ಹೈಲೈಟ್ಸ್:
- 5 ಪ್ರಮುಖ ಉದ್ಯಮ ಗುಂಪುಗಳನ್ನು ರಚಿಸಿರುವ ಯೂನಿಲಿವರ್
- ಕಾರ್ಯತಂತ್ರ, ಉನ್ನತಿ ಹಾಗೂ ಲಾಭದತ್ತ ಮುನ್ನಡೆಯಲು ಮಾರ್ಗಸೂಚಿ
- ಯೂನಿಲಿವರ್‌ನ ಈ ಬದಲಾವಣೆಯು ಜಾಗತಿಕವಾಗಿ ಅನ್ವಯ ಆಗಲಿದೆ
ಜನವರಿ 25 ಮಂಗಳವಾರದಂದು ಈ ಸಂಬಂಧ ಸಂಸ್ಥೆಯು ಸೂಚನೆ ನೀಡಿದ್ದು, ಹಿರಿಯ ಹಾಗೂ ಕಿರಿಯ ನಿರ್ವಹಣಾ ವಿಭಾಗದ ನೌಕರರ ಹುದ್ದೆ ಮೇಲೆ ಪರಿಣಾಮ ಬೀರಲಿದೆ.
ಸಂಸ್ಥೆಯ ಹೊಸ ನೀತಿಯ ಪ್ರಕಾರ, ಶೇ. 15ರಷ್ಟು ಹಿರಿಯ ಹುದ್ದೆಯಲ್ಲಿ ಇರುವ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ. ಇನ್ನು ಕಿರಿಯ ಹುದ್ದೆಗಳಲ್ಲಿ ಇರುವ ಶೇ. 5ರಷ್ಟು ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ. ಭಾರತ ಮಾತ್ರವಲ್ಲ ಜಾಗತಿಕವಾಗಿ ಸಂಸ್ಥೆಯು 1,500 ನೌಕರರನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ ಎಂದು ಯೂನಿಲಿವರ್ ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಯೂನಿಲಿವರ್ ಸಂಸ್ಥೆಯ ಹೊಸ ಸಾಂಸ್ಥಿಕ ಪುನಾರಚನೆಯಲ್ಲಿ 5 ಪ್ರಮುಖ ಗುಂಪುಗಳನ್ನು ರಚನೆ ಮಾಡಲಾಗಿದೆ. ಬ್ಯೂಟಿ ಹಾಗೂ ವೆಲ್ ಬೀಯಿಂಗ್, ಪರ್ಸನಲ್ ಕೇರ್, ಹೋಂ ಕೇರ್, ನ್ಯೂಟ್ರಿಷನ್ ಹಾಗೂ ಐಸ್‌ಕ್ರೀಂ ವಿಭಾಗಗಳ ಉತ್ಪನ್ನಗಳ ಮಾರಾಟ ಸಂಬಂಧ ಗುಂಪುಗಳನ್ನು ರಚನೆ ಮಾಡಲಾಗಿದೆ.
ಪ್ರತಿಯೊಂದು ಉದ್ಯಮ ಗುಂಪು ಕೂಡಾ ತನ್ನ ವಿಭಾಗದ ಕಾರ್ಯತಂತ್ರ, ಉನ್ನತಿ ಹಾಗೂ ಲಾಭದತ್ತ ಮುನ್ನಡೆಯಲು ತಾನೇ ಮಾರ್ಗಸೂಚಿ ರಚಿಸಿಕೊಂಡು ಮುನ್ನಡೆಯಲಿದೆ ಎಂದು ಸಂಸ್ಥೆ ವಿವರಿಸಿದೆ. ಯೂನಿಲಿವರ್‌ನ ಈ ಬದಲಾವಣೆಯು ಜಾಗತಿಕವಾಗಿ ಅನ್ವಯ ಆಗಲಿದೆ.
ನಾಯಕತ್ವ ಬದಲಾವಣೆ ನಿಟ್ಟಿನಲ್ಲೂ ಯೂನಿಲಿವರ್ ಹಲವು ಹೊಸ ಮುಖಗಳನ್ನು ಪರಿಚಯಿಸಿದೆ. ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆಯ ಮಾಜಿ ಸಿಇಒ ನಿತಿನ್ ಪರಾಂಜಪೆ ಅವರನ್ನು ಮರುನೇಮಕ ಮಾಡಲಾಗಿದೆ.
ಪರಾಂಜಪೆ ಅವರು ಇನ್ಮುಂದೆ ಸಂಸ್ಥೆಯ ಉದ್ಯಮ ಪರಿವರ್ತನೆ ಹಾಗೂ ಎಚ್ ಆರ್ ವಿಭಾಗದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಯೂನಿಲಿವರ್ ತಿಳಿಸಿದೆ. ನಿತಿನ್ ಪರಾಂಜಪೆ ಅವರು ಹಿಂದೂಸ್ಥಾನ್ ಯೂನಿಲಿವರ್ ಸಂಸ್ಥೆಯ ದಕ್ಷಿಣ ಏಷ್ಯಾ ವಿಭಾಗದ ಉಪಾಧ್ಯಕ್ಷರಾಗಿ 2008ರಿಂದ 2013ರವರೆಗೆ ಕಾರ್ಯ ನಿರ್ವಹಿಸಿದ್ದರು.
ಇನ್ನು ಬ್ಯೂಟಿ ಹಾಗೂ ಪರ್ಸನಲ್ ಕೇರ್ ವಿಭಾಗದ ಅಧ್ಯಕ್ಷರಾಗಿದ್ದ ಸನ್ನಿ ಜೈನ್ ಅವರು ಯೂನಿಲಿವರ್ ಸಂಸ್ಥೆಯನ್ನು ತೊರೆಯಲು ನಿರ್ಧರಿಸಿದ್ದು, ಅವರು ಟೆಕ್ನಾಲಜಿ ಮೆಗಾ ಟ್ರೆಂಡ್ಸ್‌ನ ಹೂಡಿಕೆ ನಿಧಿ ಸ್ಥಾಪಿಸಲು ನಿರ್ಧರಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಇನ್ನುಳಿದಂತೆ ಯೂನಿಲಿವರ್‌ನ ಕಾರ್ಯಕಾರಿ ತಂಡದಲ್ಲಿ ಇದ್ದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಂಸ್ಥೆ ತಿಳಿಸಿದೆ.
Read more…
[wpas_products keywords=”deal of the day”]