The New Indian Express
ಮುಂಬೈ: ಸತತ ಐದನೇ ದಿನ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಕುಸಿತ ಕಂಡುಬಂದ ಕಾರಣ ನಿನ್ನೆ ಸೋಮವಾರ ಷೇರುಮಾರುಕಟ್ಟೆಯ ಹೂಡಿಕೆದಾರರು ಸುಮಾರು 9.07 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ನಿನ್ನೆ ಸೋಮವಾರ ಸೆನ್ಸೆಕ್ಸ್ 1545.67 ಪಾಯಿಂಟ್ ಅಂದರೆ ಶೇಕಡಾ 2.6 ರಷ್ಟು ಕುಸಿದು 57491.51 ಪಾಯಿಂಟ್‌ಗಳಿಗೆ ತಲುಪಿದೆ, ನಿಫ್ಟಿ 468 ಪಾಯಿಂಟ್‌ಗಳನ್ನು ಕಳೆದುಕೊಂಡು 17149.10 ಕ್ಕೆ ತಲುಪಿದೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು 3,752 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು. ದೇಶೀಯ ಹೂಡಿಕೆದಾರರು ಕೇವಲ 7 ಕೋಟಿ ಷೇರುಗಳನ್ನು ಖರೀದಿಸಿದರು.
ಕೆಲವರು ಕಡಿಮೆ ಮಟ್ಟದಲ್ಲಿ ಷೇರುಗಳನ್ನು ಖರೀದಿ ಮಾಡಿದ್ದರಿಂದ ಸೆನ್ಸೆಕ್ಸ್ ದಿನದ ಕನಿಷ್ಠಕ್ಕಿಂತ 507 ಪಾಯಿಂಟ್‌ಗಳಲ್ಲಿ ವಹಿವಾಟು ಕೊನೆಗೊಳಿಸಿತು. ನಿಫ್ಟಿ ಕನಿಷ್ಠಕ್ಕಿಂತ 151 ಪಾಯಿಂಟ್‌ಗಳಲ್ಲಿ ಕೊನೆಗೊಂಡಿದೆ. ಸೆನ್ಸೆಕ್ಸ್‌ನ ಎಲ್ಲಾ 30 ಕಂಪೆನಿಗಳು ನಿನ್ನೆ ವಹಿವಾಟು ಅಂತ್ಯಕ್ಕೆ ಕುಸಿತದಲ್ಲಿ ಗೆಂಪು ಗೆರೆಯಲ್ಲಿಯೇ ವಹಿವಾಟು ಕೊನೆಗೊಳಿಸಿದವು. ನಿಫ್ಟಿ 50 ಷೇರುಗಳಲ್ಲಿ ಕೇವಲ ಎರಡು ಮಾತ್ರ ಹಸಿರು ಬಣ್ಣದಲ್ಲಿ ಮುಕ್ತಾಯಗೊಂಡಿತು.
ವಿದೇಶಿ ನೇರ ಹೂಡಿಕೆಗಳು(FII) ಪ್ರಸಕ್ತ ವರ್ಷ ಜನವರಿ 1ರಿಂದ 12,543 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಇದುವರೆಗೆ ಮಾರಾಟ ಮಾಡಿವೆ. ಇದುವರೆಗಿನ ಆರ್ಥಿಕ ವರ್ಷದಲ್ಲಿ 42,534 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಜಾಗತಿಕ ಹಣದುಬ್ಬರದ ಏರಿಕೆಯ ಆತಂಕ ಮಧ್ಯೆ ವಿದೇಶಿ ಬಂಡವಾಳ ಹೂಡಿಕೆದಾರರಿಂದ ಮತ್ತು ದರ ಏರಿಕೆಯ ಭೀತಿಯ ನಡುವೆ ಕಳೆದ ಜನವರಿ 17ರ ನಂತರ ನಿಫ್ಟಿ 1200ಕ್ಕಿಂತ ಹೆಚ್ಚು ಹಿಂಜರಿಕೆ ಕಂಡಿದೆ.
ಕಳೆದ 5 ದಿನಗಳಿಂದ ಸತತವಾಗಿ ಹೂಡಿಕೆದಾರರು 19.5 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ. ಉಕ್ರೇನ್‌ನಲ್ಲಿ ರಷ್ಯಾ ಮತ್ತು ಯುಎಸ್ ನೇತೃತ್ವದ ನ್ಯಾಟೋ ನಡುವೆ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಸಂದರ್ಭದಲ್ಲಿ ಜಾಗತಿಕ ಮಾರುಕಟ್ಟೆ ಸ್ಥಿರವಾಗಿ ನಿಲ್ಲದೆ ಚಂಚಲ ಸ್ಥಿತಿ ಕಾಣುವ ಸಾಧ್ಯತೆಯಿದೆ.
Read more…
[wpas_products keywords=”deal of the day”]