Karnataka news paper

‘ಚೀನಾದ ಮಿಲಿಟರಿ ಸಾಹಸವು ಆತ್ಮಹತ್ಯೆಗೆ ಸಮ’: ಶಿಂಜೊ ಅಬೆ


Prajavani

ಟೋಕಿಯೊ, ಜಪಾನ್‌ (ರಾಯಿಟರ್ಸ್‌): ಚೀನಾ ತನ್ನ ನೆರೆಯ ರಾಷ್ಟ್ರಗಳನ್ನು ‍ಪ್ರಚೋದಿಸಬಾರದು ಮತ್ತು ತನ್ನ ಭೌಗೋಳಿಕ ವ್ಯಾಪ್ತಿಯ ವಿಸ್ತರಣೆಯನ್ನು ಬಯಸಬಾರದು. ಈ ದಿಸೆಯಲ್ಲಿ ಆ ದೇಶದ ಮಿಲಿಟರಿ ಕೈಗೊಳ್ಳುವ ಯಾವುದೇ ಸಾಹಸವು ಆತ್ಮಹತ್ಯೆಗೆ ಸಮ ಆಗಬಹುದು ಎಂದು ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಮಂಗಳವಾರ ಹೇಳಿದ್ದಾರೆ. 

ಕಳೆದ ವರ್ಷ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿರುವ ಶಿಂಜೊ ಅಬೆ ಅವರು ಈಗಲೂ ಆಡಳಿತಾರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಪ್ರಭಾವಿ ನಾಯಕರಾಗಿದ್ದಾರೆ.  ವಿಡಿಯೊ ಸಂದೇಶವೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

‘ಚೀನಾ ದೇಶವು ಗಡಿಯಲ್ಲಿ ಭೂಭಾಗ ವಿಸ್ತರಣೆ ಕೈಗೊಳ್ಳುವುದನ್ನು ಹಾಗೂ ತನ್ನ ನೆರೆಹೊರೆಯ ರಾಷ್ಟ್ರಗಳನ್ನು ಪ್ರಚೋದಿಸಲು ಮಿಲಿಟರಿ ಬಳಸುವುದನ್ನು ನಾವು ತಡೆಯಬೇಕು. ಇಲ್ಲದಿದ್ದರೆ ಅದರಿಂದ ಚೀನಾದ ಸ್ವಂತ ಹಿತಾಸಕ್ತಿಗಳಿಗೇ ಹಾನಿಯುಂಟಾಗುತ್ತದೆ’ ಎಂದು ಅವರು ಹೇಳಿದರು. 

ದಕ್ಷಿಣ ಚೀನಾ ಸಮುದ್ರದ ಹಲವು ಭಾಗ ತನಗೆ ಸೇರಿದ್ದು ಎಂದು ಚೀನಾ ಹೇಳಿಕೊಳ್ಳುತ್ತಿದೆ.



Read more from source