Karnataka news paper

ಗಣರಾಜ್ಯೋತ್ಸವ ಹಾಗೂ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕತಾರ್‌ನಲ್ಲಿ ರಕ್ತದಾನ ಶಿಬಿರ


ಕತಾರ್: 75 ವರ್ಷಗಳ ಭಾರತದ ಸ್ವಾತಂತ್ರ್ಯ ದಿನಾಚರಣೆ ಹಾಗೂ 73 ನೇ ಭಾರತ ಗಣರಾಜ್ಯೋತ್ಸವವನ್ನು ಆಚರಿಸಲು, ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರವು ಹಮದ್ ವೈದ್ಯಕೀಯ ನಿಗಮ, ರಕ್ತದಾನ ಕೇಂದ್ರದ ತಂಡಗಳ ಬೆಂಬಲದೊಂದಿಗೆ ಐಸಿಸಿ ರಕ್ತದಾನ ಶಿಬಿರ ಏರ್ಪಡಿಸಿತ್ತು.

qatar

ಅಶೋಕ ಸಭಾಂಗಣದಲ್ಲಿ ಜನವರಿ 21 ರ ಶುಕ್ರವಾರ ಬೆಳಿಗ್ಗೆ 8.00 ರಿಂದ ಮಧ್ಯಾಹ್ನ 2 ರವರೆಗೆ spot registrations ಸೇರಿದಂತೆ, ಸಂಪೂರ್ಣ ಶಿಬಿರವನ್ನು ನೋಂದಣಿ ಹಂತದಿಂದ ಆರೋಗ್ಯ ತಪಾಸಣೆ ಕ್ಲಿಯರೆನ್ಸ್, ರಕ್ತ ತೆಗೆಯುವುದು, ಪದಕದೊಂದಿಗೆ ಪ್ರಶಂಸಾ ಪತ್ರ ನೀಡುವವರೆಗೆ ತಡೆ ರಹಿತ ಪ್ರಕ್ರಿಯೆಯೊಂದಿಗೆ ಯಶಸ್ವಿಯಾಗಿ ನಿರ್ವಹಿಸಲಾಯಿತು.

ಎಲ್ಲಾ ರಕ್ತದಾನಿಗಳು ವಿಶೇಷ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ರಾಯಭಾರಿಗಳು ಮತ್ತು ಗಣ್ಯರು ನೀಡಿದ ಪದಕವನ್ನು ಸಭಾಂಗಣದಲ್ಲಿ ಸ್ವೀಕರಿಸಿದರು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

qatar

ದಿನದ ಮುಖ್ಯ ಅತಿಥಿಗಳಾದ ಮಾನ್ಯ ಡಾ. ದೀಪಕ್ ಮಿತ್ತಲ್, ಭಾರತದ ರಾಯಭಾರಿ, ಜೊತೆಗೆ ICC ಯ 1 ನೇ ಕಾರ್ಯದರ್ಶಿ ಮತ್ತು ಸಮನ್ವಯ ಕಚೇರಿ ಕ್ಸೇವಿಯರ್ ಧನರಾಜ್, ISC ಅಧ್ಯಕ್ಷ ಡಾ. ಮೋಹನ್ ಥಾಮಸ್, ICBF ಅಧ್ಯಕ್ಷ ಶ್ರೀ ಜಿಯಾದ್ ಉಸ್ಮಾನ್, IBPC ಅಧ್ಯಕ್ಷ ಶ್ರೀ ಜಾಫರ್ ಸಾದಿಕ್, ದೋಹಾ ಬ್ಯಾಂಕ್ CEO ಡಾ. ಆರ್. ಸೀತಾರಾಮನ್ ಮತ್ತು ಹಲವಾರು ಸಮುದಾಯದ ಮುಖಂಡರು, ಗಣ್ಯರು ಶಿಬಿರದಲ್ಲಿ ಪಾಲ್ಗೊಂಡರು.

ಭಾರತೀಯ ಸಾಂಸ್ಕ್ರತಿಕ ಕೇಂದ್ರ ಕತಾರ್‌: ನೂತನ ನಿರ್ವಹಣಾ ಸಮಿತಿಯ ಕಾರ್ಯಾರಂಭ
ದೀಪಕ್ ಮಿತ್ತಲ್, ಐಸಿಸಿ ತಂಡ, HMC ಸಿಬ್ಬಂದಿ ಮತ್ತು ಆಡಳಿತ ಮಂಡಳಿ, ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಭಾರತೀಯ ಸಮುದಾಯಕ್ಕೆ ಧನ್ಯವಾದ ಅರ್ಪಿಸಿದರು.

“ಕೋವಿಡ್ ಮುಕ್ತ ವಿಶ್ವಕ್ಕಾಗಿ” ಪ್ರಾರ್ಥನಾ ಸಭೆ ಮತ್ತು ದುಬೈ ಸರ್ವ ಧರ್ಮ ರಂಜಾನ್ ಸ್ನೇಹಮಿಲನ ಏಪ್ರಿಲ್ 30ಕ್ಕೆ
ರಕ್ತದಾನ ಶಿಬಿರವನ್ನು ಐಸಿಸಿ ನಿರ್ವಹಣಾ ಸಮಿತಿಯು ಪಿ. ಎನ್. ಬಾಬು ರಾಜನ್, ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ನೇತೃತ್ವದಲ್ಲಿ ಪರಿಕಲ್ಪನೆ ಮತ್ತು ಉತ್ತಮವಾಗಿ ನಿರ್ವಹಿಸಲಾಯಿತು.

ಉತ್ತರ ಕರ್ನಾಟಕ ಬಳಗ ಕತಾರ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ!



Read more

[wpas_products keywords=”deal of the day sale today offer all”]