ಸಾರ್ವಜನಿಕ ವೇದಿಕೆಯ ಮೇಲೆ ಹಾಲಿವುಡ್ ನಟ ರಿಚರ್ಡ್ ಗೇರ್ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಮುತ್ತು ಕೊಟ್ಟ ಪ್ರಕರಣದಲ್ಲಿ ನಟಿ ಖುಲಾಸೆಯಾಗಿದ್ದಾರೆ.
15 ವರ್ಷಗಳ ಹಿಂದೆ ಶಿಲ್ಪಾ ಶೆಟ್ಟಿಗೆ ಮುತ್ತು ನೀಡಿದ ಪ್ರಕರಣ ರಾಷ್ಟ್ರಮಟ್ಟದ ಸುದ್ದಿಯಾಗಿತ್ತು. ಈ ಕುರಿತು ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿಯ ಸ್ಥಳೀಯ ನ್ಯಾಯಾಲಯಗಳಲ್ಲಿ ದೂರುಗಳು ದಾಖಲಾಗಿದ್ದವು. ದೇಶದ ವಿವಿಧ ಭಾಗಗಳಲ್ಲಿ ಶಿಲ್ಪಾ ಶೆಟ್ಟಿ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.
ಮುಂಬೈನ ಸ್ಥಳೀಯ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿತ್ತು. ಶಿಲ್ಪಾ ಶೆಟ್ಟಿ ವಿರುದ್ದ ಮಾಡಿರುವ ಆರೋಪಗಳು ಕೇವಲ ಹೇಳಿಕೆಗಳಾಗಿದ್ದು, ಅವು ತೃಪ್ತಿಕರವಾಗಿಲ್ಲ. ಹಾಗೇ ನಟಿ ಉದ್ದೇಶ ಪೂರ್ವಕವಾಗಿ ಈ ವರ್ತನೆ ಮಾಡಿಲ್ಲ ಎಂಬುದು ಸಾಕ್ಷಿಗಳಿಂದ ಸಾಬೀತಾಗಿರುವುದರಿಂದ ಅವರನ್ನು ಪ್ರಕರಣದಿಂದ ಖುಲಾಸೆ ಮಾಡಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
2007ರ ಏಪ್ರಿಲ್ 15ರಂದು ಹಾಲಿವುಡ್ ನಟ ರಿಚರ್ಡ್ ಗೇರ್ ಭಾರತಕ್ಕೆ ಬಂದಿದ್ದರು. ರಾಜಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ರಿಚರ್ಡ್ ಗೇರ್ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಸಹ ಭಾಗವಹಿಸಿದ್ದರು. ನಟ ಗೇರ್ ವೇದಿಕೆ ಮೇಲೆಯೇ ಶಿಲ್ಪಾ ಶೆಟ್ಟಿಯನ್ನು ಎಳೆದು ಮುತ್ತುಕೊಟ್ಟಿದ್ದರು. ಇದರಿಂದ ನಟಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರೂ ರಿಚರ್ಡ್ ಬಲವಂತವಾಗಿ ಮುತ್ತು ಕೊಟ್ಟಿದ್ದರು.
ಈ ಘಟನೆ ಖಂಡಿಸಿ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಬಂಧನ ವಾರೆಂಟ್ ಹೊರಡಿಸಲಾಗಿತ್ತು. ಇಬ್ಬರ ವಿರುದ್ಧ ದೂರುಗಳು ದಾಖಲಾಗಿದ್ದವು. ಈ ಮಧ್ಯೆ ಸುಪ್ರೀಂ ಕೋರ್ಟ್ ಶಿಲ್ಪಾ ಶೆಟ್ಟಿಗೆ ಜಾಮೀನು ನೀಡಿತ್ತು.
ಈ ಪ್ರಕರಣದ ವಿಚಾರಣೆಯು ರಾಜಸ್ಥಾನದಲ್ಲಿ ನಡೆಯುತ್ತಿತ್ತು. 2017ರಲ್ಲಿ ಶಿಲ್ಪಾ ಶೆಟ್ಟಿ ಮನವಿ ಮಾಡಿದ್ದರಿಂದ ವಿಚಾರಣೆಯನ್ನು ಮುಂಬೈಗೆ ವರ್ಗಾವಣೆ ಮಾಡಲಾಗಿತ್ತು. ಸದ್ಯ ಶಿಲ್ಪಾ ಶೆಟ್ಟಿಗೆ ಈ ಪ್ರಕರಣದಿಂದ ಬಿಗ್ ರಿಲೀಪ್ ಸಿಕ್ಕಿದೆ.
Read More…Source link
[wpas_products keywords=”deal of the day party wear for men wedding shirt”]