Karnataka news paper

ಯಕ್ಷಗಾನಕ್ಕೊಂದು ಮೊಬೈಲ್ ಆ್ಯಪ್‌: ಯಕ್ಷವಾಹಿನಿಯ ಕೊಡುಗೆ– ಏನೇನು ವಿಶೇಷತೆ?


ಯಕ್ಷಗಾನಕ್ಕೊಂದು ಮೊಬೈಲ್ ಆ್ಯಪ್‌. ಅಯ್ಯೋ! ಯಕ್ಷಗಾನಕ್ಕೂ ಮೊಬೈಲ್‌ ಆ್ಯಪ್‌ಗೂ ಏನು ಸಂಬಂಧ ಎಂದು ಭಾವಿಸಬಹುದು. ಹೌದು, ಈಗ ಈ ಆ್ಯಪ್‌ ಕರ್ನಾಟಕದ ಕಲೆಯಾದ ಯಕ್ಷಗಾನದ ಪ್ರಸಂಗಗಳನ್ನು ಸಹೃದಯರಿಗೆ ಒದಗಿಸುತ್ತಿದೆ.

ಹಾಗಾಗಿ ಇನ್ನು ಮುಂದೆ ಯಕ್ಷಗಾನಪ್ರೇಮಿಗಳು ಪ್ರಸಂಗಕ್ಕಾಗಿ ಅಲೆದಾಡಬೇಕಿಲ್ಲ. ಯಕ್ಷಗಾನ ಆಸಕ್ತರು, ಕವಿಗಳು, ಕಲಾವಿದರು ತಮ್ಮ ಮೊಬೈಲ್/ಕಂಪ್ಯೂಟರ್‌ನಲ್ಲಿ ತಮಗೆ ಬೇಕಾದ ಪ್ರಸಂಗಗಳನ್ನು ಆ್ಯಪ್‌ನ ಮೂಲಕವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಇಂತಹದೊಂದು ತಾಂತ್ರಿಕತೆಯು ಯಕ್ಷಗಾನದಂತಹ ಶಾಸ್ತ್ರೀಯ ಕಲೆಯ ಬೆಳವಣಿಗೆಯಲ್ಲಿ ಬಳಕೆಯಾಗುತ್ತಿರುವುದು ಶ್ಲಾಘನೀಯ. ಯಕ್ಷವಾಹಿನಿಯ ಸಂಸ್ಥೆಯು ಪ್ರಸಂಗ ಪ್ರತಿ ಸಂಗ್ರಹಕ್ಕೆ ಆ್ಯಪ್‌ವೊಂದನ್ನು ಅಭಿವೃದ್ಧಿ ಮಾಡಿದೆ.

ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಹವ್ಯಾಸಿ ಕಲಾವಿದರೂ ಆದ ಲಕ್ಷ್ಮೀನಾರಾಯಣ ಭಟ್ (ಲನಾ) ಅವರು ಈ ಆ್ಯಪನ್ನು ಅಭಿವೃದ್ಧಿಪಡಿಸಿದ್ದಾರೆ. ಈಗಾಗಲೇ 5000ಕ್ಕೂ ಹೆಚ್ಚಿನ ಬಳಕೆದಾರರು ಇದನ್ನು ಬಳಸುತ್ತಿದ್ದಾರೆ. ಪ್ರತಿನಿತ್ಯ 100ಕ್ಕೂ ಹೆಚ್ಚು ಪ್ರಸಂಗಗಳು ಇದರಿಂದ ಡೌನ್‌ಲೋಡ್‌ ಆಗುತ್ತಿದೆ. ಸದ್ಯ ಈ ಆ್ಯಪ್‌ನಲ್ಲಿ 1500 ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳು ಲಭ್ಯ.

ಬೆಂಗಳೂರಿನ ‘ಯಕ್ಷವಾಹಿನಿ ಸಂಸ್ಥೆ’ಯು ಯಕ್ಷಗಾನ ಡಿಜಿಟಲೀಕರಣದ ಭಾಗವಾಗಿ ‘ಪ್ರಸಂಗಪ್ರತಿ ಸಂಗ್ರಹ ಯೋಜನೆ’ಯೊಂದನ್ನು 2019ರಲ್ಲಿ ಕೈಗೊಂಡಿತು. ಸಾಂಘಿಕ ನೆಲೆಗಟ್ಟಿನಲ್ಲಿ ಈ ಯೋಜನೆಯು ನಡೆಯುತ್ತಿದ್ದು ಸ್ವಯಂಸೇವಕರ ಸಹಕಾರದೊಂದಿಗೆ ಪ್ರಸಂಗಪ್ರತಿಗಳನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತಿದೆ.

ಈಗಾಗಲೇ 1500ಕ್ಕೂ ಹೆಚ್ಚಿನ ಪ್ರತಿಗಳನ್ನು ಸಂಗ್ರಹಿಸಲಾಗಿದ್ದು, ಇನ್ನೂ ಹೆಚ್ಚಿನ ಪ್ರತಿಗಳನ್ನು ಸಂಗ್ರಹಕ್ಕೆ ಸೇರಿಸುವತ್ತ ತಂಡ ಕಾರ್ಯೋನ್ಮುಖವಾಗಿದೆ. ದುರ್ಲಭವಿರುವ, ಸದ್ಯ ಎಲ್ಲೋ ಕೆಲವೇ ಕೆಲವರ ಬಳಿಯಲ್ಲಿರುವ ಅಮೂಲ್ಯ ಪ್ರತಿಗಳನ್ನು ಯಕ್ಷಸಾಹಿತ್ಯಲೋಕದಲ್ಲಿ ಶಾಶ್ವತವಾಗಿರಿಸುವುದಲ್ಲದೇ, ಮುಂದಿನ ತಲೆಮಾರಿಗೆ ಯಕ್ಷಸಾಹಿತ್ಯವನ್ನು ದಾಟಿಸುವಲ್ಲಿ ಈ ಕಾರ್ಯ ಪ್ರಮುಖವಾದದ್ದು.

ನಶಿಸುತ್ತಿರುವ ಪ್ರಸಂಗಗಳನ್ನು ಸಂರಕ್ಷಿಸಲು ವಾರಾಂತ್ಯಗಳಲ್ಲಿ ಸ್ಕ್ಯಾನಿಂಗ್‌ ಕಮ್ಮಟಗಳನ್ನು ನಡೆಸಿ ಈ ಮೂಲಕ ಪ್ರತಿಗಳನ್ನು ಸೇರಿಸುವ ಕಾಯಕದಲ್ಲಿ ತೊಡಗಿದೆ.

l ಆಂಡ್ರಾಯ್ಡ್ ಬಳಕೆದಾರರು ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಬಹುದು.
Playstore:Prasanga Prathi Sangraha

l ಕಂಪ್ಯೂಟರ್/IOS/ವೆಬ್ ಬಳಕೆದಾರರು, ಪಿಡಬ್ಲ್ಯುಏ ಆವೃತ್ತಿಯನ್ನೂ ಉಪಯೋಗಿಸಬಹುದು
http://prasangaprathiapp.yakshavahini.com/



Read more from source

[wpas_products keywords=”deal of the day sale today kitchen”]