Online Desk
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಂ.ಬಿ ಪಾಟೀಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಂತೆ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದ್ದು ಕಾಂಗ್ರೆಸ್ ಚುನಾವಣಾ ಕಣಕ್ಕೆ ಭರ್ಜರಿ ಉತ್ಸಾಹದಲ್ಲಿ ಪೈಪೋಟಿಗೆ ಮುನ್ನುಗ್ಗುವಂತೆ ಕಂಡಿದೆ.
ಕಾಂಗ್ರೆಸ್ ಅಧ್ಯಕ್ಷರು ಎಂ.ಬಿ ಪಾಟೀಲ್ ಅವರನ್ನು ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಮಂಗಳವಾರ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಎಂ.ಬಿ ಪಾಟೀಲ್ (ಮಲ್ಲನಗೌಡ ಬಸನಗೌಡ ಪಾಟೀಲ) ಈ ಹಿಂದೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವಾರಗಿ ಕೆಲಸ ಮಾಡಿದ್ದರು. ಹೆಚ್.ಡಿ ಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ತಮ್ಮ 27ನೇ ವಯಸ್ಸಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಎಂ.ಬಿ. ಪಾಟೀಲ್ ಮುಂದೆ ಲೋಕಸಭೆ ಸದಸ್ಯರಾಗಿಯೂ ಆಯ್ಕೆ ಆಗಿದ್ದರು.
ಇದನ್ನೂ ಓದಿ: ನನ್ನನ್ನು ಸಿಎಂ ಎಂದು ಕೂಗಬೇಡಿ, ಸಂಚು ಶುರುವಾಗುತ್ತದೆ: ಪರಮೇಶ್ವರ್ ಕನಸು ಕಾಣಲು ಅಂಜುತ್ತಿದ್ದಾರೆ, ಇದಕ್ಕೆ ಕಾರಣ ಯಾರು?
ಇನ್ನೂ ಎಂಬಿ ಪಾಟೀಲ್ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿರುವ ಸಂಬಂಧ ಬಿಜೆಪಿ ಟ್ವೀಟ್ ಮಾಡಿದೆ, ನಿಮ್ಮ ಹೊಸ ಜವಾಬ್ದಾರಿ ಧರ್ಮ ವಿಭಜನೆಗೆ ಪ್ರೇರಣೆ ನೀಡದಿರಲಿ ಎಂದು ನಾವು ಆಶಿಸುತ್ತೇವೆ. ಎಂ.ಬಿ.ಪಾಟೀಲ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ವೀರಶೈವ – ಲಿಂಗಾಯಿತ ಧರ್ಮ ವಿಭಜನೆಗೆ ಕಾರಣೀಕರ್ತರಾಗಿದ್ದರು. ಆಗ ಎಂಬಿ ಪಾಟೀಲರು ಸಿದ್ದರಾಮಯ್ಯನವರ ಕೈಗೊಂಬೆಯಾಗಿದ್ದರು, ಈಗ ಸಮಯದ ಗೊಂಬೆಯಾಗದಿರಿ ಎಂದು ಬಿಜೆಪಿ ಸಲಹೆ ನೀಡಿದೆ.
ಎಂ.ಬಿ.ಪಾಟೀಲರಿಗೆ ಅಭಿನಂದನೆಗಳು. ನಿಮ್ಮ ಹೊಸ ಜವಾಬ್ದಾರಿ ಧರ್ಮ ವಿಭಜನೆಗೆ ಪ್ರೇರಣೆ ನೀಡದಿರಲಿ ಎಂದು ನಾವು ಆಶಿಸುತ್ತೇವೆ.
ಎಂ.ಬಿ.ಪಾಟೀಲ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ವೀರಶೈವ – ಲಿಂಗಾಯಿತ ಧರ್ಮ ವಿಭಜನೆಗೆ ಕಾರಣೀಕರ್ತರಾಗಿದ್ದರು.
ಆಗ @MBPatil ಅವರು ಸಿದ್ದರಾಮಯ್ಯನವರ ಕೈಗೊಂಬೆಯಾಗಿದ್ದರು, ಈಗ ಸಮಯದ ಗೊಂಬೆಯಾಗದಿರಿ. pic.twitter.com/RAQIAul5UQ
— BJP Karnataka (@BJP4Karnataka) January 25, 2022
Read more
[wpas_products keywords=”deal of the day”]