Karnataka news paper

ಮಂಗಳೂರು: ಜಾತ್ರೆಯಲ್ಲಿ ಹಿಂದೂಯೇತರರು ವ್ಯಾಪಾರ ಮಾಡದಂತೆ ಹಾಕಲಾದ ಫೋಸ್ಟರ್ ತೆರವು


The New Indian Express

ಮಂಗಳೂರು: ನಾಳೆಯಿಂದ ಆರಂಭವಾಗಿರುವ ಉಳ್ಳಾಲದ ದೇವಾಲಯವೊಂದರ ಎರಡು ದಿನಗಳ ಜಾತ್ರೆಯಿಂದ ಹಿಂದೂಯೇತರ ವ್ಯಾಪಾರಿಗಳು ದೂರು ಇರುವಂತೆ ಪೋಸ್ಟರ್ ವೊಂದನ್ನು ವಿಶ್ವ ಹಿಂದು ಪರಿಷತ್ ಬಜರಂಗದಳ ಉಳ್ಳಾಲ ಬೈಲ್ ನ ಮೈದಾನವೊಂದರಲ್ಲಿ ಹಾಕಿತ್ತು.

ಈ ನೆಲದ ದೈವ ದೇವರುಗಳನ್ನು ಪೂಜಿಸುವವರಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು ಎಂದು ಅದರಲ್ಲಿ ಬರೆಯಲಾಗಿತ್ತು. ಆದಾಗ್ಯೂ, ಈ ವಿವಾದಾತ್ಮಕ ಫೋಸ್ಟರ್ ಸಂಗತಿ ತಿಳಿದುಬಂದ ಕೂಡಲೇ ಸ್ಥಳೀಯ ಪೊಲೀಸರು ಫೋಸ್ಟರ್ ತೆರವುಗೊಳಿಸಿದ್ದಾರೆ. ವಾರ್ಷಿಕ ಜಾತ್ರೆ ನಾಳೆಯಿಂದ ಆರಂಭವಾಗಲಿದೆ. 

ಮಂಗಳವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಯು.ಟಿ. ಖಾದರ್, ಈ ಫೋಸ್ಟರ್ ಹಿಂದಿರುವ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವಿವಾದಾತ್ಮಕ ಪೋಸ್ಟರ್ ನಿಂದ ಅಂತರ ಕಾಪಾಡಿಕೊಳ್ಳುವಂತೆ ದೇವಾಲಯ ಸಮಿತಿಯೊಂದಿಗೆ ಮಾತುಕತೆ ನಡೆಸಿರುವುದಾಗಿ ಅವರು ಹೇಳಿದರು.

ಪ್ರತಿವರ್ಷ ಉಳ್ಳಾಲ ಜಾತ್ರೆ ಸಂದರ್ಭದಲ್ಲಿ ಎಲ್ಲಾ ಸಮುದಾಯದ ಜನರು ಅಂಗಡಿಗಳನ್ನು ಹಾಕುತ್ತಾರೆ. ಇದೀಗ ಕೆಲ ದುಷ್ಕರ್ಮಿಗಳು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದರು. 



Read more

[wpas_products keywords=”deal of the day”]