The New Indian Express
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ, ಆನ್ ಲೈನ್ ಪ್ಲಾಟ್ ಮಾರಾಟ ಹಾಗೂ ಆಸ್ತಿ ನೋಂದಣಿಗೆ ಸಂಬಂಧಿಸಿದ ವಂಚನೆಗಳಿಗೆ ಸಂಬಂಧಿಸಿದಂತೆ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಮಧ್ಯವರ್ತಿಗಳ ವಿರುದ್ಧ 14 ಪ್ರಥಮ ಮಾಹಿತಿ ವರದಿಗಳನ್ನು ದಾಖಲಿಸಲಾಗಿದೆ.
ಜನವರಿ 20 ರಿಂದ 24 ರ ನಡುವೆ ಬಿಡಿಎಯ ವಿಶೇಷ ಕಾರ್ಯಪಡೆ ಮತ್ತು ವಿಜಿಲೆನ್ಸ್ ವಿಭಾಗವು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್‌ಗಳನ್ನು ದಾಖಲಿಸಿದೆ. ಅರ್ಕಾವತಿ ಲೇಔಟ್, ಅಂಜನಾಪುರ, ಬನಶಂಕರಿ, ಜೆಪಿ ನಗರ, ಹೊಸದಾಗಿ ರೂಪುಗೊಂಡ ನಾಡಪ್ರಭು ಕೆಂಪೇಗೌಡ ಲೇಔಟ್, ನಾಗರಭಾವಿ, ಎಚ್‌ಬಿಆರ್ ಲೇಔಟ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ನಿವೇಶನಗಳನ್ನು ಹರಾಜು ಹಾಕಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
ಆನ್ ಲೈನ್ ಬಿಡ್ಡಿಂಗ್ ಗಾಗಿ ಪೋರ್ಟಲ್ eproc.karnataka.gov.in ತಿರುಚುವುದಕ್ಕೆ ಸಾಧ್ಯವಾಗದ ರೀತಿಯಲ್ಲಿ ಸುರಕ್ಷಿತವಾಗಿದೆ ಎಂದು ಹೂಡಿಕೆದಾರರನ್ನು ಮನವೊಲಿಸಲಾಗಿತ್ತು. ಆದರೆ, ಬಿಡಿಎ ಸಿಬ್ಬಂದಿ ನಕಲಿ ಆಸ್ತಿ ಖರೀದಿದಾರರ ಜತೆ ಶಾಮೀಲಾಗಿ ಬ್ಯಾಂಕ್ ಚಲನ್ ಮೂಲಕ ನಕಲಿ ಹಣ ಪಾವತಿ ಮಾಡಿರುವುದು ನಂತರ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬಿಡಿಎ ಕಾರ್ನರ್ ಸೈಟ್ ಹರಾಜು ಹಗರಣ ಬೆಳಕಿಗೆ; ಕೋಟ್ಯಾಂತರ ರೂಪಾಯಿ ನಷ್ಟವಾಗಿರುವ ಸಾಧ್ಯತೆ!
ತದನಂತರ ಆ ವೆಬ್ ಸೈಟ್ ಸ್ಥಗಿತಗೊಂಡು, ನಕಲಿ ದಾಖಲೆ ಸೃಷ್ಟಿಸಿ, ನಕಲಿ ಖರೀದಿದಾರರಿಗೆ ಮಾರಾಟ ಮಾಡಲಾಗಿದೆ. ಈ ಪ್ರಮುಖ ಲೇಔಟ್ ಗಳಲ್ಲಿ ಪ್ಲಾಟ್ ಗಳ ಖರೀದಿಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ.
ಬಹುತೇಕ ಎಫ್‌ಐಆರ್‌ಗಳಲ್ಲಿ ಬಿಡಿಎ ಉದ್ಯೋಗಿಗಳಾದ ಕಮಲಮ್ಮ, ಮಂಗಳಾ, ವೆಂಕಟರಮಣಪ್ಪ, ಅನಿಲ್ ಕುಮಾರ್, ಸಂಜಯ್ ಕುಮಾರ್ ಮತ್ತು ವಿರೂಪಾಕ್ಷಪ್ಪ ಅವರ ಹೆಸರುಗಳು ಸಾಮಾನ್ಯವಾಗಿದೆ. ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
ಬಿಡಿಎ ಸಿಬ್ಬಂದಿ ಹಾಗೂ ಮಧ್ಯವರ್ತಿಗಳು ವಂಚನೆಯಲ್ಲಿ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದ ನಂತರ ಎಫ್ ಐಆರ್ ದಾಖಲಿಸಲಾಗಿದೆ ಎಂದು ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್. ವಿಶ್ವನಾಥ್ ಪಿಟಿಐಗೆ ತಿಳಿಸಿದ್ದಾರೆ.
Read more
[wpas_products keywords=”deal of the day”]