Karnataka news paper

ಪಾಕ್ ನಲ್ಲಿ ಮಹತ್ವದ ಬೆಳವಣಿಗೆ: ಪಕ್ಷ, ಸೇನೆಯ ಬೆಂಬಲ ಕಳೆದುಕೊಂಡ ಪ್ರಧಾನಿ ಇಮ್ರಾನ್ ಖಾನ್!


The New Indian Express

ಇಸ್ಲಾಮಾಬಾದ್: ಪಾಕಿಸ್ತಾನದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಸ್ವ ಪಕ್ಷೀಯರ ಹಾಗೂ ಸೇನೆಯ ಬೆಂಬಲವನ್ನು ಕಳೆದುಕೊಂಡಿದ್ದಾರೆ. 

ಇದನ್ನು ಪಾಕಿಸ್ತಾನದಲ್ಲಿ ಬದಲಾವಣೆಯ ಗಾಳಿ ಎಂದೇ ವಿಶ್ಲೇಷಿಸಲಾಗುತ್ತಿದೆ. ಪಾಲಿಸಿ ರಿಸರ್ಚ್ ಗ್ರೂಪ್ (ಪಿಒಆರ್ ಇಜಿ) ಈ ವರದಿ ಪ್ರಕಟಿಸಿದೆ. ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್ ಖೈಬರ್ ಪಖ್ತುಂಕ್ವಾ (ಕೆಪಿ) ಯನ್ನು ಕೇಂದ್ರ ನಿರ್ಲಕ್ಷಿಸುತ್ತಿರುವುದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿರುವುದು ಹಾಗೂ ಆಂತರಿಕ ಭದ್ರತೆಯನ್ನು ನಿರ್ವಹಿಸುವ ವಿಷಯದಲ್ಲಿ ಇಮ್ರಾನ್ ಖಾನ್ ಅವರ ವಿರುದ್ಧ ಸೇನೆ ಅಸಮಾಧಾನ ಹೊಂದಿರುವುದು ಪಾಕ್ ಪ್ರಧಾನಿಗೆ ಆತಂಕಕಾರಿಯಾಗಿ ಪರಿಣಮಿಸಿದೆ.

ಒಟ್ಟಾರೆ ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಅಪಾಯವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಅಫ್ಘಾನ್‍ನಲ್ಲಿ ಪ್ರತಿಭಟನೆ: ಪಾಕಿಸ್ತಾನದ ಅಫ್ಘನ್ ಪ್ರವಾಸ ರದ್ದು; ಸುಳ್ಳು ಹೇಳಿ ಮುಖಭಂಗಕ್ಕೀಡಾದ ಇಮ್ರಾನ್ ಸರ್ಕಾರ

ಲಾಹೋರ್ ಪತ್ರಿಕೆ ದಿ ನೇಷನ್ ನ ಪತ್ರಕರ್ತ ಮೈತೀನ್ ಹೈದರ್ ವಿಶ್ಲೇಷಣೆಯ ಪ್ರಕಾರ ಪರ್ವೇಜ್ ಖಟ್ಟಕ್ ಸಂಸತ್ ನ ಲೋಕಸಭೆಯಲ್ಲಿ 80 ಕ್ಕೂ ಹೆಚ್ಚು ಸದಸ್ಯರ ಬೆಂಬಲವನ್ನು ಹೊಂದಿದ್ದಾರೆ. ಪಾಕಿಸ್ತಾನದ ಹೊಸ ರಾಷ್ಟ್ರೀಯ ಭದ್ರತಾ ನೀತಿಯ ಉದ್ಘಾಟನೆಗೆ ಗೈರು ಹಾಜರಿಯಾದ ಬೆನ್ನಲ್ಲೇ, ಜ.13 ರಂದು ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಪರ್ವೇಜ್ ಖಟ್ಟಕ್ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಖೈಬರ್ ಪಖ್ತುಂಕ್ವಾ ಪ್ರಾಂತ್ಯವನ್ನು ನಿರ್ಲಕ್ಷ್ಯ ಮಾಡಿದರೆ, ಕೆಪಿ ಪಿಟಿಐ ಗೆ ಮತ ಚಲಾವಣೆ ಮಾಡುವುದಿಲ್ಲ ಎಂದು ಪರ್ವೇಜ್ ಖಟ್ಟಕ್ ಪಾಕ್ ಪ್ರಧಾನಿಗೆ ಎಚ್ಚರಿಕೆ ನೀಡಿದ್ದಾರೆ.



Read more

[wpas_products keywords=”deal of the day”]