ಹೈಲೈಟ್ಸ್:
- ರಾಜ್ಯದ ಒಟ್ಟು ಐವರು ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿ
- ಅಬ್ದುಲ್ ಖಾದರ ನಡಕಟ್ಟಿನರಿಗೆ ಪದ್ಮಶ್ರೀ
- 19ನೇ ವಯಸ್ಸಿನಲ್ಲೇ ಕೃಷಿ ಸಂಶೋಧನೆ ಆರಂಭಿಸಿದ್ದ ನಡಕಟ್ಟಿನ
ಅಣ್ಣಿಗೇರಿ : ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ರೈತನ ಮಗನಾಗಿ ಬೆಳೆದು, ತನ್ನ 19ನೇ ವಯಸ್ಸಿನಲ್ಲೇ ಕೃಷಿ ಉಪಕರಣದಲ್ಲಿ ಸಂಶೋಧನೆ ಮಾಡುವ ಮೂಲಕ ಇಡೀ ನಾಡಿನ ಗಮನ ಸೆಳೆದ ಅಣ್ಣಿಗೇರಿಯ ವಿಶ್ವಶಾಂತಿ ಕೃಷಿ ಸಂಶೋಧಕ ಅಬ್ದುಲ್ ಖಾದರ ಇಮಾಮಸಾಬ ನಡಕಟ್ಟಿನ ಅವರ ಯಶೋಗಾಥೆ ಇಂದು ಪದ್ಮಶ್ರೀ ಪ್ರಶಸ್ತಿಗೆ ಬಂದು ನಿಂತಿದೆ.
1953ರಲ್ಲಿಅಣ್ಣಿಗೇರಿಯಲ್ಲಿ ಜನನ ಹೊಂದಿ ಎಸ್‌ಎಸ್‌ಎಲ್‌ಸಿ ವರೆಗೆ ಶಿಕ್ಷಣ ಮುಗಿಸಿ ನಾಡಿನ ತಂತ್ರಜ್ಞಾನದ ಕಡೆ ವಿಶೇಷ ಆಸಕ್ತಿ ಹೊಂದಿದ ಅವರು, 19 ವರ್ಷದವರಿದ್ದಾಗಲೇ ಯಂತ್ರಗಳನ್ನು ಕಂಡು ಹಿಡಿದು ಸೈ ಎನಿಸಿಕೊಂಡಿದ್ದರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಅಬ್ದುಲ್‌ಖಾದರ ನಡಕಟ್ಟಿನ ಅವರು ರೈತರಿಗೆ ನೆರವಾಗಬೇಕೆಂಬ ಆಸೆಯನ್ನು ಹೊಂದಿದ್ದರು.
ಅಂದಿನ ಪರಿಸ್ಥಿತಿ ಅವರನ್ನು ಸಮಾಜಮುಖಿಯಾಗಿ ಪರಿವರ್ತನೆಗೊಳ್ಳಲಿಲ್ಲ. ಹಠ ಬಿಡದ ಆ ಜೀವ ಅಂದಿನ ಸರಕಾರಕ್ಕೆ ತನ್ನ ಪರಿಸ್ಥಿತಿಯನ್ನು ತಿಳಿಸಿ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಬೆನ್ನತ್ತಿ ರೈತರಿಗೆ ಕೊಡಮಾಡುವ ಸಬ್ಸಿಡಿಯಿಂದ ರೈತರಿಗೆ ಯಂತ್ರೋಪಕರಣಗಳನ್ನು ಕೊಟ್ಟು ಅಣ್ಣಿಗೇರಿಯ ಕೀರ್ತಿಯನ್ನು ದೆಹಲಿಯವರೆಗೂ ಪಸರಿಸಿದ್ದಲ್ಲದೇ ದೇಶ ವಿದೇಶಗಳಲ್ಲೂ ನಡಕಟ್ಟಿನ ಕೂರಿಗೆ ತಲೆ ಎತ್ತುವ ಹಾಗೆ ಆಗಿದೆ.
ಒಟ್ಟು 24 ಕೃಷಿ ಉಪಕರಣಗಳು!
ನಡಕಟ್ಟಿನ ಕೂರಿಗೆ ಹುಣಿಸೆ ಹಣ್ಣಿನಿಂದ ಬೀಜ ಬೇರ್ಪಡಿಸುವ ಯಂತ್ರ, ಡೀಸೆಲ್ ಉಳಿತಾಯ ಮಾಡುವ ನಡಕಟ್ಟಿನ ಗಾಲಿ ಕುಂಠಿ, ಕುಡಾ ಹದಗೊಳಿಸುವ ಯಂತ್ರ, ಕಬ್ಬು ಬಿತ್ತುವ ಯಂತ್ರ, ಎಳನೀರು ಕಡಿದು ಚೆಲ್ಲಿದ ಗೊರಟುಗಳನ್ನು ಪುಡಿ ಮಾಡುವ ಯಂತ್ರ, ಎಡೆ ಹೊಡಿಯುವ, ಔಷಧಿ ಸಿಂಪಡನೆ ಮಾಡುವ ಯಂತ್ರ.
“ನನಗೆ ರೈತರ ಆಶೀರ್ವಾದ, ಭಗವಂತನ ಕೃಪೆ ಯಾವುದೂ ಕೂಡಾ ಸುಳ್ಳು ಆಗಲಿಲ್ಲ. ಅಣ್ಣಿಗೇರಿಯ ಹೆಸರು ದಿಲ್ಲಿವರೆಗೂ ಕೊಂಡೊಯ್ದು ದೇಶವೇ ತಿರುಗಿ ನೋಡುವ ಹಾಗೆ ಮಾಡಿದ ನನ್ನ ರೈತ ಸಂಕುಲಕ್ಕೆ ನನ್ನ ಸಾಷ್ಟಾಂಗ ನಮನಗಳು”.
ಅಬ್ದುಲ್‌ಖಾದರ ಇಮಾಮಸಾಬ ನಡಕಟ್ಟಿನ, ಪದ್ಮಶ್ರೀ ಪುರಸ್ಕೃತ
ಪ್ರಶಸ್ತಿ ಪುರಸ್ಕೃತರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿನಂದನೆ
ದೇಶದ ಅತ್ಯುನ್ನತ ನಾಗರಿಕ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಕೂರಿಗೆ ತಜ್ಞ ಅಬ್ದುಲ್ ಖಾದರ್ ನಡಕಟ್ಟಿನ ಅವರನ್ನು ಅಭಿನಂದಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನನ್ನದೇ ಮತಕ್ಷೇತ್ರದ ಕೃಷಿ ಸಂಶೋಧಕನಿಗೆ ಪ್ರಶಸ್ತಿ ಲಭಿಸಿರುವುದು ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]