Karnataka news paper

ಕೋವಿಡ್: ದೃಢ ಪ್ರಮಾಣ 6 ಜಿಲ್ಲೆಗಳಲ್ಲಿ ಅಧಿಕ


ಬೆಂಗಳೂರು: ಕಳೆದೊಂದು ವಾರದಿಂದ ಬೆಂಗಳೂರಿನ ಜೊತೆಗೆ ಅನ್ಯ ಜಿಲ್ಲೆಗಳಲ್ಲಿಯೂ ಅಧಿಕ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಆರು ಜಿಲ್ಲೆಗಳಲ್ಲಿ ಸೋಂಕು ದೃಢ ಪ್ರಮಾಣ ರಾಜ್ಯದ ಸರಾಸರಿಗಿಂತ ಹೆಚ್ಚಿದೆ.

ರಾಜ್ಯದಲ್ಲಿ ವರದಿಯಾದ 7 ದಿನಗಳ ಪ್ರಕರಣಗಳನ್ನು ಆಧರಿಸಿ ಕೋವಿಡ್ ವಾರ್‌ ರೂಮ್ ವಿಶ್ಲೇಷಣೆ ಮಾಡಿದೆ. ಈ ಅವಧಿಯಲ್ಲಿ ರಾಜ್ಯದ ದೈನಂದಿನ ಸರಾಸರಿ ಶೇ 22.65 ರಷ್ಟಿದೆ. ಮೈಸೂರಿನಲ್ಲಿ ಗರಿಷ್ಠ (ಶೇ 37.92) ಪ್ರಮಾಣದಲ್ಲಿ ಸೋಂಕು ದೃಢಪಟ್ಟಿದ್ದರೆ, ಬಾಗಲಕೋಟೆಯಲ್ಲಿ (ಶೇ 5.31) ಕನಿಷ್ಠ ಪ್ರಮಾಣದಲ್ಲಿ ಸೋಂಕು ಖಚಿತ‍ಪಟ್ಟಿದೆ.

ರಾಜ್ಯದಲ್ಲಿ ಜನವರಿ ಮೊದಲ ವಾರದಿಂದ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದುಕೊಂಡಿದೆ. 12 ಜಿಲ್ಲೆಗಳಲ್ಲಿ ದೃಢ ಪ್ರಮಾಣ ಶೇ 20ಕ್ಕಿಂತ ಅಧಿಕವಿದೆ. ತುಮಕೂರು (ಶೇ 33.57), ಮಂಡ್ಯ (ಶೇ 31.53), ಹಾಸನ (ಶೇ 30.36) ಬೆಂಗಳೂರು ನಗರ (ಶೇ 25.81) ಹಾಗೂ ಬಳ್ಳಾರಿಯಲ್ಲಿ (ಶೇ 23.42) ಹೆಚ್ಚಿನ ಪ್ರಮಾಣದಲ್ಲಿ ಸೋಂಕು ದೃಢಪಡುತ್ತಿದೆ. 

ಹಾವೇರಿ (ಶೇ 6.58), ಯಾದಗಿರಿ (ಶೇ 6.65), ವಿಜಯಪುರ (ಶೇ 9.27) ಹಾಗೂ ದಕ್ಷಿಣ ಕನ್ನಡ (ಶೇ 9.76) ಜಿಲ್ಲೆಯಲ್ಲಿ ದೃಢ ಪ್ರಮಾಣ ಕಡಿಮೆಯಿದೆ. 

ರಾಜ್ಯದಲ್ಲಿ ಈ ತಿಂಗಳ ಮೊದಲ ವಾರ ಹೊಸ ಪ್ರಕರಣಗಳ ಸಂಖ್ಯೆ 5 ಸಾವಿರದ ಗಡಿಯ ಆಸುಪಾಸಿನಲ್ಲಿತ್ತು. ಸೋಂಕು ದೃಢ ಪ್ರಮಾಣ ಶೇ 5ರೊಳಗಿತ್ತು. ಈಗ ನಿತ್ಯದ ಪ್ರಕರಣಗಳ ಸಂಖ್ಯೆ 50 ಸಾವಿರದವರೆಗೂ ಏರಿಕೆ ಕಂಡಿದೆ. ದೃಢ ಪ್ರಮಾಣವೂ ಶೇ 30ರ ಗಡಿ ದಾಟಿದೆ.



Read more from source

[wpas_products keywords=”deal of the day sale today kitchen”]