್ಮಾರ್ಟ್‌ಫೋನ್‌ಗಳು ಐಕ್ಯೂ Z3 5G ಅನ್ನು ಹೊರತುಪಡಿಸಿ 3,000ರೂ. ವರೆಗಿನ ಎಕ್ಸ್‌ಚೇಂಜ್ ಆಫರ್‌ಗೆ ಅರ್ಹತೆ ಪಡೆದುಕೊಂಡಿವೆ. ಇದು 2,000ರೂ. ವರೆಗಿನ ಎಕ್ಸ್‌ಚೇಂಜ್ ಆಫರ್‌ನೊಂದಿಗೆ ಬರುತ್ತದೆ.



Read more…