ಹೈಲೈಟ್ಸ್:
- ಕಾಂಗ್ರೆಸ್ ಒಂದು ಮುಳುಗುವ ಪಕ್ಷ
- ಈ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾರು ಎನ್ನುವುದೇ ಗೊತ್ತಿಲ್ಲ
- ಯುಪಿ, ಪಂಜಾಬ್, ಗೋವಾದಲ್ಲಿ ಯಾರು ಅಧ್ಯಕ್ಷ ಅಂತ ಗೊತ್ತಿಲ್ಲ: ಸಚಿವ ಅಶ್ವತ್ಥ ನಾರಾಯಣ
ಕಾಂಗ್ರೆಸ್ ಪಕ್ಷದವರೇ ಇರುತ್ತಾರೋ ಇಲ್ಲವೋ ನೋಡಬೇಕು. ಆ ಪಕ್ಷಕ್ಕೆ ಸಿದ್ದಾಂತವೇ ಇಲ್ಲ. ಅವರಲ್ಲಿ ಒಗ್ಗಟ್ಟಿಲ್ಲ. ಅವರವರೇ ಕಾಲೆಳೆದುಕೊಳ್ಳುತ್ತಿದ್ದಾರೆ ಎಂದು ಸಚಿವ ಅಶ್ವತ್ಥ ನಾರಾಯಣ ವ್ಯಂಗ್ಯವಾಡಿದರು.
ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರು ಅಭಿವೃದ್ಧಿ ಇಲಾಖೆ ನಿರ್ವಹಣೆ ಮಾಡುತ್ತಿದ್ದಾರೆ. ಈ ಹಿಂದೆ ಸಿಎಂ ಆಗಿದ್ದ ಬಿಎಸ್‌ವೈ ಕೂಡ ಬೆಂಗಳೂರು ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಖಾತೆ ನಿರ್ವಹಣೆ ಮಾಡಿದ್ದರು. ಈಗ ಬೊಮ್ಮಾಯಿ ಅವರು ಅದನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದ ಅಶ್ವತ್ಥ ನಾರಾಯಣ್, ಯಾರು ಯಾವ ಜಿಲ್ಲೆಯಿಂದ ಆಯ್ಕೆಯಾಗಿರುತ್ತೇವೋ ಅಲ್ಲಿ ಉಸ್ತುವಾರಿ ಆಗಬಾರದು ಎನ್ನುವ ನೀತಿಯನ್ನು ಹೈಕಮಾಂಡ್ ತೆಗೆದುಕೊಂಡಿದೆ. ಅದೇ ದಾರಿಯಲ್ಲಿ ಕರ್ನಾಟಕದಲ್ಲೂ ಈ ಪದ್ದತಿ ಜಾರಿಗೊಳಿಸಲಾಗಿದೆ. ಹಾಗಾಗಿ ಬೆಂಗಳೂರಿನಿಂದ ಆಯ್ಕೆಯಾದವರಿಗೆ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಬಿಎಂಪಿಗೆ ಚುನಾವಣೆ ಆಗಬೇಕು ಎನ್ನುವುದು ಸರ್ಕಾರದ ನಿಲುವಾಗಿದೆ, ಅದಕ್ಕೆ ನಾವು ಬದ್ದವಾಗಿದ್ದೇವೆ. ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ಬೇಕು ಎನ್ನುವುದು ಜನರ ಬೇಡಿಕೆ. ಅದನ್ನು ಪೂರೈಸಿ ಅದರ ಪ್ರಕಾರ ಚುನಾವಣೆ ನಡೆಸಲಿದ್ದೇವೆ. ಅದಕ್ಕಾಗಿ 198 ರಿಂದ 243 ವಾರ್ಡ್ ಮಾಡುವುದು ಸರ್ಕಾರದ ಸ್ಪಷ್ಟ ನಿಲುವು. ಅದಕ್ಕೆ ನಾವು ಬದ್ದರಿದ್ದೇವೆ. ಆದರೆ ಪಾಲಿಕೆ ವ್ಯಾಪ್ತಿಯ ವಿಸ್ತರಣೆ ಯಾವುದೂ ಇಲ್ಲ. ಕೇವಲ ವಾರ್ಡ್ ಸಂಖ್ಯೆ ಮಾತ್ರ ಹೆಚ್ಚಳವಾಗಲಿದೆ ಎಂದರು.
ಬೆಂಗಳೂರು ಹಲವಾರು ಸಮಸ್ಯೆ ಎದುರಿಸುತ್ತಿದೆ. ರಸ್ತೆಗಳ ಅಭಿವೃದ್ಧಿ, ಕೆರೆ, ಪಾರ್ಕ್ ಅಭಿವೃದ್ಧಿ, ಉಪ ನಗರ ರೈಲು, ಮೆಟ್ರೋ ಎಲ್ಲಾ ಅಭಿವೃದ್ಧಿ ಆಗಬೇಕಿದೆ. ಬಹು ನಿರೀಕ್ಷೆಯ ಅಭಿವೃದ್ಧಿ ಆಗಬೇಕಿದೆ. ಎಲ್ಲವನ್ನು ಕೈಗೆತ್ತಿಕೊಂಡು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಭರವಸೆ ನೀಡಿದರು.
ಇನ್ನು ಬಿಜೆಪಿ ಪಕ್ಷ ಸಂಘಟನೆ ಸಕ್ರಿಯವಾಗಿದೆ. ಶಕ್ತಿಶಾಲಿಯಾಗಿದೆ, ಅವಿರತ ಕೆಲಸ ಮಾಡಲಿದೆ. ಶತ ಶತಮಾನದಿಂದ ಕೆಲಸ ಆಗಿರಲಿಲ್ಲ. ಅಂತಹ ಕೆಲಸ ಈಗ ಮಾಡಲಾಗಿದೆ. ಜನಪರ ಕೆಲಸ ಮಾಡಲಾಗಿದೆ. ಕನಸು ಮನಸಿನಲ್ಲೂ ಆಗದ ಕೆಲಸ ಕಾರ್ಯ ಮಾಡಲಾಗಿದೆ ಎಂದು ಬಿಜೆಪಿ ಸಾಧನೆಯನ್ನು ಸಚಿವರು ಸಮರ್ಥಿಸಿಕೊಂಡರು. ಉತ್ತರ ಪ್ರದೇಶದಲ್ಲಿ ಹೊಸಬರಿಗೆ ಅವಕಾಶ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥ ನಾರಾಯಣ್, ಹೊಸಬರಿಗೆ ಅವಕಾಶ ನೀಡುವುದು ಸಹಜ ನಿಯಮ. ಯಾರು ಇದನ್ನು ಮಾಡಿದರೂ ಆ ಪಕ್ಷಕ್ಕೆ ಭವಿಷ್ಯವಿರಲಿದೆ. ಹಳೆ ಬೇರು ಹೊಸ ಚಿಗುರು ಇರಬೇಕು. ಯುಪಿಯಲ್ಲಿ ನಾವು ಅಧಿಕಾರಕ್ಕೆ ಮರಳಲಿದ್ದೇವೆ ಎಂದರು.
Read more
[wpas_products keywords=”deal of the day sale today offer all”]